ರಿಪ್ಪನ್‌ಪೇಟೆ ; ಬೈಕಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 25.92 ಲೀ. ಮದ್ಯ ವಶ, ಆರೋಪಿ ಬಂಧನ

ರಿಪ್ಪನ್‌ಪೇಟೆ ; ಬೈಕಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 25.92 ಲೀ. ಮದ್ಯವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.

ವಿಧಾನಸಭಾ ಚುನಾವಣೆ ನೀತಿ ಸಮಿತಿ ಜಾರಿ ಹಿನ್ನೆಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಆಯುಕ್ತರು ಹಾಗೂ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ರವರ ನಿರ್ದೇಶನದಲ್ಲಿ ಹಾಗೂ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಹಾಗೂ ಅಬಕಾರಿ ಉಪ ಅಧೀಕ್ಷಕರು ಹೊಸನಗರ ಉಪವಿಭಾಗ ಹೊಸನಗರ ರವರ ಹಾಗೂ ಅಬಕಾರಿ ನಿರೀಕ್ಷಕರು ಹೊಸನಗರ ವಲಯ ಹೊಸನಗರ ರವರ ಮಾರ್ಗದರ್ಶನದಲ್ಲಿ ರಿಪ್ಪನ್‌ಪೇಟೆ – ಶಿವಮೊಗ್ಗ ಮುಖ್ಯ ರಸ್ತೆಯ ಸಿದ್ದಪ್ಪನಗುಡಿ ಕ್ರಾಸ್ ನಲ್ಲಿ ಶುಕ್ರವಾರ ರಸ್ತೆಗಾವಲು ನಡೆಸಿ ವಾಹನ ತಪಾಸಣೆ ಮಾಡುತ್ತಿರುವಾಗ ಹೀರೋ ಹೋಂಡಾ ಗ್ಲಾಮರ್ ದ್ವಿಚಕ್ರ ವಾಹನ (K A 15 L 4425)ದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ 25.92 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ದ್ವಿಚಕ್ರವಾಹನ ಸಮೇತ ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಶಪಡಿಸಿಕೊಂಡ 25.92 ಲೀಟರ್ ಮದ್ಯದ ಒಟ್ಟು ಮೌಲ್ಯ 10,117 ರೂ. ಹಾಗೂ ದ್ವಿಚಕ್ರ ವಾಹನದ ಮೌಲ್ಯ 60 ಸಾವಿರ ರೂ. ಆಗಿರುತ್ತದೆ.

ಈ ದಾಳಿಯಲ್ಲಿ ಸಂತೋಷ ರಡ್ಡೇರ ಅಬಕಾರಿ ಉಪ ನಿರೀಕ್ಷಕರು, ಕೆಂಪರಾಮ ಅಬಕಾರಿ ಮುಖ್ಯ ಪೇದೆ, ರಾಘವೇಂದ್ರ ಕೆ ಅಬಕಾರಿ ಪೇದೆ, ಪ್ರಕಾಶ ಎ ಎಂ ಅಬಕಾರಿ ಪೇದೆ ಮತ್ತು ವಾಹನ ಚಾಲಕ ಬಸವರಾಜ ರವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!