ರಿಪ್ಪನ್‌ಪೇಟೆ ; ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಅದ್ಧೂರಿ ಸ್ವಾಗತ

0 1

ರಿಪ್ಪನ್‌ಪೇಟೆ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ತೀರ್ಥಹಳ್ಳಿಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತೆರಳುತ್ತಿದ್ದಾಗ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರಿಂದ ಸಾರ್ವಜನಿಕರಿಂದ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.


ಕಾರ್ಯಕರ್ತರ ಮತ್ತು ಸಾರ್ವಜನಿಕರ ಸ್ವಾಗತ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪನವರು ಇದೇ ಸಂದರ್ಭದಲ್ಲಿ ಮಾಧ್ಯಮದ ಪ್ರತಿನಿಧಿ ಸಬಾಸ್ಟಿನ್ ಮಾಥ್ಯೂಸ್ ಮತ್ತು ಇತರರು ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಶಕ್ತಿ ಗ್ಯಾರಂಟಿ ಯೋಜನೆಯಡಿ ಬಸ್ ಬಿಡುವಂತೆ ಸಚಿವರಿಗೆ ಮನವಿ ಮಾಡಿಕೊಂಡ ಮೇರಗೆ ಸಚಿವರು ಸ್ಪಂದಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಬಸ್ ಓಡಿಸುವ ಭರವಸೆ ನೀಡುತ್ತಿದ್ದಂತೆ ಕಾರ್ಯನಿರತ ಪತ್ರಕರ್ತರಿಗೂ ರಾಜ್ಯ ವ್ಯಾಪಿ ಶಕ್ತಿ ಗ್ಯಾರಂಟಿ ಯೋಜನೊಯಡಿ ಉಚಿತ ಸೇವೆ ಕಲ್ಪಿಸುವಂತೆ ಮನವಿ ಮಾಡಲಾಯಿತು. ಅಲ್ಲದೆ ಶಿಕ್ಷಣ ಕ್ಷೇತ್ರದ ಹೊಸ ಅನುಭವವಾಗುತ್ತಿದ್ದು ಸಮರ್ಥವಾಗಿ ನಿರ್ವಹಿಸುವುದಾಗಿ ಹೇಳಿದರು.

ರಿಪ್ಪನ್‌ಪೇಟೆಯ ಜುಮ್ಮಾ ಮಸೀದಿ ಬಳಿ ಬಾರ್ ಅಂಡ್ ರೆಸ್ಟೋರೆಂಟ್‌ ಆರಂಭಿಸುತ್ತಾರೆಂಬ ಬಗ್ಗೆ ಸಾಕಷ್ಟು ಸಾರ್ವಜನಿಕರ ವಿರೋಧವಿದ್ದರೂ ಕೂಡಾ ಅಲ್ಲಿಯೇ ಆರಂಭಿಸಲು ಲೈಸೆನ್ಸ್ ನೀಡಿದ್ದಾರೆಂದು ಅಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ ಆರಂಭಿಸದಂತೆ ಜುಮ್ಮಾ ಮಸೀದಿಯವರು ಸಚಿವರಿಗೆ ಮನವಿ ಮೂಲಕ ಆಗ್ರಹಿಸಿದರು.

ಮಸೀದಿಯವರ ಮನವಿ ಸ್ವೀಕರಿಸಿ ಮಾತನಾಡಿ, ಆ ಸ್ಥಳದಲ್ಲಿ ಅಂಗಡಿ ಪ್ರಾರಂಭಿಸದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಕಾಂಗ್ರೆಸ್ ಮುಖಂಡರಾದ ಆಮ್ಮೀರ್‌ಹಂಜಾ, ಡಿ.ಈ.ಮಧುಸೂಧನ್, ಎಂ.ಎಂ.ಪರಮೇಶ, ಗಣಪತಿ ಗವಟೂರು, ಡಾಕಪ್ಪ ಬಾಳೂರು,‌ ಜಿ.ಆರ್.ಗೋಪಾಕೃಷ್ಣ, ಮಂಜುನಾಥ ಮಳವಳ್ಳಿ, ರಮೇಶ, ಶ್ರೀಧರ, ಕಲ್ಲೂರು ತೇಜಮೂರ್ತಿ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!