ರೈಲ್ವೆ ಗೇಟ್ ಬಳಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ !

0 5

ರಿಪ್ಪನ್‌ಪೇಟೆ : ಕೂಲಿ ಕಾರ್ಮಿಕ ಮಹಿಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಸಾಳು ರೈಲ್ವೆ ಗೇಟ್ ಬಳಿ ನಡೆದಿದೆ.

ಮಧ್ಯಪ್ರದೇಶದ ದಿಂಡೂರಿ ಜಿಲ್ಲೆಯ ಡಾನ್‌ಬಿಚೋಯ್‌ ಗ್ರಾಮದ ಊರ್ಮಿಳಾ ಬಾಯಿ (27) ಮೃತ ಮಹಿಳೆ. ರೈಲ್ವೆ ಹಳಿ ಪಕ್ಕದ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಊರ್ಮಿಳಾ ಬಾಯಿ ತನ್ನ ಪತಿಯೊಂದಿಗೆ ಬಂದಿದ್ದರು.

ಮದುವೆಯಾಗಿ ಏಳು ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಚಿಂತೆಯಲ್ಲಿ ಮದ್ಯವ್ಯಸನಿಯಾಗಿದ್ದರು. ಅತಿಯಾದ ಮದ್ಯ ವ್ಯಸನದಿಂದ ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತಳ ಪತಿ ದೂರಿನಲ್ಲಿ ತಿಳಿಸಿದ್ದಾರೆ. 

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!