ವಿಘ್ನೇಶ್ವರನಿಗೆ ವಿಶೇಷ ಪೂಜೆಯೊಂದಿಗೆ ದರ್ಶನಾರ್ಶೀವಾದ ಪಡೆದ ಹರತಾಳು ಹಾಲಪ್ಪ

0 0

ರಿಪ್ಪನ್‌ಪೇಟೆ: ಇಲ್ಲಿನ ಪುರಾಣ ಪ್ರಸಿದ್ದ ಸಿದ್ದಿವಿನಾಯಕ ಮತ್ತು ಅನ್ನಪೂರ್ಣೇಶ್ವರಿ ಅಮ್ಮನವರ 6ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಹರತಾಳು ಹಾಲಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಯಾವುದೇ ವಿಘ್ನಗಳು ಬಾರದೇ ನನ್ನ ಗೆಲುವು ಸುಲಲಿತವಾಗಲೆಂದು ವಿಘ್ನನಿವಾರಕನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದರ್ಶನಾರ್ಶೀವಾದ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಅಭಿವೃದ್ದಿ ವಿಚಾರದಲ್ಲಿ ನಾತ ಮತಯಾಚಿಸುತ್ತೇನೆ ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ವಿಧಾನಸೌಧದೊಳಗೆ ಮತ್ತು ಹೊರಗೆ ಪರಿಣಾಮಕಾರಿಯಾಗಿ ಧ್ವನಿ ಎತ್ತಿ ಚರ್ಚಿಸಲು ನನಗೆ ಈ ಬಾರಿಯಲ್ಲಿಯೂ ಆವಕಾಶ ಮಾಡಿಕೊಂಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಪಕ್ಷದ ಮುಖಂಡರಾದ
ಎನ್.ಸತೀಶ್, ಪಿ.ರಮೇಶ್, ಕೆ.ಬಿ.ಹೂವಪ್ಪ, ಮಂಜುಳಾ ಕಾತಾರ್ಜಿರಾವ್, ನಾಗರತ್ನ, ಸುಧೀಂದ್ರ ಪೂಜಾರಿ ಸುಂದರೇಶ್, ಅಲವಳ್ಳಿ ವೀರೇಶ್, ಸುರೇಶ್‌ಸಿಂಗ್, ರಾಮಚಂದ್ರ ಹರತಾಳು, ಕೃಷ್ಣೋಜಿರಾವ್, ದೇವರಾಜ್, ಮಂಜಪ್ಪ, ರಾಮು ಬಳೆಗಾರ ಪಕ್ಷದ ಹಲವು ಮುಖಂಡರು ಹಾಜರಿದ್ದರು.

Leave A Reply

Your email address will not be published.

error: Content is protected !!