ವಿಜೃಂಭಣೆಯೊಂದಿಗೆ ಜರುಗಿದ ಬ್ರಹ್ಮ ದೇವರ ಜಾತ್ರಾ ಮಹೋತ್ಸ

0 447

ರಿಪ್ಪನ್‌ಪೇಟೆ: ಸಮೀಪದ ಬರುವೆ (Baruve) ಬ್ರಹ್ಮದೇವರ (Brahma) ಜಾತ್ರಾ ಮಹೋತ್ಸವವು ಶ್ರದ್ದಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ದೀಪಾವಳಿ D(eepavali) ಹಬ್ಬ ಮುಗಿದು ಒಂದೇ ವಾರದಲ್ಲಿ ಬರುವ ಬರುವೆ ಗ್ರಾಮದ ಬ್ರಹ್ಮ ದೇವರ ಜಾತ್ರಾ (Fair) ಮಹೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವರು ತಣ್ಣೀರಿನಲ್ಲಿ ಮುಳುಗಿ ಬ್ರಹ್ಮ ದೇವರ ಗದ್ದುಗೆ ಎದುರಿನಲ್ಲಿ ನಿಂತು ಪ್ರಾರ್ಥಿಸಿಕೊಳ್ಳುವುದರೊಂದಿಗೆ ಮುಂದಿನ ವರ್ಷದ ಬ್ರಹ್ಮ ದೇವರ ಪೊಜೆಯ ಒಳಗೆ ತಾವು ಮಾಡಿಕೊಂಡ ಹರಿಕೆ ಈಡೇರಿಸುವಂತೆ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡರೇ ಹಲವರು ಕಳೆದ ವರ್ಷ ಮಾಡಿಕೊಂಡ ಹರಿಕೆ ಈಡೇರಿದೆ ಎಂದು ಹಣ್ಣು ಕಾಯಿಯೊಂದಿಗೆ ಭಕ್ತಿಯನ್ನು ಸಮರ್ಪಿಸಿದರು.

ಪೂಜೆಯ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆಯೊಂದಿಗೆ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ರಿಪ್ಪನ್‌ಪೇಟೆ ಸೇರಿದಂತೆ ದೂರದ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ಸೊರಬ, ಶಿಕಾರಿಪುರ ತಾಲ್ಲೂಕಿನ ಹಲವು ಗ್ರಾಮದ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿ ದೇವರ ದರ್ಶನಾಶೀರ್ವಾದ ಪಡೆದರು.

ಬರುವೆ, ದೊಡ್ಡಿನಕೊಪ್ಪ, ಮುಡುಬ, ಬೈರಾಪುರ, ಮಳವಳ್ಳಿ, ಕಾನುಗೋಡು, ಗವಟೂರು, ಬೆನವಳ್ಳಿ, ಹಾಲುಗುಡ್ಡೆ ಕಲ್ಮಕ್ಕಿ, ಲಕ್ಕವಳ್ಳಿ, ಕೆರೆಹಳ್ಳಿ ಹೀಗೆ ಸುತ್ತಮುತ್ತಲಿನ ಭಕ್ತ ಸಮೂಹ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!