ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆಯಲ್ಲಿ ರಿಪ್ಪನ್‌ಪೇಟೆ ಭಕ್ತ ಸಮೂಹ

0 4


ರಿಪ್ಪನ್‌ಪೇಟೆ: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ಶಿವಪೂಜಾನುಷ್ಟಾನ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಲೆನಾಡಿನ ಜಂಬಳ್ಳಿ, ಹುಗುಡಿ, ಕೊಳವಳ್ಳಿ, ಕಗ್ಗಲಿ, ಬೆಳಂದೂರು, ಬಣ್ಣಶೆಟ್ಟಿಕೊಪ್ಪ, ಶಂಕರಹಳ್ಳಿ, ದುಮ್ಮ, ಬ್ರಹ್ಮೇಶ್ವರ ಭಕ್ತರು ಪೂಜೆಯನ್ನು ಪಾಲ್ಗೊಂಡರು.

ಶ್ರಾವಣ ಮಾಸದಲ್ಲಿ ಶಿವನಾಮಸ್ಮರಣೆಯಿಂದಾಗಿ ಭಕ್ತರ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಮಳೆ ಬೆಳೆ ಸಂವೃದ್ದಿಯಾಗಿ ಶಾಂತಿ ಸಂವೃದ್ದಿ ಕರುಣಿಸುವಂತಾಗಲೆಂದು ಶ್ರೀ ಜಗದ್ಗರುಗಳು ಭಕ್ತ ಸಮೂಹಕ್ಕೆ ಹರಸಿದರು.

ಈ ಸಂದರ್ಭದಲ್ಲಿ ಜಂಬಳ್ಳಿ ಜೆ.ಎಂ.ಶಾಂತಕುಮಾರ್, ಹುಗುಡಿ ಎಂ.ವಿ.ರಾಜು, ಕಗ್ಗಲಿಯ ಗಿರೀಶ್‌ಪಾಟೀಲ್, ಕೊಳವಳ್ಳಿ ರಮೇಶಗೌಡ ಕೆ.ಬಿ, ಪತ್ರಕರ್ತ ಕೆ.ಎಂ.ಬಸವರಾಜ್‌ ರಿಪ್ಪನ್‌ಪೇಟೆ, ಹೊಸನಗರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಮ್ಮಾ ರೇವಣಪ್ಪಗೌಡ, ವಿನೋಧ ರೇವಣಪ್ಪಗೌಡ, ಅಖಿಲಭಾರತ ವೀರಶೈವ ಮಹಾಸಭಾದ ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಎಂ.ಚನ್ನಬಸಪ್ಪಗೌಡ, ಶಿರಾಳಕೊಪ್ಪ ವೀರೇಶಗೌಡ, ಚಿದಾನಂದ ಬೆಳಂದೂರು, ಸದಾನಂದ ಕಾರ್ಗಲ್, ಶಂಕರಹಳ್ಳಿ ಗಂಗಾಧರ, ಇನ್ನಿತರರು ಜಗದ್ಗುರುಗಳ ಇಷ್ಟಲಿಂಗ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!