ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಗ್ರಾಮ ಸರ್ವೆ ನಂಬರ್ 63/1ಬಿ ರಲ್ಲಿ 0-38 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಂಡು ಭೂಪರಿವರ್ತನೆಯ ಷರತ್ತು ಉಲ್ಲಂಘನೆ ಮಾಡಿಕೊಳ್ಳುವುದರೊಂದಿಗೆ ಆ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜಾಗದಲ್ಲಿ ಕಲ್ಯಾಣ ಮಂದಿರವನ್ನು (ಜ್ಯೋತಿ ಮಾಂಗಲ್ಯ ಮಂದಿರ) ನಿರ್ಮಿಸಿರುವುದನ್ನು ಪ್ರಶ್ನಿಸಿ ವಾಸುದೇವ ಎಂಬುವರು ಮೂಲಕ ಲೋಕಾಯುಕ್ತ ನ್ಯಾಯಾಲಯಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿ ಈ ದೂರಿನನ್ವಯ ಸಮಗ್ರ ತನಿಖೆ ನಡೆಸುವುದರೊಂದಿಗೆ ಭೂ ಪರಿವರ್ತನೆ ಅದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ನ್ಯಾಯಾಯದ ಆದೇಶದನ್ವಯ ಕಳೆದ ಐದಾರು ತಿಂಗಳ ಹಿಂದೆ ಸಾಗರ ಉಪವಿಭಾಗಾಧಿಕಾರಿ ನಾಗರಾಜ ಮತ್ತು ತಹಶೀಲ್ದಾರ್ ಮತ್ತು ಸಿಬ್ಬಂದಿವರ್ಗ ಅನಧಿಕೃತ ಕಲ್ಯಾಣ ಮಂದಿರದ ಸ್ಥಳಕ್ಕೆ ದಿಢೀರ್ ಭೇಟಿ ಪರಿಶೀಲನೆ ವರದಿ ಸಲ್ಲಿಸಲಾಗಿದ್ದು. ಆ ವರದಿಯನ್ನಾದರಿಸಿ 1 ರಿಂದ 19 ರವರಗೆ ವಸತಿ ನಿವೇಶನಗಳನ್ನು ಅಳವಡಿಸಿ ವಿನ್ಯಾಸವನ್ನು ತಯಾರಿಸಿ ನಕ್ಷೆಯನ್ನು ಅನುಮೊದಿಸಿಕೊಂಡಿದ್ದು ಈ ಪೈಕಿ ನಿವೇಶನ ಸಂಖ್ಯೆ 1 ಮತ್ತು 2 ಒಟ್ಟು 12.00X18-00 ಮೀಟರ್ ಸ್ವತಿನ ಪ್ರದೇಶದಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಷರತ್ತುಗಳನ್ನು ಉಲ್ಲಂಘಿಸಿ ಶೈಲಜಾ ಕೋಂ ನಾಗರಾಜರವರು ಅನಧೀಕೃತವಾಗಿ ವಾಣಿಜ್ಯ ಕಟ್ಟಡ ಅಂದರೆ ಕಲ್ಯಾಣ ಮಂದಿರ ನಿರ್ಮಾಣ ಮಾಡಿರುವುದು ಸಕ್ಷಮ ಪ್ರಾಧಿಕಾರಿಗಳ ವರದಿಯಿಂದ ದೃಢಪಟ್ಟಿರುತ್ತದೆ.
ಇದರಿಂದಾಗಿ ಭೂ ಮಾಲೀಕರು ಈ ಕಛೇರಿಯ ಭೂ ಪರಿವರ್ತನೆ ಆದೇಶದ ಷರತ್ತು ಕ್ರಮ ಸಂಖ್ಯೆ 02 ಮತ್ತು 09 ರಲ್ಲಿ ಅನ್ನು ಉಲ್ಲಂಘಿಸಿರುವುದುದರಿಂದ ಈ ಕಛೇರಿಯಿಂದ ಹೊರಡಿಸಿದ ಅಧಿಕೃತ ಜ್ಞಾಪನ ಪತ್ರ ಅದೇಶ ಸಂಖ್ಯೆ ALNSR/227/2009-10 ದಿನಾಂಕ;-12-07-2010 ರ ಭೂ ಪರಿವರ್ತನೆ ಆದೇಶವನ್ನು ರದ್ದುಪಡಿಸಿ ಜಿಲ್ಲಾಧಿಕಾರಿಗಳು ಆದೇಶಿದ್ದಾರೆ.
ಈ ಕಲ್ಯಾಣ ಮಂದಿರದ ಬಳಿ ಮೂಲ ಸೌಕರ್ಯದ ವ್ಯವಸ್ಥೆ ಸಹ ಸರಿಯಾಗಿ ಇಲ್ಲದಿರುವುದು ಮತ್ತು ಹಿಂದೆ ಸಾಗರ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ ದಿಢೀರ್ ಭೇಟಿ ನೀಡಿದ ಬಗ್ಗೆ ‘ಮಲ್ನಾಡ್ ಟೈಮ್ಸ್’ ಸಮಗ್ರ ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.