ಸಾಗರ ಕ್ಷೇತ್ರಕ್ಕೆ ಹೊಸಮುಖ ಪ್ರಶಾಂತನೋ ? ಹಳೆಮುಖ ಹರತಾಳು ಹಾಲಪ್ಪನವರೋ ? ‘ಅನ್ವೇಷಣೆಯಲ್ಲಿ ಬಿಜೆಪಿ’


ರಿಪ್ಪನ್‌ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೊಸಮುಖ ತರುವ ಬಗ್ಗೆ ಅನ್ವೇಷಣೆ ಆರಂಭವಾಗಿದೆ ಎಂದು ಮೂಲಗಳು ಹೇಳುತ್ತಿದ್ದು ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಪ್ರಶಾಂತ್ ಕೆ.ಎಸ್.ಇವರನ್ನು ಕಣಕ್ಕಿಳಿಸುವ ಮೂಲಕ ಹಾಲಿ ಶಾಸಕ ಹರತಾಳು ಹಾಲಪ್ಪ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಹೊರಟಿದ್ದಾರೆನ್ನಲಾಗುತ್ತಿದೆ.


ಸಾಗರ-ಹೊಸನಗರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಈಡಿಗ ಸಮುದಾಯದ ಮತದಾರರ ಪ್ರಾಬಲ್ಯವೇ ಹೆಚ್ಚಾಗಿದ್ದು ಇಲ್ಲಿ ಹಲವಾರು ಚುನಾವಣೆಯಲ್ಲಿ ಈಡಿಗ ಜನಾಂಗದ ಅಭ್ಯರ್ಥಿಗಳೆ ಜಯಭೇರಿ ಬಾರಿಸುತ್ತಿದ್ದು ಕಳೆದ ಭಾರಿ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಬಲಗೈ ಬಂಟ ಹರತಾಳು ಹಾಲಪ್ಪ ಕೊನೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾಗುತ್ತಾರೆಂಬ ಕಾರಣದಿಂದ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿ ಕೊನೆಗೆ ಯಡಿಯೂರಪ್ಪನರು ಟಿಕೆಟ್ ಘೋಷಿಸಿದ್ದು ಈಗಾಗಲೇ ಒಂದು ಕಾಲು ಹೊರಹಾಕಿರುವ ಹರತಾಳು ಹಾಲಪ್ಪ ಸೊರಬ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತವಾಗುತ್ತಿದ್ದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಈಡಿಗ ಸಮುದಾಯದ ಹೊಸಮುಖವನ್ನು ಪರಿಚಯಿಸುವ ಮೂಲಕ ಆಶ್ಚರ್ಯದ ಅಭ್ಯರ್ಥಿಯನ್ನು ಘೋಷಿಸುವ ಬಗ್ಗೆ ಈಗಾಗಲೇ ಬಿಜೆಪಿಯಲ್ಲಿ ತಾಲೀಮು ನಡೆಸುತ್ತಿದ್ದಾರೆನ್ನಲಾಗಿದೆ.


ಬ್ರಾಹ್ಮಣ ಮತ್ತು ಲಿಂಗಾಯಿತ ಸಮುದಾಯದವರಿಗೆ ಈ ಭಾರಿಯಲ್ಲಿ ಟಿಕೆಟ್ ನೀಡುವಂತೆ ಕೂಗು ಕೇಳಿ ಬರುತ್ತಿದ್ದು ಮಲೆನಾಡು ಪ್ರದೇಶಾಭಿವೃದ್ದಿ ಅಧ್ಯಕ್ಷ ಗುರುಮೂರ್ತಿ ನಿಸರಾಣಿ ಶ್ರೀಪಾದ ಹೆಗಡೆ ಇಲ್ಲವೇ ಲಿಂಗಾಯಿತ ಸಮುದಾಯದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೆಸರು ಮುನ್ನಲೆಗೆ ಬರುತ್ತಿದ್ದು ಒಟ್ಟಾರೆಯಾಗಿ ಈ ಕ್ಷೇತ್ರಗಳಲ್ಲಿ ಪ್ರಬಲ ಜನಾಂಗವಾಗಿರುವ ಈಡಿಗ ಸಮುದಾಯದ ಹೊಸಮುಖ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಸಂಸದ ದಿ|| ಕೆ.ಜಿ.ಶಿವಪ್ಪನವರ ಪುತ್ರ ಪ್ರಶಾಂತ್ ಹೆಸರು ಕೇಳಿ ಬರುತ್ತಿದ್ದು ಇದಕ್ಕೆ ಅರ್.ಎಸ್.ಎಸ್ ಹಸಿರು ನಿಶಾನೆ ತೋರಿಸುವುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.


ಒಂದು ಕಾಲದಲ್ಲಿ ಸಾಗರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದ್ದು ಕ್ರಾಂತಿರಂಗದಲ್ಲಿ ಬಿ.ಧರ್ಮಪ್ಪ ನಂತರ ಸಮಾಜವಾದಿ ಮತ್ತು ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ದಿ|| ಎಸ್.ಬಂಗಾರಪ್ಪನವರ ಪರಮಶಿಷ್ಯ ಬೇಳೂರು ಗೋಪಾಲಕೃಷ್ಣ ಎರಡು ಭಾರಿ ಗೆಲುವು ಸಾಧಿಸಿದ್ದು ನಂತರದಲ್ಲಿ ಹರತಾಳು ಹಾಲಪ್ಪ ಬಿಜೆಪಿಯಲ್ಲಿ ಗೆದ್ದು ಬೀಗುತ್ತಿದ್ದು ಈ ಭಾರಿ ಪುನಃ ತಮ್ಮ ಕ್ಷೇತ್ರ ಸೊರಬಕ್ಕೆ ಮರುಸ್ಪರ್ಧೆ ಮಾಡಲು ಹೊರಟಂತೆ ಕಾಣುತ್ತಿದ್ದು ಸಾಗರ-ಹೊಸನಗರ ಕ್ಷೇತ್ರದ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗುವಂತಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!