ಸಾಲ ಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ..!
ರಿಪ್ಪನ್‌ಪೇಟೆ: ಕೆನರಾ ಬ್ಯಾಂಕ್ ಮತ್ತು ಸಹಕಾರ ಸಂಘ ಹಾಗೂ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸುಮಾರು 8 ಲಕ್ಷ ರೂ. ಸಾಲ ಮಾಡಿ ತೀರುವಳಿ ಮಾಡಲಾಗದೆ ಮನನೊಂದು ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾದ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ನಡೆದಿದೆ.
ಅರಸಾಳು ಗ್ರಾಮದ ಸುರೇಶ (55) ಎಂದು ಗುರುತಿಸಲಾಗಿದ್ದು, ಮೃತನಿಗೆ ಪತ್ನಿ, ಓರ್ವ ಪುತ್ರ ಮತ್ತು ಹೆಣ್ಣು ಮಕ್ಕಳಿದ್ದಾರೆನ್ನಲಾಗಿದೆ.
ಕೆನರಾ ಬ್ಯಾಂಕ್ ಸಾಲಕ್ಕೆ ರೈತ ಸುರೇಶನಿಗೆ ನೋಟಿಸ್ ನೀಡಲಾಗಿದ್ದು ಇದರಿಂದಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಅರಸಾಳು ಕೆನರಾ ಬ್ಯಾಂಕ್ ಮತ್ತು ಕೃಷಿ ಸೇವಾ ಸಹಕಾರ ಬ್ಯಾಂಕ್ ಮತ್ತು ಕೋಣಂದೂರು ಸೆಂಟ್ ಮಿಲಾಗ್ರಿಸ್ ಬ್ಯಾಂಕ್‌ಗಳಲ್ಲಿ ಬೆಳೆಯ ಮೇಲೆ ಸಾಲ ಮಾಡಿದ್ದರು ಎಂದು ಹೇಳಲಾಗಿದೆ.
ಪತ್ನಿ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಸ್.ಪಿ.ಪ್ರವೀಣ್ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.