ಸೇನೆಯಲ್ಲಿದ್ದ ರಿಪ್ಪನ್‌ಪೇಟೆಯ ಯೋಧ ಸಾವು ! ಏನಾಯ್ತು ?

0 0

ರಿಪ್ಪನ್‌ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಟ್ಟಣದ ಶಬರೀಶ ನಗರದ ನಿವಾಸಿ ಯೋಧ ಸಂದೀಪ್ (27) ಅಸ್ಸಾಂನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಮಣಿಪುರದ ಅಸ್ಸಾಂ ರೈಫಲ್ಸ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತಿದ್ದ ಸಂದೀಪ್ ಅವರು ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ಹಿರಿಯಣ್ಣ ಅವರ ಪುತ್ರರಾಗಿದ್ದಾರೆ.

ಮಣಿಪುರದ ಇಂಫಾಲದಲ್ಲಿರುವ ಅಸ್ಸಾಂ ರೈಫಲ್ಸ್ ನ ಕಾಲಾ ಕ್ಯಾಂಪ್ ನಲ್ಲಿ ಸಂದೀಪ್ ಸೆಂಟ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಯಕ್ತಿಕ ಕಾರಣದಿಂದ ಇಂದು ಬೆಳಗ್ಗೆ ಗುಂಡು ಹಾರಿಸಿಕೊಂಡು ಸಂದೀಪ್ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಂತಾಪ :

ಸಂದೀಪ್ ರವರು ಮೃತ ಪಟ್ಟಿರುವ ವಿಷಯ ಅತೀವ ನೋವುಂಟು ಮಾಡಿದೆ. ಭಗವಂತ ಮೃತರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಿ, ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಹರತಾಳು ಹಾಲಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂದೀಪ್ ಅಕಾಲಿಕ ನಿಧನ ರಾಷ್ಟ್ರಕ್ಕೆ ನಷ್ಟ ಉಂಟಾಗಿದೆ. ಸಂದೀಪ್ ಅವರು ತಮಗೆ ಪರಿಚಿತರು. ಈಚೆಗೆ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಅವರನ್ನು ಸನ್ಮಾನಿಸಿದ್ದೆ. ಅವರು ನಿಧನರಾದ ವಿಚಾರ ತಿಳಿದು ನೋವುಂಟಾಗಿದೆ ಎಂದು ಸಂದೀಪ್ ನಿವಾಸಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದ್ದು ರಿಪ್ಪನ್‌ಪೇಟೆಯಲ್ಲಿ ನೀರವ ಮೌನ ಆವರಿಸಿದೆ.

Leave A Reply

Your email address will not be published.

error: Content is protected !!