ಹರತಾಳುವಿನಲ್ಲಿ ರಾಮನವಮಿ ಸಂಭ್ರಮ

0 1ರಿಪ್ಪನ್‌ಪೇಟೆ: ಸಮೀಪದ ಹರತಾಳು ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಮನವಮಿ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗೆ ಮತ್ತು ಶ್ರೀರಾಮ ದೇವರಿಗೆ ವಿಶೇಷ ಪೂಜೆಯು ಸಂಭ್ರಮ ಸಡಗರದೊಂದಿಗೆ ಸುಸಂಪನ್ನಗೊಂಡಿತು.


ಗುರುರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕರಾದ ಗುರುರಾಜ್ ಭಟ್‌ರವರು ಮಾತನಾಡಿ, ಶ್ರೀರಾಮನ ಕುರಿತು ಬಾಲ್ಯದಿಂದಲೇ ನಾವು ತಿಳಿಯುತ್ತಾ ಬೆಳೆಯುತ್ತೇವೆ. ರಾಮನ ಜೀವನದ ಪ್ರತಿಗಳಿಗೂ ಮಹತ್ವವಿದೆ ಮೌಲ್ಯಯುತವಾದ ಜೀವನ ಕ್ರಮವನ್ನು ಬೆಳಸಿಕೊಳ್ಳಲು ಶ್ರೀರಾಮನ ಜನ್ಮಜಾತಕ ಶ್ರೇಷ್ಟತೆಯಿಂದ ಕೂಡಿದ್ದು ಜಗತ್ತಿಗೇ ನಾಯಕನ ಸ್ಥಾನದಲ್ಲಿ ಕಾಣುತ್ತೇವೆ ಎಂದರು.


ಇದೇ ಸಂದರ್ಭದಲ್ಲಿ ಹೋಮ-ಹವನಗಳು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗದವು. ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

Leave A Reply

Your email address will not be published.

error: Content is protected !!