ರಿಪ್ಪನ್‌ಪೇಟೆ: ದಿ|| ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಟಾನ ಮತ್ತು ಮಲೆನಾಡು ಕಲಾ ತಂಡ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ‘ಹಳ್ಳಿ ಮಕ್ಕಳ ರಂಗ ಹಬ್ಬ 2023’ ಸಮಾರೋಪ ಸಮಾರಂಭವು ಭಾನುವಾರ ಏ.23 ರಂದು ಸಂಜೆ ಜರುಗಲಿದೆ ಎಂದು ಶಿಬಿರದ ನಿರ್ದೇಶಕ ಡಾ.ಗಣೇಶ ಕೆಂಚನಾಲ ತಿಳಿಸಿದರು.
ಈ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಿ ಆಶೀರ್ವಚನ ನೀಡುವರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಅನ್ವಿತಾ ಡಿ.ಎನ್.ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಶಿಬಿರದ ನಿರ್ದೇಶಕ ಡಾ.ಗಣೇಶ ಕೆಂಚನಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.