ಹಾಲಪ್ಪನಂತಹ ನೀಚ ವ್ಯಕ್ತಿತ್ವದ ವ್ಯಕ್ತಿ ನಾನಲ್ಲ ; ಕಾಗೋಡು ತಿಮ್ಮಪ್ಪ

0 9


ರಿಪ್ಪನ್‌ಪೇಟೆ: ರಾಜಕೀಯ ಮುತ್ಸದಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರು ನನಗೆ ಆಶೀರ್ವಾದ ಮಾಡಿ ಬಾಹ್ಯ ಬೆಂಬಲ ನೀಡಿದ್ದಾರೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರದು ಮೂರ್ಖತನದ ಪರಮಾವಧಿ ಎಂದು ಹೇಳಿ, ಅಂತಹ ಕೀಳು ಮಟ್ಟದ ವ್ಯಕ್ತಿತ್ವ ನನ್ನದಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀವ್ರವಾಗಿ ಖಂಡಿಸಿದರು.

ಹೆದ್ದಾರಿಪುರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲ ವ್ಯಕ್ತಪಡಿಸುತ್ತಿದ್ದು ಬಿಜೆಪಿಯವರು ಸುಳ್ಳು ಅಪಪ್ರಚಾರದಲ್ಲಿ ತೊಡಗಿಕೊಂಡು ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಜಗಂದ ದಳ ನಿಷೇಧದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾಂಗ ಬದ್ದವಾಗಿ ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಈ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದರು.

ತಮ್ಮ ಮಗಳು ಬಿಜೆಪಿ ಸೇರ್ಪಡೆ ವಿಚಾರದಲ್ಲಿ ತಮ್ಮದೊಂದಿಗೆ ಚರ್ಚಿಸಿದ್ದಾರೆಂದು ಹೇಳುತ್ತಿದ್ದಾರೆಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಮಾಜವಾದಿ ಸಿದ್ಧಾಂತದಿಂದ ಬೆಳದು ಬಂದತಂಹ ವ್ಯಕ್ತಿ ಈ ರೀತಿಯಲ್ಲಿ ನಾನು ಪಕ್ಷ ಸೇರುವುದಾಗಿ ಎಲ್ಲಿಯೂ ನನ್ನೊಂದಿಗೆ ಚರ್ಚಿಸಿಲ್ಲ ಮಕ್ಕಳು ಬೆಳದು ನಿಂತಮೇಲೆ ನಿರ್ಧಾರ ಅವರಿಗೆ ಬಿಟ್ಟವಿಚಾರವಾಗಿದೆ ಎಂದು ಈ ಬಾರಿ 100ಕ್ಕೆ 100 ರಷ್ಟು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಗೋಪಾಲಕೃಷ್ಣರಿಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆಂದು ಹೇಳಿದರು.

ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಬಿರುಸಾಗಿ ಪ್ರಚಾರ ಕೈಗೊಳ್ಳುತ್ತಿಲ್ಲ ಎಂದು ಹೇಳಿ, ಮತದಾರರು ಈ ಬಾರಿ ನನ್ನ ಅಳಿಯ ಗೋಪಾಲಕೃಷ್ಣರಿಗೆ ಬೆಂಬಲಿಸಿ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಭೋಜಪ್ಪ, ಬಂಡಿ ರಾಮಚಂದ್ರ, ವಾಸಪ್ಪಗೌಡ, ಕಲ್ಲೂರು ತೇಜಮೂರ್ತಿ, ಎನ್.ಚಂದ್ರೇಶ್, ಗಣೇಶ್‌ರಾವ್ ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!