ರಿಪ್ಪನ್‌ಪೇಟೆ ; ಕನ್ನಂಗಿ ಕುಟುಂಬದ ನಾಗಮ್ಮ (90) ಅವರು ಭಾನುವಾರ ಮಧ್ಯಾಹ್ನ ಲಿಂಗೈಕ್ಯರಾಗಿದ್ದಾರೆ.
ನಾಗಮ್ಮ ರವರು ಅಮೃತ ಗ್ರಾಪಂ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ಹುಗುಡಿ ವಾಸಿ ದಿವಂಗತ ಎಚ್.ಮಲ್ಲಿಕಾರ್ಜುನಯ್ಯ ಗೌಡ ಅವರ ಧರ್ಮಪತ್ನಿ ಆಗಿದ್ದು, ಎಚ್.ಮಲ್ಲಿಕಾರ್ಜುನಯ್ಯ ಗೌಡ ಅವರು ಹುಂಚ ಮಂಡಲ್ ಪ್ರಧಾನ ಆಗಿದ್ದರು ಹಾಗೂ ಹೊಸನಗರ ತಾಲೂಕು ಬೋರ್ಡ್ ಸದಸ್ಯರಾಗಿ ಉತ್ತಮವಾದ ಕಾರ್ಯ ನಿರ್ವಹಿಸಿದ್ದರು.
ಮೃತರು ಮೂವರು ಪುತ್ರರು, ಓರ್ವ ಪುತ್ರಿ, ಏಳು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಇಂದು ಹುಗಡಿಯ ಅವರ ಜಮೀನಿನಲ್ಲಿ ನಡೆಯಲಿದೆ.
ಹುಗುಡಿಯ ಎಚ್.ಎಂ.ಚಂದ್ರಕಾಂತ್ ಮತ್ತು ಸಹೋದರು, ಕನ್ನಂಗಿ ಬಾಂಡ್ಯ ವಂಶಸ್ಥರು, ಕಲ್ಲಳ್ಳಿ ಕುಟುಂಬ ವಂಶಸ್ಥರು ಮತ್ತು ಮಲ್ಲವ ಸಮಾಜ, ವೀರಶೈವ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಪದಾಧಿಕಾರಿಗಳು ಹಾಗೂ ಅಪಾರ ಬಂಧು-ಮಿತ್ರರು, ರೋಟರಿ ಕ್ಲಬ್ ಕೋಣಂದೂರು, ರಿಪ್ಪನ್‌ಪೇಟೆ ಅಧ್ಯಕ್ಷ, ಪದಾಧಿಕಾರಿಗಳು ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.