ಹೊಂಬುಜದಲ್ಲಿ ಶ್ರವಣಬೆಳಗೊಳದ ಅಗಲಿದ ಜಗದ್ಗುರುಗಳಿಗೆ
ಶ್ರದ್ಧಾಂಜಲಿಯ ನುಡಿನಮನಗಳು

0 12ರಿಪ್ಪನ್‌ಪೇಟೆ: ಆಧುನಿಕ ಬೆಳಗೊಳದ ಶಿಲ್ಪಿ, ಅತಿಶಯ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು (54) ಜನಸಮುದಾಯ ಹಾಗೂ ಶ್ರೀಮಠವನ್ನು ಮುನ್ನಡೆಸಿದ ಪ್ರಾತಃ ಸ್ಮರಣೀಯರು ಹಾಗೂ ಮಾರ್ಗದರ್ಶಕರೂ ಆಗಿದ್ದ ಅವರ ನೇತೃತ್ವವನ್ನು ಕಳೆದುಕೊಂಡ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೊಂಬುಜ ಜೈನ ಮಠಾಧೀಶ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

ಪೂಜ್ಯರು ತಮ್ಮ ಬಾಲ್ಯ ಜೀವನದ ವಿದ್ಯಾಭ್ಯಾಸವನ್ನು ಶ್ರೀಕ್ಷೇತ್ರ ಹೊಂಬುಜದ ಶ್ರೀಮಠದ ಗುರುಕುಲದಲ್ಲಿ ಮಾಡಿದ್ದರು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ನಮ್ಮ ಮಠದ ಪೀಠಾಧಿಕಾರಿಯಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದೀಕ್ಷಾ ಗುರುಗಳು ಸಹ. ಹೀಗೆ ಹಲವಾರು ಕ್ಷೇತ್ರಗಳಿಗೆ ತಮ್ಮ ಶಿಷ್ಯಂದಿರನ್ನು ತಯಾರು ಮಾಡಿ ಕೊಟ್ಟಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಹೊಂಬುಜ ಸಮಸ್ತ ಜೈನ ಸಮಾಜ ಬಾಂಧವರು, ಶ್ರೀಮಠದ ಸಿಬ್ಬಂದಿಗಳು ಹಾಗೂ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನಮ್ಮನೆಲ್ಲ ಅಗಲಿದ ಬೆಳಗೊಳದ ಬೆಳಕಾಗಿದ್ದ ದಿವ್ಯ ಚೇತನಕ್ಕೆ ನಮ್ಮೆಲ್ಲರ ಗೌರವ ಪೂರ್ವಕ ವಿನಯಾಂಜಲಿಯನ್ನು ಶ್ರೀ ಹೊಂಬುಜ ಜೈನ ಮಠದಲ್ಲಿ ಅರ್ಪಿಸಲಾಯಿತು.


ಈ ಸಂದರ್ಭದಲ್ಲಿ ಹೊಂಬುಜ ಜೈನ ಸಮಾಜದ ಶ್ರೀ ಜಿ. ಮಂಜಪ್ಪನವರು, ಶ್ರೀಮಠದ ಆಡಳಿತಾಧಿಕಾರಿ ಶ್ರೀ ಸಿ.ಡಿ. ಅಶೋಕ ಕುಮಾರ್‌ರವರು ಉಪಸ್ಥಿತರಿದ್ದರು.


ನಿಧನವಾರ್ತೆ :

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ಹುಗುಡಿ ನಾಗಮ್ಮ ಮಲ್ಲಿಕಾರ್ಜುನಪ್ಪಗೌಡ (85) ತಮ್ಮ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ನಿಧನ ಹೊಂದಿದರು.


ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave A Reply

Your email address will not be published.

error: Content is protected !!