ಉಚಿತ ಬಸ್ ಪ್ರಯಾಣ ಸೌಲಭ್ಯದಿಂದ ವಂಚಿತರಾದ ಶಿವಮೊಗ್ಗ ಜಿಲ್ಲೆಯ ಮಹಿಳೆಯರು

0 116

ರಿಪ್ಪನ್‌ಪೇಟೆ: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿ ಯೋಜನೆಯಡಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕಿನ ಮಹಿಳೆಯರಿಗೆ ಫ್ರಿ ಬಸ್ ಪ್ರಯಾಣ ಯೋಜನೆಯ ಸೌಲಭ್ಯದಿಂದ ವಂಚಿತರನ್ನಾಗಿಸಿದೆ.

ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬ, ಕುಂದಾಪುರ, ಮಂಗಳೂರು, ಉಡುಪಿ ರಾಜ್ಯ ಹೆದ್ದಾರಿ ಸಂಪರ್ಕದ ಹಲವು ತಾಲ್ಲೂಕಿನ ಖಾಸಗಿ ಬಸ್‌ಗಳಿಂದಾಗಿ ಸರ್ಕಾರಿ ಕೆಂಪು ಬಸ್ ಇಲ್ಲದೆ ರೈತ ಮಹಿಳೆಯರ ಮೂಗಿಗೆ ತುಪ್ಪ ಸವರಿದಂತಾಗಿ ಮಹಿಳೆಯರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುವಂತಾಗಿದೆ.


ಒಂದು, ಎರಡು ಸರ್ಕಾರಿ ಬಸ್‌ಗಳು ಬೆಂಗಳೂರು, ಮೈಸೂರು, ಶಿವಮೊಗ್ಗ, ಹೊಸನಗರ, ಕುಂದಾಪುರ, ಭಟ್ಕಳ ಮತ್ತು ಸಿಗಂದೂರು, ಕೊಲ್ಲೂರು ಹೀಗೆ ಓಡಾಡುತ್ತಿದ್ದು ದುರ್ಗಾಂಬ, ಶ್ರೀ ದುರ್ಗಾಂಬ ಮತ್ತು ಭಾಗ್ಯಲಕ್ಷ್ಮಿ, ರಾಜನಾಥ, ನವದುರ್ಗ, ಗಜಾನನ ಕಂಪನಿ ಹೀಗೆ ಹಲವು ಖಾಸಗಿ ಬಸ್ ಸಂಚರಿಸುತ್ತಿದ್ದು ಸರ್ಕಾರಿ ಬಸ್ ಇಲ್ಲದೆ ಇಲ್ಲಿನ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿ ಸೌಲಭ್ಯದಿಂದ ವಂಚಿರನ್ನಾಗಿಸಿದೆ.

ರಾಜ್ಯ ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಶಿವಮೊಗ್ಗ ಜಿಲ್ಲೆಯ ಹಲವು ತಾಲ್ಲೂಕು ಕೇಂದ್ರ ಮತ್ತು ಗ್ರಾಮಾಂತರ ಪ್ರದೇಶದ ರೈತ ಮಹಿಳೆಯರಿಗೆ ಬಸ್ ಸಂಚಾರದಲ್ಲಿ ವಂಚಿಸಿದಂತಾಗಿದ್ದು ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಶಿವಮೊಗ್ಗ ಜಿಲ್ಲೆ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾವೇರಿ ಜಿಲ್ಲೆಯ ಖಾಸಗಿ ಬಸ್ ಸಂಚಾರದಲ್ಲಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ವಿಸ್ತರಿಸಿ ಓಡಾಡಲು ಆವಕಾಶ ಕಲ್ಪಿಸುವಂತೆ ಸಾಕಷ್ಟು ಮಹಿಳೆಯರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರಕ್ಕೆ ಒತ್ತಡ ತರುವಂತೆ ಆಗ್ರಹಿಸಿದರು.

ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಂಬಿ ಮೋಸ ಹೋಗಿದ್ದಂತು ಸುಳ್ಳಲ್ಲ.

Leave A Reply

Your email address will not be published.

error: Content is protected !!