Categories: Ripponpete

ಉದ್ಘಾಟನೆಗೊಂಡು 3 ವರ್ಷ ಕಳೆದರೂ ಬಾಗಿಲು ತೆರೆಯದ ಸಮುದಾಯ ಶೌಚಾಲಯ !

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯತಿ ಪಕ್ಕದಲ್ಲಿ ಸುಮಾರು ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಕೂಡಾ ಸಾರ್ವಜನಿಕರಿಗೆ ಉಪಯೋಗಕ್ಕಿಲ್ಲದೆ ಬಾಗಿಲಿಗೆ ಬೀಗ ಹಾಕಿದನ್ನು ತೆರೆಯದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಕಳೆದ ಮೂರು ವರ್ಷಗಳ ಹಿಂದೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದ್ದು ಈವರೆಗೂ ಹಾಕಿದ ಬೀಗ ತೆರೆಯದೆ ಗ್ರಾಮಾಡಳಿತ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ.
ನಿತ್ಯ ಸುತ್ತಮುತ್ತಲಿನ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಹಾಗೂ ಪಕ್ಕದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಬರುವ ಮಹಿಳೆಯರು, ವೃದ್ದರು ಸೇರಿದಂತೆ ಬಸ್ ಪ್ರಯಾಣಿಕರು ಶೌಚಾಲಯದ ಪಕ್ಕದ ಬಸ್ ನಿಲ್ದಾಣದಲ್ಲಿ ಪರದಾಡುವ ಸ್ಥಿತಿ ಕಂಡು ಕಾಣದವರಂತೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.


ಇನ್ನಾದರೂ ಇಲ್ಲಿನ ಶೌಚಾಯಲದ ಬೀಗ ತೆರೆಯಲು ಕಾಲ ಕೂಡಿ ಬರುವುದೇ ಎಂಬ ಚಿಂತೆ ಸಾರ್ವಜನಿಕರಲ್ಲಿ ಕಾಡುವಂತಾಗಿದ್ದು ತಕ್ಷಣ ಸಂಬಂಧಪಟ್ಟ ಗ್ರಾಮಾಡಳಿತ ಎಚ್ಚೆತ್ತುಕೊಳ್ಳುವುದೇ ಕಾದು ನೋಡಬೇಕಾಗಿದೆ.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

4 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

7 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

8 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

13 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

14 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago