Categories: Ripponpete

ದೇವರಸಲಿಕೆ ; ಏಕಪವಿತ್ರ ನಾಗಮಂಡಲೋತ್ಸವ ಸುಸಂಪನ್ನ

ರಿಪ್ಪನ್‌ಪೇಟೆ: ದೇವರಸಲಿಕೆ ಗ್ರಾಮದ ಶ್ರೀ ಈಶ್ವರ ದೇವಸ್ಥಾನ ಸಮಿತಿಯರು ಆಯೋಜಿಸಲಾಗಿರುವ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯ ಭಕ್ತಜನ ಸಾಗರದಲ್ಲಿ ಶ್ರದ್ದಾಭಕ್ತಿಯಿಂದ ಸಂಭ್ರಮದೊಂದಿಗೆ ಸುಸಂಪನ್ನಗೊಂಡಿತು.

ದೇವರಸಲಿಕೆ ಕುಟುಂಬದವರ ಮೂಲ ನಾಗಬನ ಕೇಶವಗೌಡರ ಮನೆ ಹತ್ತಿರದಲ್ಲಿ ಮುಂಬಾರು ಗ್ರಾಮಸ್ಥರು ಸಹಯೋಗದಲ್ಲಿ ಆಯೋಜಿಸಲಾಗಿರುವ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ಶಂಕರನಾರಾಯಣದ ಪುರೋಹಿತರಾದ ಶ್ರೀ ಸೂರ್ಯನಾರಾಯಣ ಬಾಯರು ಮತ್ತು ಬಳಗ ಹರತಾಡಿ ಸುದರ್ಶನ ಭಟ್ ಅಂಪಾರು ಸರ್ವೋತ್ತಮವೈದ್ಯರು. ಪಾಕಶಾಸ್ತ್ರಜ್ಞರಾದ ಶಂಕರನಾರಾಯಣ ವಾದ್ಯ ವೃಂದ ಉಮೇಶ ದೇವಾಡಿಗ ಮತ್ತು ಬಳಗ ಸೌಡ ಇವರ ನೇತೃತ್ವದಲ್ಲಿ ಪಂಚಗವ್ಯ, ಶುದ್ದ ಪುಣ್ಯಾಹ ಸರ್ಪಸಂಸ್ಕಾರ ಅಂತ್ಯ ನವಗ್ರಹ ಯಾಗ ಬಿಂಬ ಶುದ್ದಿ ಅಧಿವಾಸ ಹೋಮ ನಾಗಶಿಲೆ ಪ್ರತಿಷ್ಠಾಪನೆ ಕಲಶಾಭಿಷೇಕ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಸಂಜೆ 6 ಗಂಟೆಯಿಂದ ಅಶ್ಲೇಷ ಬಲಿ ಮಂಡಲ ಮಂಟಪ ವಾಸ್ತು ಪೂಜಾ ಬಲಿ ಅಸ್ತçಹೋಮ ಪ್ರಾಕಾರ ಬಲಿ ಗಣೇಶ ಪೂಜಾ ಪುಣ್ಯಾಹ ಮಧುಪರ್ಕ ಪೂಜೆ ಪಂಪವಿಂಶತಿ ಕಲಶ ಸ್ಥಾಪನೆ ಆಯುತ ಸಂಖ್ಯಾತಿಲ ಹೋಮ ಪ್ರಾಯಶ್ಚಿತ ಪವಮಾನ ಹೋಮ ತತ್ವ ಹೋಮ ಪ್ರಧಾನ ಹೋಮ, ಉದ್ಯಾಪನಾ ಹೋಮ ವೇದ ಪಾರಾಯಣ ಗಾಯಿತ್ರಿ ಜಪ ಮೂಲಮಂತ್ರ ಜಪ ಕಲಶಾಭೀಷೇಕ ಮಹಾಪೂಜೆ ವಟು ಬ್ರಾಹ್ಮಣ ಸುಹಾಸನಿ ಕನ್ನಿಕಾ ಪೂಜಾ ದಂಪತಿ ಪೂಜಾ ಆಚಾರ್ಯ ಪೂಜಾ ಮಂಡಲಪೂಜೆ ಮಂಡಲೋತ್ಸವ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.


ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ನಾಗ ಮಂಡಲೋತ್ಸವ ಕಾರ್ಯಕ್ರಮದಿಂದ ಗ್ರಾಮದಲ್ಲಿ ಪಾಪಗಳು ಪರಿಹಾರವಾಗಿ ಪೂಜೆ ಮಾಡಿಸಿದ ಮತ್ತು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರೆ ಪುಣ್ಯ ಪ್ರಾಪ್ತಿಯಾಗುವುದು ಇಂತಹ ಧಾರ್ಮಿಕ ಪೂಜಾ ಕಾರ್ಯವನ್ನು ಮಲೆನಾಡಿನ ಕುಗ್ರಾಮದಲ್ಲಿ ಸಹಸ್ರಾರು ಭಕ್ತ ಸಮೂಹವನ್ನು ಸೇರಿಸಿ ಶ್ರದ್ದೆಯಿಂದ ನಿರ್ವಹಿಸಿದ ಜಾತಿ ಭೇದಭಾವನೆ ತೋರದೆ ದೇವರಸಲಿಕೆ ಕೇಶವ ಕುಟುಂಬ ವರ್ಗ ಹಾಗೂ ಸಹಕರಿಸಿದ ಗ್ರಾಮಸ್ಥರುಗಳ ಸೇವೆಕಾರ್ಯವನ್ನು ಶ್ರೀಗಳು ಪ್ರಶಂಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ತಾ.ಪಂ.ಮಾಜಿ ಅಧ್ಯಕ್ಷ ಬಿ.ಯುವರಾಜ್‌ಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಕಲ್ಯಾಣಪ್ಪಗೌಡ, ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ದುಮ್ಮ ರೇವಣ್ಣಪ್ಪಗೌಡ, ಈಶ್ವರಗೌಡರು ವಸವೆ, ಸುಧಾಕರ ಬೆನವಳ್ಳಿ ಇನ್ನಿತರ ರಾಜಕೀಯ ಮುಖಂಡರು ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿದರು.

Malnad Times

Recent Posts

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

21 mins ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

6 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

15 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 day ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

1 day ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

1 day ago