Categories: Ripponpete

ನಟ ‘ದರ್ಶನ್’ ದರ್ಶನಕ್ಕಾಗಿ ಹಗಲಿರುಳು ಪರಿತಪಿಸಿ ಖಿನ್ನತೆಗೊಳಗಾದ ‘ಮತ್ತಿಕೊಪ್ಪದ ಸುದೀಪ್’ !!

ರಿಪ್ಪನ್‌ಪೇಟೆ: ಚಿತ್ರ ನಟ ದರ್ಶನ್ ದರ್ಶನಕ್ಕಾಗಿ ಹಗಲಿರುಳು ಪರಿತಪಿಸುತ್ತಾ ಖಿನ್ನತೆಗೊಳಗಾದ ಅಭಿಮಾನಿ ಮಲೆನಾಡಿನ ಕುಗ್ರಾಮ ಮತ್ತಿಕೊಪ್ಪದ ಯುವಕ ಸುದೀಪ್.


ಚಿತ್ರ ನಟ ದರ್ಶನ್ ರವರ ಸಾರಥಿ, ಅರ್ಜುನ್ ಐಪಿಎಸ್, ನವಗ್ರಹ, ಸ್ವಾಮಿ ಹೀಗೆ ಅವರು ನಟಿಸಿರುವ ಹಲವು ಚಿತ್ರಗಳನ್ನು ನೋಡಿ ಆಕರ್ಷಿತನಾದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತ್ತಿಕೊಪ್ಪ ವಾಸಿ ಬಡಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವವರ 14 ವರ್ಷದ ದ್ವಿತೀಯ ಪುತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ ಚಿತ್ರನಟ ದರ್ಶನ್ ರವರ ಅಪ್ಪಟ ಅಭಿಮಾನಿಯಾಗಿ ದರ್ಶನ್ ನಟಿಸಿರುವ ಹಲವು ಚಿತ್ರಗಳನ್ನು ನೋಡುವುದರೊಂದಿಗೆ ಖಿನ್ನತೆಗೊಳ್ಳಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಹೀಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಮಾನಸಿಕ ರೋಗದ ಚಿಕಿತ್ಸೆ ಪಡೆಯುತ್ತಿರುವ ಈ ಯುವಕ ಅಭಿಮಾನಿ ನಟನ ದರ್ಶನಕ್ಕಾಗಿ ಮನೆ ಬಿಟ್ಟು ಬಟ್ಟೆ ಗಂಟು ಕಟ್ಟಿಕೊಂಡು ಬೆಂಗಳೂರಿನ ದರ್ಶನ್ ಮನೆಬಾಗಿಲಿಗೆ ಹೋದರೂ ದರ್ಶನ್ ನೋಡುವ ಭಾಗ್ಯ ದೊರಕುತ್ತಿಲ್ಲ ಎಂದು ತನ್ನ ಮನದಾಳದ ನೋವನ್ನು ಮಾಧ್ಯಮದವರ ಬಳಿ ಹಂಚಿಕೊಂಡಿದ್ದಾರೆ.

ತಂದೆ ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿರುವ 24 ವರ್ಷದ ಸುದೀಪ್ ಜೀವನದ ಯಶೋಗಾಥೆ ಹೇಗಿದೆ ಎಂದು ಮಾಧ್ಯಮದವರು ಇಂದು ಬೆಳಗ್ಗೆ ತಿಳಿಯುವ ತವಕದಲ್ಲಿ ಸುದೀಪ್ ನ ಅತ್ತೆ, ಮಾವನ ಮನೆ ಕುಬಟಹಳ್ಳಿಗೆ ತೆರಳಿ ಮಾತನಾಡಿಸಿದಾಗ, ನಾನು ಮನೆಯವರಿಗೂ ತಿಳಿಸದೇ ಓಡಿ ಬಂದು ಬೆಂಗಳೂರು ರೈಲು ಹತ್ತಿ ನಟ ದರ್ಶನ್ ರವರ ಬೆಂಗಳೂರು ಮನೆ ಹತ್ತಿರ ಹೋದರೆ ಅವರ ದರ್ಶನಕ್ಕೆ ವಾಚ್ ಮನ್ ಒಳ ಬಿಡದೇ ಗೇಟ್ ಬಳಿ ನಿಲ್ಲಿಸಿ ಅವರು ಊರಲ್ಲಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಆದರೂ ಬೆನ್ನತ್ತಿದ ಬೇತಾಳನಂತೆ ನಾನು ಮರಣ ಹೊಂದುವ ಮುನ್ನವೇ ನನಗೆ ದರ್ಶನ್ ನೋಡಬೇಕು ಎಂದು ಮನೆಯವರಿಗೆ ಒತ್ತಡ ಹಾಕುತ್ತಿದ್ದು ಅವನ ಆಸೆಗೆ ತಣ್ಣೀರು ಎರಚಬಾರದೆಂದು ಕೊನೆಗೆ ಬೇರೆ ಮಾರ್ಗವಿಲ್ಲದೆ ಇಂದು ಮಾಧ್ಯಮದವರ ಮೂಲಕ ದರ್ಶನ್ ದರ್ಶನಕ್ಕೆ ಅವಕಾಶ ಮಾಡಿಕೊಡುವರೆಂಬ ಆಶಾಭಾವನೆಯಿಂದ ಮಾಧ್ಯಮದವರ ಬಳಿ ತಮ್ಮ ಮಗನ ಬೇಡಿಕೆಯನ್ನ ಈಡೇರಿಸುವಲ್ಲಿ ಯಶಸ್ವಿಯಾಗುವರೆಂಬ ಆಶೋತ್ತರದಲ್ಲಿ ತಾಯಿ ತಾರಾ ಹಂಬಲಿಸಿದ್ದು ಹೀಗೆ.

ಒಟ್ಟಾರೆಯಾಗಿ ತನ್ನ ಮಗನ ಖಿನ್ನತೆಯನ್ನು ಪರಿಹರಿಸಲು ಚಿತ್ರನಟ ದರ್ಶನ್ ಮೊಬೈಲ್ ನಂಬರ್ ನೀಡಿದರೆ ಅದರ ಮೂಲಕ ನೇರವಾಗಿ ಮಾತನಾಡುವಂತಾಗಿ ಭೇಟಿಯ ದಿನವನ್ನು ತಿಳಿಸುವಂತಾಗಲಿ ಎಂಬುದೇ ತಾಯಿ ತಾರಾ ಮತ್ತು ಪೋಷಕವರ್ಗದ ಆಶಯವಾಗಿದೆ.

Malnad Times

Recent Posts

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

3 hours ago

ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೇರಲಿ ; ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ…

3 hours ago

ಹೃದಯಾಘಾತ ; ಮಮತಾ ನಿಧನ

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ ಮಮತಾ ಚಂದ್ರಶೇಖರ್ (43) ಶನಿವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು.…

4 hours ago

ಶ್ರೀಮನ್ಮಹಾರಥೋತ್ಸವ ಜಾತ್ರೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು…

4 hours ago

ಬಟಾಣಿಜಡ್ಡು ಗ್ರಾಮದಲ್ಲಿ ಭತ್ತದ ಬೆಳೆ ನಾಶಗೊಳಿಸಿದ ಕಾಡಾನೆಗಳು, ಆತಂಕದಲ್ಲಿ ರೈತರು

ರಿಪ್ಪನ್‌ಪೇಟೆ: ಕುಮದ್ವತಿ ನದಿ ತೀರದ ಬಟಾಣಿಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಎರಡು ಕಾಡಾನೆಗಳು ನುಗ್ಗಿ ಬೇಸಿಗೆ…

6 hours ago

ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಈಚಲುಕೊಪ್ಪ, ಕಾಪೇರಮನೆ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…

9 hours ago