ನಾಗರಹಳ್ಳಿಯಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ | ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಅತ್ಯವಶ್ಯ

0 40

ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಲಿರುವ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ಹಾಗೂ 06 ಲಕ್ಷ ರೂ. ವೆಚ್ಚದ ವ್ಯಾಯಾಮ ಶಾಲೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ನಂತರ ಮಾತನಾಡಿದ ಗ್ರಾಪಂ ಸದಸ್ಯ ರಾಘವೇಂದ್ರ ತೋಟದಕಟ್ಟು, ಶಿಕ್ಷಣ ಮತ್ತು ಆರೋಗ್ಯ ನಾಣ್ಯದ ಎರಡು ಮುಖಗಳು. ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಅತ್ಯವಶ್ಯ. ಸಣ್ಣ-ಪುಟ್ಟ ಖಾಯಿಲೆಗಳಿಗೆ ತಾಲೂಕಾ ಆಸ್ಪತ್ರೆಯನ್ನು ಅವಲಂಭಿಸಬಾರದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ನಮ್ಮ ಸರ್ಕಾರ ಶ್ರಮಿಸಬೇಕಾಗಿದೆ ಎಂದರು.

ನಾಗರಹಳ್ಳಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಮತ್ತು ವ್ಯಾಯಾಮ ಶಾಲೆ ಗ್ರಾಮದ ಜನ ಹಲವು ದಿನಗಳ ಕನಸಾಗಿತ್ತು ಈ ಹಿಂದೆ ಅನೇಕ ಬಾರಿ ಅನುದಾನ ಬಂದರೂ ಜಾಗದ ಸಮಸ್ಯೆಯಿಂದ ಲಕ್ಷಾಂತರ ರೂ ಹಣ ವಾಪಾಸು ಹೋಗುತಿತ್ತು ಆದರೆ ಈ ಬಾರಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರದಿಂದ ಕಾಮಗಾರಿ ಪ್ರಾರಂಭವಾಗಿರುವುದು ಸಂತಸದ ವಿಚಾರವಾಗಿದೆ ಎಂದರು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಸರೋಜ ನವೀನ್, ಶ್ರೀಧರ್, ಸುಮಂಗಳ ದೇವರಾಜ್, ಯಶಸ್ಪತಿ ವೃಷಭರಾಜ್ ಜೈನ್, ಪಿಡಿಓ ರಮೇಶ್, ಸತೀಶ್ ರಾವ್, ಕೇಶವ್ ಮೂರ್ತಿ, ಸುರೇಶ್ ಆರೋಗ್ಯ ಇಲಾಖೆಯ ಪವಿತ್ರಾ ಹಾಗೂ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!