ನೂತನ ಶಾಸಕರಿಗೆ ಎದುರಾಗಲಿರುವ ಹತ್ತು ಹಲವು ಸವಾಲುಗಳು….

0 51

ರಿಪ್ಪನ್‌ಪೇಟೆ: ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ರಿಪ್ಪನ್‌ಪೇಟೆ ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಿಬ್ಬಂದಿಗಳ ಮತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸುವುದು ಶಾಶ್ವತ ಸುಸಜ್ಜಿತ ಬಸ್ ನಿಲ್ದಾಣ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯಿತ್‌ನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನೂ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದು ನೂತನ ಶಾಸಕ ಗೋಪಾಲಕೃಷ್ಣ ಬೇಳೂರರಿಗೆ ಎದುರಾಗಲಿವೆ ಸವಾಲುಗಳು.

ಕಳೆದ 10 ವರ್ಷದ ಹಿಂದಿನ ಅವಧಿಯಲ್ಲಿ ಸಾಗರ-ಹೊಸನಗರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪನವರ ಬಿಜೆಪಿ ನೇತೃತ್ವದ ಪಕ್ಷದ ಶಾಸಕರಾವಧಿಯಲ್ಲಿ ಹೊಸನಗರ ತಾಲ್ಲೂಕು ಕೇಂದ್ರವನ್ನು ಮಾದರಿ ತಾಲ್ಲೂಕು ಕೇಂದ್ರವನ್ನಾಗಿಸುವ ಮಹದಾಸೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಅಗ್ನಿಶಾಮಕ ದಳದ ಕಛೇರಿ ಪಿಡಬ್ಲಡಿ ಕಛೇರಿ ಹೀಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಶ್ರಮಿಸಿದ ಅವರನ್ನು ಕ್ಷೇತ್ರದ ಜನರು ತಿರಸ್ಕರಿಸಿದ್ದರು ನಂತರದಲ್ಲಿ ಬಂದ ಜನಪ್ರತಿನಿಧಿಗಳು ಸಂಪರ್ಕ ರಸ್ತೆ ಇನ್ನಿತರ ಅಭಿವೃದ್ದಿಗೆ ಅನುದಾನವನ್ನು ತರುವುದರೊಂದಿಗೆ ಅಭಿವೃದ್ದಿಯ ಜಪಮಾಡಿ ರಿಪ್ಪನ್‌ಪೇಟೆ ಹೋಬಳಿಯನ್ನು ಕಡೆಗಣಿಸಿದಂತೆ ಕಾಣುವಂತೆ ಮಾಡಿದರು ಎಂಬುದಕ್ಕೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಅಧಿಕಾರ ಅವಧಿಯಲ್ಲಿ ಗವಟೂರು ಬಳಿ 5 ಎಕರೆ ಜಾಗವನ್ನು ಆಸ್ಪತ್ರೆಗೆ ಮಂಜೂರಾತಿ ಮಾಡಲಾದರು ಕೂಡಾ ಕಟ್ಟಡ ಕಾಮಗಾರಿಗೆ ನಂತರದಲ್ಲಿ ಬಂದ ಶಾಸಕರು ಗಮನಹರಿಸದಿರುವುದು ಮತದಾರರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದಂತಾಗಿದೆ.

ಇನ್ನೂ ಕೆರೆಹಳ್ಳಿಯಲ್ಲಿ ಕೈಗಾರಿಕಾ ವಸಾಹತು ಪ್ರದೇಶಕ್ಕಾಗಿ ಸಚಿವ ಕಾಗೋಡು ತಿಮ್ಮಪ್ಪನವರು ಪ್ರತ್ಯೇಕ ಜಾಗವನ್ನು ಮಂಜೂರು ಮಾಡಿಸಿ ರಸ್ತೆ ಮತ್ತು ನೀರಿನ ಸೌಲಭ್ಯ ಹೀಗೆ ಅಗತ್ಯವಾದ ಕೈಗಾರಿಕೆಗಳಿಗೆ ಜಾಗವನ್ನು ಮೀಸಲಿರಿಸಲಾದರೂ ಕೂಡಾ ಶಾಸಕರು ಗಮನಹರಿಸದೇ ನಿರ್ಲಕ್ಷ್ಯ ವಹಿಸಿದರು ಎಂದು ಹಲವರಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಇನ್ನೂ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಎರಡೂವರೆ ವರ್ಷದ ಅವಧಿಯ ಸರ್ಕಾರದಲ್ಲಿ ಇಲ್ಲಿನ ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ನಾಲ್ಕು ರಸ್ತೆಯ ತಲಾ ಒಂದು ಕಿ.ಮೀ ರಸ್ತೆಯನ್ನು ಡಬಲ್ ರಸ್ತೆಯನ್ನಾಗಿಸುತ್ತೇನೆಂದು ಹೇಳಿ ಈಗಾಗಲೇ ಕಾರವಾರ ಜಿಲ್ಲೆಯ ಸಂಪರ್ಕದ ಸಾಗರ ಸಂಪರ್ಕದ ಒಂದು ಕಿ.ಮೀ.ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿ ಮೂರು ತಿಂಗಳುಗಳಾದರು ಕೂಡಾ ಇನ್ನೂ ಆಮೆಗತಿಯಲ್ಲಿ ಕಾಮಗಾರಿ ಸಾಗುವಂತಾಗಿದ್ದು ಇನ್ನೂ ಮೂರು ಸಂಪರ್ಕ ರಸ್ತೆಗಳ ಕುರಿತು ಬಹಿರಂಗ ಸಭೆಯಲ್ಲಿ ಮುಂದಿನ ಬಾರಿ ನಾನೇ ಶಾಸಕನಾಗಿ ಬಂದು ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿ ಪಡಿಸುವುದಾಗಿ ಬಹಿರಂಗವಾಗಿ ಘೋಷಿಸಿದ್ದ ಹರತಾಳು ಹಾಲಪ್ಪ ಪರಾಭವಗೊಂಡ ಹಿನ್ನೆಲೆಯಲ್ಲಿ ಈ ಕಾಮಗಾರಿ ಅಲ್ಲಿಯೇ ಉಳಿಯುವುದೋ ಎಂಬ ಜಿಜ್ಞಾಸೆ ಮೂಡಿದ್ದು ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರರಿಗೆ ಸವಾಲಾಗಿವೆ. ಇದನ್ನು ಪೂರ್ಣಗೊಳಿಸುವತ್ತಾ ನೂತನ ಶಾಸಕರು ಸಮರ್ಥರಾಗಿ ನಿರ್ವಹಿಸುವರೇ ಕಾದು ನೋಡಬೇಕಾಗಿದೆ.

ಕಳೆದ ಎರಡು ಅವಧಿಯಲ್ಲಿ ಶಾಸಕರಾಗಿ ವಿಧಾನಸಭಾ ಶಾಸನ ಸಭೆಯಲ್ಲಿ ಮಾತನಾಡದವರು ಶಾಸಕರಾಗಿ ಕ್ಷೇತ್ರದ ಬಗ್ಗೆ ಮಾತನಾಡದವರು ಈಗ ಶಾಸಕರಾಗಿ ಆಯ್ಕೆಯಾಗಿ ಏನು ಮಾಡಿಯಾರು ಎಂದು ಬಹಿರಂಗವಾಗಿ ಹೇಳುತ್ತಿದ್ದವರಿಗೆ ಈ ಭಾರಿ ಪುನಃ ಆಯ್ಕೆಯಾಗಿರುವ ಗೋಪಾಲಕೃಷ್ಣ ಬೇಳೂರರಿಗೆ ಮಲೆನಾಡಿನ ಮೂಲಭೂತ ಸಮಸ್ಯೆಗಳಾದ ಶರಾವತಿ ಮುಳುಗಡೆ ರೈತರಿಗೆ ಭೂ ಮಂಜೂರಾತಿ ಮತ್ತು ಆರಣ್ಯ ಕಂದಾಯ ಭೂಮಿ ಅಕ್ರಮ ಸಾಗುವಳಿದಾರರಿಗೆ ಸಾಗುವಳಿ ಪತ್ರ ಕೊಡಿಸುವುದು ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ಕಲ್ಪಿಸುವುದರ ಬಗ್ಗೆ ನೂತನ ಶಾಸಕರು ಏನೂ ಮಾಡುತ್ತಾರೋ.

Leave A Reply

Your email address will not be published.

error: Content is protected !!