ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿಗಳನ್ನು ರಕ್ಷಿಸಿದ್ದು ಕಿಮ್ಮನೆ ; ಆರಗ ಜ್ಞಾನೇಂದ್ರ

0 110

ರಿಪ್ಪನ್‌ಪೇಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ಮೂರು ಬಾರಿ ಪಿಯುಸಿ ಪ್ರಶ್ನೆ ಸೋರಿಕೆ ಆಗಿದ್ದು ಈ ಹಗರಣದಲ್ಲಿನ ಆರೋಪಿಗಳನ್ನು ಬಂಧಿಸುವಲ್ಲಿ ಕಿಮ್ಮನೆ ರತ್ನಾಕರ್ ಏನು ಮಾಡಿದರೂ ಎಂಬುದು ರಾಜ್ಯದ ಜನರಿಗೆ ತಿಳಿದಿರುವ ವಿಷಯವಾಗಿದೆ ಅದೇ ನನ್ನ ಅವಧಿಯಲ್ಲಿ ಪಿಎಸ್‌ಐ ಹಗರಣದ ಆರೋಪಿಗಳು ನನ್ನ ಪರ ಪ್ರಚಾರ ನಡೆಸುತ್ತಿದ್ದಾರೆಂಬ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಈ ಹಗರಣದ ಆರೋಪಿಗಳೆಲ್ಲಾ ಈಗಾಗಲೇ ಜೈಲಿನಲ್ಲಿದ್ದಾರೆ. ಈ ವಿಷಯ ಅರಿಯದೇ ಸುಳ್ಳು ಆರೋಪ ಮಾಡಿ ಮತಗಿಟ್ಟಿಸಿಕೊಳ್ಳುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸಿಮರು ಎಂದು ರಾಜ್ಯ ಗೃಹ ಸಚಿವ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.

ಸಮೀಪದ ನಾಗರಹಳ್ಳಿ ಇತಿಹಾಸ ಪ್ರಸಿದ್ದ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾವರ್ಧಂತ್ಯುತ್ಸವ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದ್ದು ಕಳೆದ ಬಾರಿ 23 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದು ಈ ಬಾರಿ ಅದರ ಎರಡು ಪಟ್ಟು ನನಗೆ ಮತ ಬರುವುದರೊಂದಿಗೆ ಗೆಲುವು ನಿಶ್ಚಿತವಾಗಿದೆ. ನನ್ನ ಈ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಆಭಿವೃದ್ದಿಗಾಗಿ 3000 ಕೋಟಿ ರೂ. ಅನುದಾನವನ್ನು ತಂದಿರುವುದಾಗಿ ತಿಳಿಸಿ ಮೋದಿಜೀಯವರ ಆಶಯದಂತೆ ರಾಜ್ಯಕ್ಕೆ ಶುದ್ದಕುಡಿಯುವ ನೀರಿನ ಜಲಮಿಷನ್ ಯೋಜನೆಯಡಿ 9000 ಕೋಟಿ ರೂ. ಬಿಡುಗಡೆಯಾಗಿದ್ದು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವುದರೊಂದಿಗೆ ನೀರಿನ ಬವಣೆಯನ್ನು ದೂರ ಮಾಡಲಾಗಿದೆ ಎಂದರು.

ಹುಂಚ ವಿ.ಎಸ್.ಎಸ್.ಎನ್.ಅಧ್ಯಕ್ಷ ಯದುವೀರ್, ನಾಗರಾಜ ಅಮೃತ, ದೇವಸ್ಥಾನ ಸಮಿತಿಯವರು ಹಾಜರಿದ್ದರು.

Leave A Reply

Your email address will not be published.

error: Content is protected !!