ಫೆ.24 ರಂದು ಹೊಂಬುಜ ಕ್ಷೇತ್ರಕ್ಕೆ ಹೆಚ್‌ಡಿಕೆ ಭೇಟಿ ; ಹುಂಚದಕಟ್ಟೆಯಲ್ಲಿ ವಾಸ್ತವ್ಯ

0 36

ರಿಪ್ಪನ್‌ಪೇಟೆ : ಫೆ 23 ಮತ್ತು 24 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು ಫೆ.24 ರ ಶುಕ್ರವಾರ ಶ್ರೀ ಕ್ಷೇತ್ರ ಹೊಂಬುಜಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ.23 ರಂದು ಹುಂಚದಕಟ್ಟೆ ಗ್ರಾಮದಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ನಿಟ್ಟೂರು ನಾರಾಯಣ ಗುರು ಮಠಕ್ಕೆ ಭೇಟಿ ನೀಡಿ ನಂತರ ಹೊಂಬುಜ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದರು.

ಫೆ.23 ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಯಲಿದ್ದು ನಂತರ ಗಾಜನೂರು,‌ಸಕ್ರೆಬೈಲು ಮಾರ್ಗವಾಗಿ ಸಂಜೆ ಕೋಣಂದೂರು ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಯ ಸಭೆ ನಡೆಯಲಿದೆ ನಂತರ ಹುಂಚದಕಟ್ಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ತಾಲೂಕಿನ ಹುಂಚದಕಟ್ಟೆಯಿಂದ ಹೊರಟು ಹುಂಚ ಪದ್ಮಾವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಆರಗದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. 12:30 ರಿಂದ ತೀರ್ಥಹಳ್ಳಿಯಲ್ಲಿ ರೋಡ್ ಶೋ ನಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಟಿಎಪಿಎಂಎಸ್ ಹಾಲ್ ನಲ್ಲಿ ಸಾರ್ವಜನಿಕರ ಸಭೆ ನಡೆಯಲಿದೆ. ತೀರ್ಥಹಳ್ಳಿಯ ಭೀಮನ ಕಟ್ಟೆ ಮಠದ ಗುರುಗಳನ್ನ ಮಧ್ಯಾಹ್ನ 3 ಗಂಟೆಗೆ ಭೇಟಿಯಾಗಲಿದ್ದು ನಂತರ 4:30 ಕ್ಕೆ ಮೇಗರವಳ್ಳಿಯ ಎಲೆ ಚುಕ್ಕಿ ತೋಟದ ವೀಕ್ಷಣೆ ಮತ್ತು ಸಭೆ ನಡೆಸಲಿದ್ದಾರೆ. ಸಂಜೆ 5:00ಗೆ ಹೆಗ್ಗೋಡಿನಲ್ಲಿ ಸಭೆ ಹಾಗೂ ಆರು ಗಂಟೆಗೆ ಕಮ್ಮರಡಿಯಲ್ಲಿ ಸಭೆ ನಡೆದು ಶೃಂಗೇರಿಗೆ ಹೊರಡಲಿದ್ದಾರೆ.

ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಶಾರದಾ ಪೂರ್ಯಾನಾಯಕ್, ಎಂ ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್, ಜಿಲ್ಲಾ ಕಾರ್ಯದರ್ಶಿ ಜಿ ಎಸ್ ವರದರಾಜ್, ಮುಖಂಡರಾದ ಎಂ ಧರ್ಮಪ್ಪ ಸೇರಿದಂತೆ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!