ಬಿಜೆಪಿಗೆ ಮೇ 10 ರಂದು ಉತ್ತರ ನೀಡಲಿದ್ದೇವೆ ; ಆರ್.ಎಂ.ಎಂ

0 47

ರಿಪ್ಪನ್‌ಪೇಟೆ: ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಅಶಾಂತಿ ಅರಾಜಕತೆಯನ್ನು ಸೃಷ್ಟಿಸುವಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿರುವುದನ್ನು ಬಿಜೆಪಿ ಚುನಾವಣಾ ಪ್ರಚಾರದ ವಿಚಾರವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಮೇ 10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಉತ್ತರ ನೀಡಲಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

ರಿಪ್ಪನ್‌ಪೇಟೆಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮತ್ತು ಗ್ಯಾಸ್ ಹಾಗೂ ಇಂಧನ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಬದುಕು ದುಸ್ಥರವಾಗಿದೆ. ಗೊಬ್ಬರ ಬೆಲೆಯನ್ನು ಏಕಾಏಕಿ 6 ಪಟ್ಟು ಏರಿಸುವುದರೊಂದಿಗೆ 2014 ರಲ್ಲಿ ಪೊಟಾಸ್ ಗೊಬ್ಬರ ಬೆಲೆ 420 ರೂ. ಗಳಾಗಿದ್ದು ಈಗ 45 ಕೆ.ಜಿ ಚೀಲದ ಬೆಲೆ 2000 ರೂ. ಏರಿಸಿ 5 ಕೆ.ಜಿ. ಕಡಿತಗೊಳಿಸಿದ್ದಾರೆ. ಅಡಿಕೆ ಎಲೆ ಚುಕ್ಕೆರೋಗದಿಂದ ಸಾಕಷ್ಟು ರೈತರು ಕಂಗಲಾಗಿದ್ದರೂ ಕೂಡಾ ಕ್ಷೇತ್ರದ ಶಾಸಕರು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದರು.

ಇನ್ನೂ ಹೊರ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವುದರಿಂದಾಗಿ ನಮ್ಮ ರೈತರು ಬೆಳೆದ ಅಡಿಕೆ ಕೊಳ್ಳುವವರು ದರ ಕಡಿತಗೊಳಿಸುವರೆಂಬ ಭಯ ಕಾಡುವಂತಾಗಿದೆ ಕಾಂಗ್ರೆಸ್‌ನಲ್ಲಿರುವವರು ಸಹ ಧರ್ಮದ ಪರಿಪಾಲಕರೇ ಆಂಜನೇಯ, ಹನುಮಂತ ಇಬ್ಬರು ಒಂದೇ ಆಗಿದ್ದು ಇತ್ತೀಚೆಗೆ ರಾಹುಲ್‌ಗಾಂಧಿಯವರು ಮೀನು ಸೇವನೆ ಮಾಡಿದ್ದ ಕಾರಣ ದೇವಸ್ಥಾನಕ್ಕೆ ಹೋಗಲಿಲ್ಲ ಆದರೆ ಅದೇ ಸಿ.ಟಿ.ರವಿ ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿ ಬಂದರಲ್ಲ ಹಾಗಾದರೆ ನಮ್ಮ ಸಂಸ್ಕೃತಿ ಸಂಸ್ಕಾರ ಅರಿವು ಇಲ್ಲದ ಬಿಜೆಪಿಯವರಿಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಅಶಾಂತಿ ಅರಾಜಕತೆ ಸೃಷ್ಟಿಸುವ ಸಂಘಟನೆಗಳ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳುವುದರ ಬಗ್ಗೆ ಹೇಳಿರುವುದು ಕಂಡು ದುರುದ್ದೇಶದಿಂದ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆಂದು ಹೇಳಿ ಈ ಹಿಂದೆ ಬಂಗಾರಪ್ಪನವರು 1999 ರಲ್ಲಿನ ಚುನಾವಣೆಯಲ್ಲಿ ಬಂದಂತಹ ಫಲಿತಾಂಶ ಈ ಭಾರಿ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ರಾಮಚಂದ್ರ, ಎಂ.ಎಂ.ಪರಮೇಶ್, ರವೀಂದ್ರ ಕೆರೆಹಳ್ಳಿ ನರಸಿಂಹ ಕೆರೆಹಳ್ಳಿ, ಅಮ್ಮೀರ್‌ಹಂಜಾ, ಹರ್ಷ, ರಮೇಶ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!