ಬಿಸಿಯೂಟದ ಸಿಬ್ಬಂದಿ ಮತ್ತು ಶಿಕ್ಷಕರ ಬದಲಾವಣೆಗೆ ಆಗ್ರಹಿಸಿ ಪೋಷಕರಿಂದ ಬಿಇಒಗೆ ದೂರು

0 33

ರಿಪ್ಪನ್‌ಪೇಟೆ: ಹಿರೇಮೈಥೆ ಸರ್ಕಾರಿ ಹಿರಿಯ ಪ್ರಾಥಮಿಕ ಮಕ್ಕಳಿಗೆ ಬಿಸಿಯೂಟದ ವಿತರಣೆಯಲ್ಲಿ ತಾರತಮ್ಯ ಅನುಸರಿಸುತ್ತಿದ್ದಾರೆಂದು ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ದೂರಿ ತಕ್ಷಣ ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರನ್ನು ಬದಲಾಯಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಮುಖ್ಯ ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಮಕ್ಕಳಿಗೆ ಬಿಸಿಯೂಟ ಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಕೊಡುವ ಆಹಾರದಲ್ಲಿ ತಾರತಮ್ಯ ನೀತಿ ಅನುಸರಿಸಿದ್ದಾರೆ. ಈ ಬಗ್ಗೆ ಶಾಲಾಭಿವೃದ್ದಿ ಸಮಿತಿಯವರ ಸಾಕಷ್ಟು ಬಾರಿ ಮುಖ್ಯೋಪಾದ್ಯಾಯರ ಗಮನಕ್ಕೆ ತರಲಾಗಿದ್ದರೂ ಕೂಡಾ ಬಿಸಿಯೂಟದ ಅಡುಗೆ ಸಿಬ್ಬಂದಿ ವಿರುದ್ಧ ಮುಖ್ಯೋಪಾಧ್ಯಾಯರು ಸಾರ್ವಜನಿಕರಿಂದ ಮತ್ತು ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದು ತಿಳಿಹೇಳಲು ಹೋದರೆ ಶಿಕ್ಷಕರಿಗೆ ಬಾಯಿಗೆ ಬಂದಂತೆ ಬೈದು ನಿಂದಿಸುತ್ತಿರುವುದು ಶಿಕ್ಷಕರ ಮತ್ತು ಅಡುಗೆಯವರ ಮಧ್ಯೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳ ಮತ್ತು ಪೋಷಕರ ಎದುರೇ ಜಗಳವಾಡುತ್ತಿರುತ್ತಾರೆ.

ಈ ತಕ್ಷಣ ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರನ್ನು ಬದಲಾಯಿಸು ಮೂಲಕ ಶಾಲೆಯ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಮಕ್ಕಳಲ್ಲಿ ಮತ್ತು ಶಿಕ್ಷಕರ ಬಾಂಧವ್ಯವನ್ನು ಕಾಪಾಡುವಂತೆ ತಮ್ಮಲ್ಲಿ ಮನವಿ ಮಾಡುತ್ತೇವೆ. ಈಗಿರುವ ಬಿಸಿಯೂಟದ ಸಿಬ್ಬಂದಿಯನ್ನು ಮತ್ತು ಶಿಕ್ಷಕರನ್ನು ಬದಲಾಯಿಸದಿದ್ದರೆ ನಮ್ಮ ಶಾಲಾ ಮುಂಭಾಗ ಪ್ರತಿಭಟನೆಯನ್ನು ಸಹ ನಡೆಸಬೇಕಾಗುತ್ತದೆ ಬಿಇಒಗೆ ಬರೆದ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.

error: Content is protected !!