Categories: Ripponpete

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ಆಸ್ಪತ್ರೆಯ ಖರ್ಚಿಲ್ಲದೆ ಸೂಲಗಿತ್ತಿಯ ಕಾಟವಿಲ್ಲದ ಗರ್ಭಿಣಿಯರಿಗೆ ತಕ್ಷಣ ಹೆರಿಗೆ ಮಾಡಿಸುವ ರಸ್ತೆ ಇದು !!!

ರಿಪ್ಪನ್‌ಪೇಟೆ: ಆಸ್ಪತ್ರೆಯ ಖರ್ಚಿಲ್ಲ. ಸೂಲಗಿತ್ತಿಯ ಕಾಟವಿಲ್ಲ. ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಸಾಕು 24ನೇ ಮೈಲಿಕಲ್ಲಿನಿಂದ ಬೇಹಳ್ಳಿ ಹೋಗುವ ರಸ್ತೆಯಲ್ಲಿ ಹೋದರೆ ಸಾಕು ಹೆರಿಗೆ ಆಗುತ್ತದೆ. ಹೃದಾಯಾಘಾತಕ್ಕೊಳಗಾದವರು ಮಾತ್ರ ಅಸ್ಪತ್ರೆಗೆ ಹೋಗುವ ಮೊದಲೇ ಇಹಲೋಕಕ್ಕೆ ಬೇಗ ಹೋಗಲು ಸಾಕು ಈ ರಸ್ತೆ. ‘ಹ್ಯಾಗಿದೇ ನೋಡಿ ಸ್ವಾಮಿ ನಮ್ಮೂರ ರಸ್ತೆ’ ಎಂದು ಗ್ರಾಮಸ್ಥರುಗಳು ತಮ್ಮ ನೋವಯನ್ನು ಮಾಧ್ಯಮದವರಲ್ಲಿ ಹಂಚಿಕೊಂಡಿದ್ದು ಹೀಗೆ.

ಡಬಲ್ ಎಂಜಿನ್ ಸರ್ಕಾರವಿದ್ದಾಗ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ 3500 ಸಾವಿರ ಕೋಟಿ ರೂ. ಅನುದಾನವನ್ನು ತಂದಿರುವುದಾಗಿ ಬೀಗುವ ಮಾಜಿ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರರಿಗೆ ತಮ್ಮ ಸ್ವಕ್ಷೇತ್ರದಲ್ಲಿನ ಹುಂಚ ಹೋಬಳಿಯ ವ್ಯಾಪ್ತಿಯ ಮುಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಉಡುಪಿ – ಕುಂದಾಪುರ – ಭಟ್ಕಳ – ಬೈಂದೂರು – ಹೊಸನಗರ – ರಿಪ್ಪನ್‌ಪೇಟೆ – ಆಯನೂರು – ಶಿವಮೊಗ್ಗ ಸಂಪರ್ಕದಲ್ಲಿ ಬರುವ ಕೋಡೂರು ಸಮೀಪದ 24ನೇ ಮೈಲಿಕಲ್ಲಿನಿಂದ ಬಡಗೋಡು, ಬೇಹಳ್ಳಿ, ದೇವರಸಲಿಕೆ, ಬಂದಗಳಲೇ, ದಿಬ್ಬಣಗಲು, ವಸವೆ, ಜಯನಗರ ಲಿಂಕ್ ರಸ್ತೆಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳ ಗಮನಸೆ ಳಯಲಾದರೂ ಕೂಡಾ ಪ್ರಯೋಜನವಾಗದೇ ನಿರ್ಲಕ್ಷ್ಯ ವಹಿಸಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ರಾಜ್ಯ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ನಂತರ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿನ ದುಸ್ಥಿತಿ ಕಂಡರು ಕಾಣದವರಂತಾಗಿದ್ದು ಈ ಭಾಗದಲ್ಲಿ ಕಡಿಮೆ ಮತ ಬಂದವು ಎಂಬ ಕಾರಣಕ್ಕೋ? ಇಬ್ಬರು ರಾಜಕೀಯ ಮುಖಂಡರುಗಳ ಉದ್ದೇಶದಿಂದಲೋ ? ಏನೋ ಅಭಿವೃದ್ದಿಯಲ್ಲಿ ನಿರ್ಲಕ್ಷ್ಯಕ್ಕೆ ಸಾಕ್ಷಿಕರಿಸುವಂತಾಗಿ, ಅಂಗನವಾಡಿ, ಎಲ್.ಕೆ.ಜಿ., ಯು.ಕೆ.ಜಿ ಹೀಗೆ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಅನಾರೋಗ್ಯ ಪೀಡಿತರು ವೃದ್ದರು ಗರ್ಭಿಣಿಯರು, ಹೃದಯಾಘಾತಕ್ಕೊಳಗಾದವರು, ತುರ್ತು ಚಿಕಿತ್ಸೆಗಾಗಿ ಈ ರಸ್ತೆಯಲ್ಲಿ ಬಂದರೆ ಇಹಲೋಕ ಸೇರುವುದು ಗ್ಯಾರಂಟಿ. ಹೆರಿಗೆ ಬೇನೆ ಕಾಣಿಸಿಕೊಂಡವರನ್ನು ಕರೆತಂದರೆ ರಸ್ತೆಯಲ್ಲಿ ಸುಲಭವಾಗಿ ಖರ್ಚಿಲ್ಲದೆ ಹೆರಿಗೆಯೂ ಆಗುತ್ತದೆ ಎಂದು ಗ್ರಾಮಸ್ಥರಾದ ಚಿನ್ನಪ್ಪ, ಬಂಗಾರಪ್ಪ, ದುಗ್ಗಪ್ಪ, ಅಣ್ಣಪ್ಪಪೂಜಾರಿ, ಕೋಳೂರು ಚಂದ್ರಪ್ಪ, ಸುಶೀಲಮ್ಮ, ಶೋಭಾ, ರವೀಂದ್ರ, ನಿರ್ಮಲ, ಲಿಂಗಯ್ಯ, ಕಿರಣ್, ಈಶ್ವರಪ್ಪಗೌಡ ಮಾಧ್ಯಮದವರ ಬಳಿ ತಮ್ಮ ಅಸಮದಾನವನ್ನು ಹಂಚಿಕೊಂಡರು.

ಪ್ರಧಾನಿಗೆ ಬರೆದ ಪತ್ರ.

ಈ ಸಂಪರ್ಕ ರಸ್ತೆಯ ಮಧ್ಯದಲ್ಲಿ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರರು ಈ ಗ್ರಾಮಗಳ ಮತದಾರರ ಬಹುವರ್ಷದ ಬೇಡಿಕೆಯನ್ನಾದರಿಸಿ ಸಂಪರ್ಕ ಸೇತುವೆ ನಿರ್ಮಿಸಲಾಗಿದ್ದು ಉಳಿದಂತೆ ಸುಮಾರು 5 ರಿಂದ ಆರೇಳು ಕಿ.ಮೀ.ದೂರದ ಈ ರಸ್ತೆಗೆ ಸರ್ಕಾರದಿಂದ ನಯಾಪೈಸೆ ಬಿಡುಗಡೆ ಮಾಡಿಸಿಲ್ಲ ಎಂದರು.

ಶಾಲಾ-ಕಾಲೇಜ್‌ಗಳು ಪ್ರಾರಂಭವಾಗುತ್ತಿದ್ದು ಇಂತಹ ಕಲ್ಲು, ಮಣ್ಣಿನ ಈ ನಾದುರಸ್ಥ್ ಕಿರಿದಾದ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಮಳೆಗಾಲದಲ್ಲಿ ಕಳುಹಿವುದು ಹೇಗೆ ಎಂಬ ಆತಂಕ ಕಾಡುವಂತಾಗಿದೆ ಎಂದು ಈ ಗ್ರಾಮದ ವಿದ್ಯಾವಂತ ಯುವಕ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರಿಗೂ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಯ ಕುರಿತು ಸವಿಸ್ತಾರವಾದ ಗಮನ ಸೆಳೆಯುವಂತಹ ಮನವಿ ಪತ್ರವನ್ನು ಕಳುಹಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Malnad Times

Recent Posts

ಕಾಡಾನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ ಬಿವೈಆರ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ರಿಪ್ಪನ್‌ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿದ್ದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ…

1 hour ago

Shivamogga | ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ ‘ಮ್ಯಾರಾಥಾನ್’

ಶಿವಮೊಗ್ಗ : ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ…

2 hours ago

ಮಲೆನಾಡಿನಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ, ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಆನೆ ದಾಳಿಗೆ ಬಲಿ !

ಮುಂದುವರೆದ ಕಾಡಾನೆಗಳ ಹಾವಳಿ, ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಆನೆ ದಾಳಿಗೆ ಬಲಿ ! ಚಿಕ್ಕಮಗಳೂರು : ತೋಟದ ಕೆಲಸಕ್ಕೆ…

4 hours ago

Rain Alert | ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಮೇ 7ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ…

6 hours ago

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು !

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು ! ಕಳಸ : ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ…

8 hours ago

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

17 hours ago