ರಿಪ್ಪನ್‌ಪೇಟೆಯಲ್ಲಿ KRS ಪಕ್ಷದ ಪ್ರಚಾರ ವೇಳೆ ಚುನಾವಣಾ ವೀಕ್ಷಕ ದಳದ ಅಧಿಕಾರಿ ತಬ್ಬಿಬ್ಬಾಗಿದ್ದು ಯಾಕೆ ಗೊತ್ತಾ ?

0 36

ರಿಪ್ಪನ್‌ಪೇಟೆ: ಸತ್ಯ ನ್ಯಾಯ ನಿಷ್ಟೆಯ ತತ್ವದಡಿಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ನಮ್ಮ ಕೆ.ಆರ್.ಎಸ್.ಪಕ್ಷ ಈ ಬಾರಿಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ವ್ಯಾಪ್ತಿಯಲ್ಲಿ 190 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ನಮ್ಮ ಪಕ್ಷದ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೆ.ಆರ್.ಎಸ್.ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಹೆಚ್.ಲಿಂಗೇಗೌಡ ಹೇಳಿದರು.

ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಪಕ್ಷದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಬ್ಬಿ ಕಿರಣ್ ಬಿ.ಈ. ಪರ ಮತಯಾಚನೆಯೊಂದಿಗೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ನಮ್ಮ ಪಕ್ಷದ ಧ್ಯೇಯ ಧೋರಣೆಗಳಲ್ಲಿ ಸತ್ಯ ನ್ಯಾಯ ನಿಷ್ಟೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು ಸರ್ಕಾರಿ ಕಛೇರಿಗಳಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವುದರ ಬಗ್ಗೆ ಸಾಕಷ್ಟು ಕ್ರಮ ಜರುಗಿಸಲಾಗಿರುವ ಏಕೈಕ ಪಕ್ಷ ಎಂದರೆ ಅದು ಕೆ.ಆರ್.ಎಸ್.ಪಕ್ಷದ ಎಂದು ಹೇಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚುನಾವಣಾ ವೀಕ್ಷಕ ದಳದವರು ಬಹಿರಂಗಸಭೆಗೆ ಅನುಮತಿ ಪಡೆದಿಲ್ಲ ಇಳಿಯಪ್ಪಾ ಎಂದು ಏಕವಚನದಲ್ಲಿ ತಮ್ಮ ಹತ್ತಿರ ಕರೆದರು ಆಗ ಸಿಡಿಮಿಡಿಗೊಂಡ ಕೆ.ಆರ್.ಎಸ್.ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಹೆಚ್.ಲಿಂಗೇಗೌಡ ನನಗೆ ರಾಜ್ಯ ವ್ಯಾಪ್ತಿಯಲ್ಲಿ ಓಡಾಡಲು ಸಂಪೂರ್ಣವಾಗಿ ಚುನಾವಣಾ ಆಯೋಗವೇ ಅನುಮತಿ ನೀಡಿರುವಾಗ ಅದರ ಅಗತ್ಯತೆ ಕಾಣುವುದಿಲ್ಲ ಏಕವಚನದಲ್ಲಿ ಯಾವುದಾದರೂ ರಾಷ್ಟ್ರೀಯ ಪಕ್ಷದ ನಾಯಕರನ್ನು ಹೀಗೆ ಅಸಭ್ಯವಾಗಿ ಕರೆಯುತ್ತಿರಾ ಎಂದು ತರಾಟೆಗೆ ತಗೆದುಕೊಳ್ಳುತ್ತಿದ್ದಂತೆ ಅಧಿಕಾರಿ ತಬ್ಬಿಬ್ಬಾದರು. ಆಗ ರಾಜ್ಯ ಉಪಾಧ್ಯಕ್ಷ ಎಸ್.ಹೆಚ್.ಲಿಂಗೇಗೌಡ ನಿಮ್ಮಂತಹ ಅಧಿಕಾರಿಗಳಿರುವಾಗ ಹೀಗೆಲ್ಲ ಆಗುವುದು ಎಂದು ಹೇಳಿ ಭಾಷಣ ಮುಂದುವರಿಸಿ ಅಭ್ಯರ್ಥಿಯ ಪರ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆ.ಆರ್.ಎಸ್.ಪಕ್ಷದ ಅಭ್ಯರ್ಥಿ ಅಬ್ಬಿ ಕಿರಣ ಬಿ.ಇ., ಕೆ.ಆರ್.ಎಸ್.ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave A Reply

Your email address will not be published.

error: Content is protected !!