ರಿಪ್ಪನ್‌ಪೇಟೆ ನವೋದಯ ವಿವಿದ್ದೋದ್ದೇಶ ಸೌಹಾರ್ದ ಬ್ಯಾಂಕ್ ಮಾನೇಜರ್ ವಿರುದ್ಧ ಠಾಣೆಗೆ ದೂರು

0 42


ರಿಪ್ಪನ್‌ಪೇಟೆ: ಇಲ್ಲಿನ ನವೋದಯ ವಿವಿದ್ದೋದ್ದೇಶ ಸೌಹಾರ್ದ ಬ್ಯಾಂಕಿನ ಈ ಹಿಂದಿನ ಮಾನೇಜರ್ ಮಿಥುನ್ ವಿರುದ್ದ ಬಟ್ಟೆಮಲ್ಲಪ್ಪ ನಿವಾಸಿ ಮಂಜುನಾಥ ಬ್ಯಾಣದ ಪೊಲೀಸ್ ಠಾಣೆಯಲ್ಲಿ ದಾಖಲಾತಿ ದುರುಪಯೋಗದ ವಿರುದ್ದ ದೂರು ದಾಖಲಿಸಿದ್ದಾರೆ.


ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಮಂಜುನಾಥ ಬ್ಯಾಣದ ನವೋದಯ ವಿವಿದ್ದೋದ್ದೇಶ ಸೌಹಾರ್ದ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಒಂದು ಲಕ್ಷ ರೂ. ಠೇವಣಿ ಇಟ್ಟು ತಮ್ಮ ಓಡಿ ಖಾತೆಯಲ್ಲಿ 1.5 ಲಕ್ಷ ರೂ. ಸಾಲ ಪಡೆದಿದ್ದರು. 2017 ರಲ್ಲಿ ಸಾಲ ಪಡೆದ ಬ್ಯಾಣದರವರು ಕೊರೋನಾ ವೇಳೆ ಸಾಲ ತೀರಿಸಲು ಕಷ್ಟವಾಗಿತ್ತು. ಹಿಂದಿನ ಮ್ಯಾನೇಜರ್‌ರವರು ಚೆಕ್ ಮತ್ತು ಬರೆದು ಕೊಟ್ಟಿದ್ದ ಪತ್ರಗಳನ್ನ ದುರುಪಯೋಗ ಪಡಿಸಿಕೊಂಡು ಅವರ ಓಡಿ ಸಾಲವನ್ನು 2.5 ಲಕ್ಷ ರೂ. ಗೆ ಹೆಚ್ಚಿಸಿದ್ದು ಇವರ ದಾಖಲಾತಿಗಳನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ಬ್ಯಾಣದ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.


ಸಾಲ ಪಡೆಯುವಾಗ ಬ್ಯಾಂಕ್‌ನಲ್ಲಿಟ್ಟಿದ್ದ ದಾಖಲಾತಿಯನ್ನು ವಾಪಾಸ್ಸು ಕೇಳಿದರೆ ಈಗಿನ ಮ್ಯಾನೇಜರ್ ಕೊಡುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿದ್ದ ಇವರ ಪತ್ನಿ ಹೆಸರಿನಲ್ಲಿರುವ ಚೆಕ್‌ಬೌನ್ಸ್ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಿಲಾಗಿದೆ.


ನಿಧನ ವಾರ್ತೆ

ರಿಪ್ಪನ್‌ಪೇಟೆ : ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದಳ್ಳಿ ವಾಸಿ ಸಣ್ಣಚಂದಳ್ಳಿ ನಾಗರಾಜಪ್ಪ (85) ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತ ನಾಗರಾಜಪ್ಪ


ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ನಾಲ್ಕು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಆಂತ್ಯಕ್ರಿಯೆಯು ಚಂದಳ್ಳಿಯ ಅವರ ಜಮೀನಿಲ್ಲಿ ಗಂಗಾಮತಸ್ಥರ ಸಂಪ್ರದಾಯದಂತೆ ಜರುಗಿತು. ಕುಟುಂಬ ಮೂಲಗಳು ತಿಳಿಸಿದೆ.ಶದಗ

Leave A Reply

Your email address will not be published.

error: Content is protected !!