Categories: Ripponpete

ರಿಪ್ಪನ್‌ಪೇಟೆ ; ಸರ್ಕಾರಿ ಶಾಲೆಯ ಶಿಕ್ಷಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು


ರಿಪ್ಪನ್‌ಪೇಟೆ: ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕನೊಬ್ಬ ಅನುಚಿತ ವರ್ತನೆ ತೋರಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ಕಳೆದ ಒಂದು ತಿಂಗಳ ಹಿಂದೆ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನೊಬ್ಬ ಅಸಭ್ಯವರ್ತನೆ ತೋರಿದ್ದು ನೊಂದ ಬಾಲಕಿ ತನ್ನ ತಾಯಿಯ ಬಳಿ ಘಟನೆಯ ವಿವರವನ್ನು ತಿಳಿಸಿದ್ದಾಳೆ. ತಾಯಿಯು ಇನ್ನೋರ್ವ ಶಿಕ್ಷಕಿಯ ಬಳಿ ಶಿಕ್ಷಕರಿಗೆ ಬುದ್ದಿವಾದ ಹೇಳಲು ತಿಳಿಸಿದ್ದಾರೆ. ಆದರೆ ಶಿಕ್ಷಕಿ ಘಟನೆಯ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಆಗ ಗಂಡನಿಗೆ ಹಾಗೂ ಶಾಲಾಭಿವೃದ್ದಿ ಸಮಿತಿಯವರಿಗೆ ವಿಚಾರ ತಿಳಿಸಬೇಕೆಂದಿರುವಾಗ ಬಾಲಕಿಯ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪಿಎಸ್‌ಐ ಸುಷ್ಮಾ ನೇತೃತ್ವದ ಹಾಗೂ ಮಕ್ಕಳ ಸಹಾಯವಾಣಿಯವರು ಆಗಮಿಸಿ ವಿಚಾರಣೆಗಾಗಿ ಶಿವಮೊಗ್ಗ ಸುರಭಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಘಟನೆಯ ಬಗ್ಗೆ ವಿಚಾರಿಸಿದಾಗ ಶಾಲೆಯಲ್ಲಿ ಶಿಕ್ಷಕ ನೀಡಿದ ಕಿರುಕುಳದ ಬಗ್ಗೆ ತಾಯಿಯ ಸಮಕ್ಷೇಮದಲ್ಲಿ ಬಾಲಕಿ ಹೇಳಿಕೆ ನೀಡಿದ್ದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವ ಶಿಕ್ಷಕನ ಮೇಲೆ ಹಾಗೂ ಶಿಕ್ಷಕಿಯ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಘಟನಾ ವಿವರ :

ನೊಂದ ಬಾಲಕಿ ಪ್ರತಿ ದಿವಸವು ಶಾಲೆಗೆ ಮನೆಯಿಂದ ಹೋಗಿ ವಾಪಾಸ್ಸು ಬರುತ್ತಿರುತ್ತಾರೆ. ಬಾಲಕಿ ಹೋಗುತ್ತಿದ್ದ ಶಾಲೆಯಲ್ಲಿ ಒಬ್ಬರು ಹೆಡ್ ಮಾಸ್ಟರ್ ಮತ್ತು 3 ಜನ ಮಹಿಳಾ ಶಿಕ್ಷಕರು ಇರುತ್ತಾರೆ. ಅದರಲ್ಲಿ ಕಾಮುಕ ಶಿಕ್ಷಕ ಪಾಠ ಮಾಡುವಾಗ ನೊಂದ ಬಾಲಕಿಯ ಹತ್ತಿರ ಬಂದು ಮೈ ಕೈ ಮುಟ್ಟುವುದು, ಕೆನ್ನೆ ಸವರುವುದು ಮಾಡುತ್ತಿದ್ದನು. ಇದು ನೊಂದ ಬಾಲಕಿಗೆ ಇಷ್ಟವಾಗುತ್ತಿರಲಿಲ್ಲ. ನೊಂದ ಬಾಲಕಿ ಈ ವಿಚಾರವನ್ನು ಯಾರಿಗೆ ಹೇಳುವುದು ಎಂದು ತಿಳಿಯದೆ ಯಾರಲ್ಲೂ ಹೇಳದೆ 2022 ರ ಡಿ.14 ರಂದು ಬಾಲಕಿ ಶಾಲೆಯಲ್ಲಿದ್ದಾಗ ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ಎಲ್ಲರಿಗೂ ರೀಸಸ್ ಗೆ ಹೋಗಿ ಬರಲು ಹೊರಗೆ ಕಳುಹಿಸಿದರು. ಆಗ ಎಲ್ಲರೂ ಹೊರಗೆ ಹೋಗಿದ್ದು ನೊಂದಬಾಲಕಿ ಪುಸ್ತಕಗಳನ್ನು ಬ್ಯಾಗಿಗೆ ತುಂಬಿ ಹೊರಗೆ ಹೋಗಲು ನಿಂತಾಗ ಹಿಂದಿನಿಂದ ಬಂದ ಕಾಮುಕ ಶಿಕ್ಷಕ ನೊಂದ ಬಾಲಕಿ ಮೈ ಕೈ ಸವರಿ ಗುಪ್ತಾಂಗಗಳಿಗೆ ಕೈ ಹಾಕಿದಾಗ ಬಾಲಕಿ ಶಿಕ್ಷಕನನ್ನು ತಳ್ಳಿ ಬಿಡಿಸಿಕೊಂಡಿದ್ದು ಮನೆಗೆ ಬಂದು ತಾಯಿಯ ಬಳಿ ಈ ವಿಚಾರವನ್ನು ತಿಳಿಸಿದ್ದಾಳೆ‌.

ಆಕೆಯ ತಾಯಿ 2022 ರ ಡಿ.21 ರಂದು ಶಾಲೆಯಲ್ಲಿ ಯೂನಿಯನ್ ಡೇ ಕಾರ್ಯಕ್ರಮವಿದ್ದು ಶಾಲಾ ಶಿಕ್ಷಕಿ ಯೂನಿಯನ್ ಡೇ ಗಾಗಿ ಡ್ಯಾನ್ಸ್ ಪ್ರಾಕ್ಟಿಸ್ ಮಾಡಿಸುತ್ತಿದ್ದಾಗ ಅಲ್ಲಿಗೆ ಬಂದು ಈ ವಿಚಾರವನ್ನು ತಿಳಿಸಿ ಮೇಷ್ಟ್ರಿಗೆ ಬುದ್ದಿ ಹೇಳುವಂತೆ ಕೇಳಿಕೊಂಡರು. ಆದರೆ ಶಿಕ್ಷಕಿ ‘ಮೇಷ್ಟ್ರು ಈ ರೀತಿ ಎಲ್ಲ ಇಲ್ಲ. ನೀವು ಈ ರೀತಿ ಸುಳ್ಳು ಹೇಳಿದರೆ ನಿಮಗೆ ಟಿ.ಸಿ. ಕೊಟ್ಟು ಶಾಲೆಯಿಂದ ಹೊರಗೆ ಹಾಕುತ್ತೇನೆ’ ಎಂದು ನೊಂದ ಬಾಲಕಿಗೆ ಹೆದರಿಸಿದ್ದಾರೆ.

ಇದರಿಂದ ನೊಂದ ಬಾಲಕಿ ತಾಯಿ ಯಾರಿಗೆ ಹೇಳುವುದು ಎಂದು ಯೋಚಿಸಿ ತನ್ನ ಗಂಡನಿಗೆ ವಿಚಾರ ತಿಳಿಸಿ ಅವರು ಶಾಲಾ ಕಮಿಟಿಯವರಿಗೆ ಈ ವಿಚಾರ ತಿಳಿಸಬೇಕೆಂದು ಹೋಗುವಷ್ಟರಲ್ಲಿ ನೊಂದ ಬಾಲಕಿ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಣಿಯವರು ಬಂದು ವಿಚಾರಣೆಗೆಗಾಗಿ ಶಿವಮೊಗ್ಗ ಸುರಭಿ ಕೇಂದ್ರಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಡೆದ ವಿಚಾರವನ್ನು ತನ್ನ ತಾಯಿಯ ಮುಂದೆ ತಿಳಿಸಿ ನೊಂದ ಬಾಲಕಿಗೆ ತೊಂದರೆ ನೀಡಿದ ಕಾಮುಕ ಶಿಕ್ಷಕ ಮತ್ತು ಶಿಕ್ಷಕಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಬಾಲಕಿ ತಾಯಿ ರಿಪ್ಪನ್‌ಪೇಟೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

10 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

12 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

13 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

18 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

19 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago