Categories: Crime NewsRipponpete

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ ! ರಿಪ್ಪನ್‌ಪೇಟೆ ಠಾಣೆಯಲ್ಲಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ದೂರು ದಾಖಲು

ರಿಪ್ಪನ್‌ಪೇಟೆ : ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣವೊಂದು ನಡೆದಿದ್ದು ರಿಪ್ಪನ್‌ಪೇಟೆ ಠಾಣೆಯಲ್ಲಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ದೂರು ದಾಖಲಾಗಿದೆ.

ಏನಿದು ಘಟನೆ ?

ತೀರ್ಥಹಳ್ಳಿ ತಾಲ್ಲೂಕಿನ ಸೀಬಿನಕೆರೆ ಇಂದಿರಾನಗರ ನಿವಾಸಿ ಅರ್ಜುನ್ ರವರ ಪತ್ನಿ ಚೈತ್ರಾ ಎನ್ ಆರ್ ರವರಿಗೆ ಡಿಗ್ರಿ ವಿದ್ಯಾರ್ಹತೆಯ ಮೇರೆಗೆ ರಿಪ್ಪನ್‌ಪೇಟೆ ನಿವಾಸಿ ಶ್ವೇತಾ ಕೋಂ ರಿಶಾಂತ್ ರವರು ರೈಲ್ವೆ ಇಲಾಖೆಯಲ್ಲಿ ಹೆಚ್ ಆರ್ ಉದ್ಯೋಗವನ್ನು ಕೊಡಿಸುವುದಾಗಿ ನಂಬಿಸಿ 2022 ರ ಜು. 22 ರಂದು 19,600 ರೂ. ಶ್ವೇತಾ ರವರ ನಂಬರ್ ಗೆ ಹಣವನ್ನು ಫೋನ್ ಪೇ ಮುಖಾಂತರ ಹಾಕಿಸಿಕೊಂಡು . ಆ ನಂತರ ನಾನು ಡಿಡಿ ಹಾಕಿದ್ದೇನೆ ಬಂದ ನಂತರ ರಶೀದಿ ಕಳುಹಿಸುತ್ತೇನೆ ಅಂತ ಹೇಳಿದ್ದು, ನಂತರ 2022 ರ ಆ. 05 ರಂದು ನಿಮಗೆ ಉದ್ಯೋಗ ಸಿಕ್ಕಿದೆ 1.5 ಲಕ್ಷ ರೂ ಹಣ ಹಾಕಬೇಕು ಎಂದು ನಂಬಿಸಿ ರೂ. 50 ಸಾವಿರ ಹಣ ಮತ್ತು 2022 ಆ. 06 ರಂದು 1 ಲಕ್ಷ ಹಣವನ್ನು ಅದೇ ನಂಬರಿಗೆ ಫೋನ್ ಪೇ ಮುಖಾಂತರ ಹಾಕಿಸಿಕೊಂಡಿದ್ದು ನಿಮ್ಮದು ಮೆಡಿಕಲ್, ಪೊಲೀಸ್ ವೆರಿಫಿಕೇಷನ್‌ ಆಗಿದೆ ನಾವು ಹಣಕೊಟ್ಟು ಮಾಡಿಸಿರುತ್ತೇವೆ. ನವೆಂಬರ್ 6 ರಂದು ಬೆಂಗಳೂರಿನ ರೈಲ್ವೆ ಕಛೇರಿಯಲ್ಲಿ ಸಹಿ ಮಾಡಲಿಕ್ಕಿದೆ ಎಂದು ಹೇಳಿ ರೈಲ್ವೆ ಟಿಕೆಟ್ ಅವರೆ ಬುಕ್ ಮಾಡಿ ಹೇಳಿದ್ದು, ನಂತರ ಮತ್ತು ಅವರ ಹೆಂಡತಿ ಚೈತ್ರ ಬೆಂಗಳೂರಿಗೆ ಹೋದಾಗ ಶ್ವೇತಾ ಅಲ್ಲಿ ರೈಲ್ವೆ ಕಛೇರಿಯ ಹತ್ತಿರ ಕರೆದುಕೊಂಡು ಹೋಗಿದ್ದಾರೆ ನಮ್ಮನ್ನು ಹೊರಗೆ ಕೂರಿಸಿ ಯಾರೋ ಆಫಿಸರ್ ಬಂದಿಲ್ಲ ಎಂದು ಹೇಳಿ ಯಾವುದೋ ಪೇಪರ್ ಗೆ ಸಹಿ ಮಾಡಿಸಿಕೊಂಡು ನಾಳೆ ನಾನೇ ಸಬ್ ಮಿಟ್ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಅರ್ಜುನ್ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಅಲ್ಲಿ ವಿಜಯಪುರದ ಪ್ರಶಾಂತ್ ದೇಶಪಾಂಡೆ ರವರನ್ನು ಪರಿಚಯಿಸಿ ಇವರೇ ಜಾಬ್ ಮಾಡಿಸಿಕೊಡುವವರು ಎಂದು ಹೇಳಿ ತೋರಿಸಿದ ಶ್ವೇತಾ, ಪ್ರಶಾಂತ್‌ ದೇಶಪಾಂಡೆರವರೆ ನಿಮಗೆ ಕೆಲಸಕೊಡಿಸುವವರು ಅವರೊಂದಿಗೆ ಇನ್ನು ಮುಂದೆ ಮಾತನಾಡಿಕೊಳ್ಳಿ ಎಂದು ಅವರ ಫೋನ್ ನಂಬರ್ ಗಳನ್ನು ಕೊಟ್ಟಿದ್ದಾರೆ. ನಂತರ ಅರ್ಜುನ್ ಅವರೊಂದಿಗೆ ಮಾತನಾಡುತ್ತಿದ್ದ ಇವರು 2023 ರ ಜ. 18 ರಂದು ಪ್ರಶಾಂತ್‌ ದೇಶಪಾಂಡೆರವರು ಫೋನ್ ಮಾಡಿ ನಿಮ್ಮ ಹೆಂಡತಿಗೆ ಮಾತ್ರ ಜಾಬ್ ಆಗಿದೆ ಬೆಂಗಳೂರಿಗೆ ಬನ್ನಿ ಎಂದು ಹೇಳಿದಾಗ ಅರ್ಜುನ್ ರವರು ತನ್ನ ಸ್ನೇಹಿತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ನಿಲುವಾಗಿಲು ಗ್ರಾಮದ ಆದರ್ಶವನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಶಾಂತ್ ದೇಶಪಾಂಡೆ ಆದರ್ಶನ ಪರಿಚಯ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ರೈಲ್ವೆ ಕೆಲಸ ನಡೀತಿದೆ ನಿನಗೆ ಟೆಂಡರ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅವನಿಂದ 2023 ರ ಮಾ.1ರಂದು ಮಧ್ಯಾಹ್ನ 3-30 ಗಂಟೆಯ ಸಮಯದಲ್ಲಿ ಬೆಂಗಳೂರಿನ ಗಾಂಧಿನಗರದ ಚಿಕನ್ ಕೌಂಟಿ ಹೊಟೇಲ್ ನಲ್ಲಿ 5 ಲಕ್ಷ ರೂಪಾಯಿ ನಗದು ಹಣವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಆಗಾಗ ಆದರ್ಶನ ನಂಬರಿನಿಂದ ಪ್ರಶಾಂತ ದೇಶಪಾಂಡೆಯ ನಂಬರಿಗೆ ಫೋನ್ ಪೇ ಮುಖಾಂತರ 1,26,650 ರೂ. ಹಣ ಹಾಕಿಸಿಕೊಂಡಿದ್ದಾನೆ.

ಅಲ್ಲದೇ ದೂರುದಾರ ಅರ್ಜುನ್ ರವರಿಗೆ 2023 ಫೆ‌.02 ರಂದು ಅಪಾಯ್ಮೆಂಟ್ ಲೆಟರ್ ಬಂದಿದೆ 60 ಸಾವಿರ ರೂ. ಹಾಕಿ ನಿಮಗೆ ಮನೆಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿ 2023 ಫೆ.06 ರಂದು ಮೈನ್ ಆಫಿಸರ್ ನಿಮಗೆ ಜಾಬ್‌ ಕನ್ಫರ್ಮ್ ಮಾಡಿದ್ದಾರೆ. ಅವರಿಗೆ ವಾಚ್ ಪ್ರೆಸೆಂಟ್ ಮಾಡ್ತಿನಿ ಅಂತ ಹೇಳಿ 4,500 ರೂ. ಹಾಕಿಸಿಕೊಂಡಿದ್ದು ಫೆ. 16 ರಂದು 15 ಸಾವಿರ ರೂ. ಹಣವನ್ನು ಮಾ. 02 ರಂದು 15 ಸಾವಿರ ಹಣವನ್ನು ವಿವಿಧ ಕಾರಣ ಹೇಳಿ ಹಣವನ್ನು ಹಾಕಿಸಿಕೊಂಡಿದ್ದು ಏ.06 ರಂದು ಬೆಂಗಳೂರಿನಲ್ಲಿ ಚಿಕನ್ ಕೌಂಟಿ ಹೊಟೇಲ್ ನಲ್ಲಿ, 1.20 ಲಕ್ಷ ರೂ. ನಗದು ಹಣವನ್ನು ಅರ್ಜುನ್ ರಿಂದ ಪಡೆದುಕೊಂಡಿರುತ್ತಾನೆ.

ಅಲ್ಲದೇ ಶಿವಮೊಗ್ಗ ಮಲವಗೊಪ್ಪದ ನವೀನ್ ಕುಮಾರ್ ಬಿ.ವಿ ರವರಿಗೆ ಶ್ವೇತಾ ರವರು ಪರಿಚಯ ಮಾಡಿಕೊಂಡು ಅವರ ಪತ್ನಿ ಅಶ್ವಿನಿಗೆ ರೈಲ್ವೆ ಇಲಾಖೆಯಲ್ಲಿ ಡಿ. ದರ್ಜೆ ನೌಕರಿ ಕೊಡಿಸುವುದಾಗಿ 3,42,500 ರೂ. ಹಣವನ್ನು ಶ್ವೇತಾ ರವರು ಫೋನ್ ಫೇ ಹಾಗೂ ನೆಫ್ಟ್ ಮೂಲಕ ಹಾಕಿಸಿಕೊಂಡಿರುವುದಾಗಿ ನವೀನ್ ಅರ್ಜುನ್ ಗೆ ತಿಳಿಸಿರುತ್ತಾರೆ.

ಅರ್ಜುನ್ ರಿಂದ ಒಟ್ಟು 4.02 ಲಕ್ಷ ರೂ. ಹಣವನ್ನು ಆದರ್ಶ ನಿಂದ 6.50 ಲಕ್ಷ ರೂ. ಹಣವನ್ನು ನವೀನ್ ರವರಿಂದ 3,42,500 ರೂ. ಹಣವನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಪಡೆದುಕೊಂಡು ಶ್ವೇತಾ ಮತ್ತು ಪ್ರಶಾಂತ ದೇಶಪಾಂಡೆ ಯಾವ ಕೆಲಸವನ್ನು ಕೊಡಿಸದೇ ವಿವಿಧ ಸಬೂಬುಗಳನ್ನು ಹೇಳುತ್ತಾ ಒಂದು ಈಗ ಮೊಬೈಲ್ ಗಳನ್ನು ಸ್ವೀಟ್ ಆಫ್ ಮಾಡಿಕೊಂಡಿದ್ದು, ದೂರುದಾರ ಅರ್ಜುನ್, ಆದರ್ಶ ಮತ್ತು ನವೀನ್‌ ಆ.22 ರಂದು ಬೆಳಿಗ್ಗೆ 10-00 ಗಂಟೆಗೆ ಹಣವನ್ನು ಕೇಳಲು ರಿಪ್ಪನ್‌ಪೇಟೆಯ ಶ್ವೇತಾ ರವರ ಶಾಪ್ ಗೆ ಬಂದಾಗ ನಿಮ್ಮ ಮೇಲೆ ರೇಪ್ ಕೇಸ್ ಹಾಕಿ ಒಳಗೆ ಕಳುಹಿಸಿಬಿಡುತ್ತೇನೆಂದು ಬೆದರಿಕೆ ಹಾಕಿದ್ದಾರೆ ಎಂದು ಅರ್ಜುನ್ ದೂರಿನಲ್ಲಿ ತಿಳಿಸಿದ್ದಾರೆ.


ನಂತರ ಅವರ ಮೇಲೆ ಅನುಮಾನ ಬಂದಿದ್ದು, ನಮಗೆ ಕೆಲಸಕೊಡಿಸುವುದಾಗಿ ಹೇಳಿ ನಮ್ಮನ್ನು ನಂಬಿಸಿ ನಮ್ಮಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿ ನಮಗೆ ಹಣ ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ. ಅವರುಗಳ ಮೇಲೆ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಅರ್ಜುನ್ ರಿಪ್ಪನ್‌ಪೇಟೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಐಪಿಸಿ ಸೆಕ್ಷನ್ 406, 420, 506 ರ ಅಡಿಯಲ್ಲಿ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Malnad Times

Recent Posts

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

1 week ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

1 week ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

1 week ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

1 week ago

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 week ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

1 week ago