Categories: Ripponpete

ಸರ್ಕಾರಿ ಜಾಗದಲ್ಲಿ ಅನಧಿಕೃತ ಮಾಂಗಲ್ಯ ಮಂದಿರ ; ಭೂ ಪರಿವರ್ತನೆ ಆದೇಶ ರದ್ದುಗೊಳಿಸಿದ ಜಿಲ್ಲಾಧಿಕಾರಿ

ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಗ್ರಾಮ ಸರ್ವೆ ನಂಬರ್ 63/1ಬಿ ರಲ್ಲಿ 0-38 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಂಡು ಭೂಪರಿವರ್ತನೆಯ ಷರತ್ತು ಉಲ್ಲಂಘನೆ ಮಾಡಿಕೊಳ್ಳುವುದರೊಂದಿಗೆ ಆ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜಾಗದಲ್ಲಿ ಕಲ್ಯಾಣ ಮಂದಿರವನ್ನು (ಜ್ಯೋತಿ ಮಾಂಗಲ್ಯ ಮಂದಿರ) ನಿರ್ಮಿಸಿರುವುದನ್ನು ಪ್ರಶ್ನಿಸಿ ವಾಸುದೇವ ಎಂಬುವರು ಮೂಲಕ ಲೋಕಾಯುಕ್ತ ನ್ಯಾಯಾಲಯಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿ ಈ ದೂರಿನನ್ವಯ ಸಮಗ್ರ ತನಿಖೆ ನಡೆಸುವುದರೊಂದಿಗೆ ಭೂ ಪರಿವರ್ತನೆ ಅದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಲೋಕಾಯುಕ್ತ ನ್ಯಾಯಾಯದ ಆದೇಶದನ್ವಯ ಕಳೆದ ಐದಾರು ತಿಂಗಳ ಹಿಂದೆ ಸಾಗರ ಉಪವಿಭಾಗಾಧಿಕಾರಿ ನಾಗರಾಜ ಮತ್ತು ತಹಶೀಲ್ದಾರ್ ಮತ್ತು ಸಿಬ್ಬಂದಿವರ್ಗ ಅನಧಿಕೃತ ಕಲ್ಯಾಣ ಮಂದಿರದ ಸ್ಥಳಕ್ಕೆ ದಿಢೀರ್ ಭೇಟಿ ಪರಿಶೀಲನೆ ವರದಿ ಸಲ್ಲಿಸಲಾಗಿದ್ದು. ಆ ವರದಿಯನ್ನಾದರಿಸಿ 1 ರಿಂದ 19 ರವರಗೆ ವಸತಿ ನಿವೇಶನಗಳನ್ನು ಅಳವಡಿಸಿ ವಿನ್ಯಾಸವನ್ನು ತಯಾರಿಸಿ ನಕ್ಷೆಯನ್ನು ಅನುಮೊದಿಸಿಕೊಂಡಿದ್ದು ಈ ಪೈಕಿ ನಿವೇಶನ ಸಂಖ್ಯೆ 1 ಮತ್ತು 2 ಒಟ್ಟು 12.00X18-00 ಮೀಟರ್ ಸ್ವತಿನ ಪ್ರದೇಶದಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಷರತ್ತುಗಳನ್ನು ಉಲ್ಲಂಘಿಸಿ ಶೈಲಜಾ ಕೋಂ ನಾಗರಾಜರವರು ಅನಧೀಕೃತವಾಗಿ ವಾಣಿಜ್ಯ ಕಟ್ಟಡ ಅಂದರೆ ಕಲ್ಯಾಣ ಮಂದಿರ ನಿರ್ಮಾಣ ಮಾಡಿರುವುದು ಸಕ್ಷಮ ಪ್ರಾಧಿಕಾರಿಗಳ ವರದಿಯಿಂದ ದೃಢಪಟ್ಟಿರುತ್ತದೆ.


ಇದರಿಂದಾಗಿ ಭೂ ಮಾಲೀಕರು ಈ ಕಛೇರಿಯ ಭೂ ಪರಿವರ್ತನೆ ಆದೇಶದ ಷರತ್ತು ಕ್ರಮ ಸಂಖ್ಯೆ 02 ಮತ್ತು 09 ರಲ್ಲಿ ಅನ್ನು ಉಲ್ಲಂಘಿಸಿರುವುದುದರಿಂದ ಈ ಕಛೇರಿಯಿಂದ ಹೊರಡಿಸಿದ ಅಧಿಕೃತ ಜ್ಞಾಪನ ಪತ್ರ ಅದೇಶ ಸಂಖ್ಯೆ ALNSR/227/2009-10 ದಿನಾಂಕ;-12-07-2010 ರ ಭೂ ಪರಿವರ್ತನೆ ಆದೇಶವನ್ನು ರದ್ದುಪಡಿಸಿ ಜಿಲ್ಲಾಧಿಕಾರಿಗಳು ಆದೇಶಿದ್ದಾರೆ.

ಈ ಕಲ್ಯಾಣ ಮಂದಿರದ ಬಳಿ ಮೂಲ ಸೌಕರ್ಯದ ವ್ಯವಸ್ಥೆ ಸಹ ಸರಿಯಾಗಿ ಇಲ್ಲದಿರುವುದು ಮತ್ತು ಹಿಂದೆ ಸಾಗರ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ ದಿಢೀರ್ ಭೇಟಿ ನೀಡಿದ ಬಗ್ಗೆ ‘ಮಲ್ನಾಡ್ ಟೈಮ್ಸ್’ ಸಮಗ್ರ ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

7 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

10 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

10 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

15 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

17 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago