ಹೈನುಗಾರಿಕೆ ರೈತರ ಆರ್ಥಿಕಾಭಿವೃದ್ದಿಗೆ ಪೂರಕ

0 41

ರಿಪ್ಪನ್‌ಪೇಟೆ: ಜಾನುವಾರಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ಸೇರಿದಂತೆ ಇನ್ನಿತರ ಮಾರಕ ರೋಗದಿಂದ ರೈತರು ಧೈರ್ಯಗೆಡದೆ ರೋಗದ ನಿಯಂತ್ರಣದೊಂದಿಗೆ ಜಾನುವಾರುಗಳನ್ನು ರಕ್ಷಿಸುವುದರೊಂದಿಗೆ ಪೌಷ್ಟಿಕಾಂಶದ ಆಹಾರವನ್ನು ನೀಡಿ ಹೆಚ್ಚು ಹಾಲಿನ ಉತ್ಪಾದನೆಯನ್ನು ಮಾಡಿಕೊಳ್ಳುವಂತೆ ತಳಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ, ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಗೌರಮ್ಮ ಕರೆ ನೀಡಿದರು.


ರಿಪ್ಪನ್‌ಪೇಟೆ ಸಮೀಪದ ತಳಲೆ ಹಾಲು ಉತ್ಪಾದಕರ ಸಹಕಾರ ಸಂಘದ ಹಾಗೂ ಹೊಸನಗ ತಾಲ್ಲೂಕು ತಳಲೆ ಗ್ರಾಮದಲ್ಲಿ ಆಯೋಜಿಸಲಾದ ಜಾನುವಾರು ಚಿಕಿತ್ಸಾ ಶಿಬಿರ ಮತ್ತು ಮಿಶ್ರ ತಳಿ ಹಸು-ಕರು ಪ್ರದರ್ಶನ ಹಾಗೂ ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಮ್ಮ ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಪಶುವೈದ್ಯಾಧಿಕಾರಿ ಡಾ.ಫಣಿರಾಜ್, ಸಿಬ್ಬಂದಿಗಳಾದ ರಂಗಪ್ಪ, ಹೇಮಪ್ಪ ಉತ್ತಮವಾಗಿ ಕಾರ್ಯನಿರ್ವಹಿಸಿದರು.
ಪಶುವೈದ್ಯಕಾಲೇಜ್ ಪ್ರಾಧ್ಯಾಪಕ ಡಾ.ಎನ್.ಬಿ.ಶ್ರೀಧರ, ಜಿಲ್ಲಾ ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿಯಲಿ ಶಿಮುಲ್ ಉಪವ್ಯವಸ್ಥಾಪಕ ಡಾ.ಶರತ್, ಡಾ.ಜಿ.ಯು.ಮಂಜು, ಬೆಳ್ಳೂರು ಪಶು ಆಸ್ಪತ್ರೆಯ ಡಾ.ಶರತ್ ಸಾಗರ್ ಇನ್ನಿತರರು ಭಾಗವಹಿಸಿ ರೈತರಿಗೆ ಸಮಗ್ರ ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ಡಾ.ಗಿರೀಶ್ ಅವರನ್ನು ಹಾಲು ಉತ್ಪಾದಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ರಿಪ್ಪನ್‌ಪೇಟೆ ಪಶು ಅತ್ಪತ್ರೆ ವೈದ್ಯಾಧಿಕಾರಿ ಡಾ.ಗಿರೀಶ್ ಸ್ವಾಗತಿ ನಿರೂಪಿಸಿ ವಂದಿಸಿದರು.
ಶಿಬಿರದಲ್ಲಿ 57 ಮಿಶ್ರತಳಿ ಜಾನುವಾರುಗಳು ಹಾಗು 45 ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!