Categories: Ripponpete

ಹೊಂಬುಜದಲ್ಲಿ ಶ್ರವಣಬೆಳಗೊಳದ ಅಗಲಿದ ಜಗದ್ಗುರುಗಳಿಗೆಶ್ರದ್ಧಾಂಜಲಿಯ ನುಡಿನಮನಗಳು



ರಿಪ್ಪನ್‌ಪೇಟೆ: ಆಧುನಿಕ ಬೆಳಗೊಳದ ಶಿಲ್ಪಿ, ಅತಿಶಯ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು (54) ಜನಸಮುದಾಯ ಹಾಗೂ ಶ್ರೀಮಠವನ್ನು ಮುನ್ನಡೆಸಿದ ಪ್ರಾತಃ ಸ್ಮರಣೀಯರು ಹಾಗೂ ಮಾರ್ಗದರ್ಶಕರೂ ಆಗಿದ್ದ ಅವರ ನೇತೃತ್ವವನ್ನು ಕಳೆದುಕೊಂಡ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೊಂಬುಜ ಜೈನ ಮಠಾಧೀಶ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

ಪೂಜ್ಯರು ತಮ್ಮ ಬಾಲ್ಯ ಜೀವನದ ವಿದ್ಯಾಭ್ಯಾಸವನ್ನು ಶ್ರೀಕ್ಷೇತ್ರ ಹೊಂಬುಜದ ಶ್ರೀಮಠದ ಗುರುಕುಲದಲ್ಲಿ ಮಾಡಿದ್ದರು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ನಮ್ಮ ಮಠದ ಪೀಠಾಧಿಕಾರಿಯಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದೀಕ್ಷಾ ಗುರುಗಳು ಸಹ. ಹೀಗೆ ಹಲವಾರು ಕ್ಷೇತ್ರಗಳಿಗೆ ತಮ್ಮ ಶಿಷ್ಯಂದಿರನ್ನು ತಯಾರು ಮಾಡಿ ಕೊಟ್ಟಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಹೊಂಬುಜ ಸಮಸ್ತ ಜೈನ ಸಮಾಜ ಬಾಂಧವರು, ಶ್ರೀಮಠದ ಸಿಬ್ಬಂದಿಗಳು ಹಾಗೂ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನಮ್ಮನೆಲ್ಲ ಅಗಲಿದ ಬೆಳಗೊಳದ ಬೆಳಕಾಗಿದ್ದ ದಿವ್ಯ ಚೇತನಕ್ಕೆ ನಮ್ಮೆಲ್ಲರ ಗೌರವ ಪೂರ್ವಕ ವಿನಯಾಂಜಲಿಯನ್ನು ಶ್ರೀ ಹೊಂಬುಜ ಜೈನ ಮಠದಲ್ಲಿ ಅರ್ಪಿಸಲಾಯಿತು.


ಈ ಸಂದರ್ಭದಲ್ಲಿ ಹೊಂಬುಜ ಜೈನ ಸಮಾಜದ ಶ್ರೀ ಜಿ. ಮಂಜಪ್ಪನವರು, ಶ್ರೀಮಠದ ಆಡಳಿತಾಧಿಕಾರಿ ಶ್ರೀ ಸಿ.ಡಿ. ಅಶೋಕ ಕುಮಾರ್‌ರವರು ಉಪಸ್ಥಿತರಿದ್ದರು.


ನಿಧನವಾರ್ತೆ :

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ಹುಗುಡಿ ನಾಗಮ್ಮ ಮಲ್ಲಿಕಾರ್ಜುನಪ್ಪಗೌಡ (85) ತಮ್ಮ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ನಿಧನ ಹೊಂದಿದರು.


ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Malnad Times

Recent Posts

ನೈರುತ್ಯ ಶಿಕ್ಷಕರ, ನೈರುತ್ಯ ಪದವೀಧರರ ಕ್ಷೇತ್ರಗಳಿಗೆ ಜೂ. 03 ರಂದು ಚುನಾವಣೆ | ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮೇ 6 ಕಡೆಯ ದಿನ

ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…

12 hours ago

ಆನೆ ದಾಳಿಯಿಂದ ಮೃತನಾದ ರೈತನ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ನೀಡದಿದ್ದಲ್ಲಿ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಾಲಪ್ಪ

ರಿಪ್ಪನ್‌ಪೇಟೆ: ಇಂದು ಬೆಳಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ್ದ ರೈತ ತಿಮ್ಮಪ್ಬ ಎಂಬ ರೈತ ಆನೆ ದಾಳಿಗೆ ಬಲಿಯಾಗಿದ್ದು ಮೃತ…

13 hours ago

Arecanut Today Price | ಮೇ 03ರ ಅಡಿಕೆ ರೇಟ್

ಹೊಸನಗರ : ಮೇ 03 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

13 hours ago

ಶ್ರದ್ದಾಭಕ್ತಿಯ ನಾಮಸ್ಮರಣೆಗೆ ದೇವರ ಒಲುಮೆಯಿದೆ ; ಶ್ರೀಗಳು

ರಿಪ್ಪನ್‌ಪೇಟೆ: ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ. ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು…

15 hours ago

ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ನಾಳೆ ಕರೆಂಟ್ ಇರಲ್ಲ !

ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ನಿಮಿತ್ತ ಮೇ…

17 hours ago

ಮೊಬೈಲ್ ಟವರ್ ನಿರ್ಮಾಣದ ಭರವಸೆ, ಚುನಾವಣೆ ಬಹಿಷ್ಕಾರ ಕೈಬಿಟ್ಟ ವಾರಂಬಳ್ಳಿ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…

19 hours ago