422 ಕೋಟಿ ರೂ. ವೆಚ್ಚದ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ; ಆರಗ ಜ್ಞಾನೇಂದ್ರ

0 37

ರಿಪ್ಪನ್‌ಪೇಟೆ: ಫಸಲು ಕೊಡುವ ಮರ ಆರಗ ಜ್ಞಾನೇಂದ್ರ ಸಾರ್.ಅವರನ್ನು ಈ ಭಾರಿಯ ಚುನಾವಣೆಯಲ್ಲಿ ಮರು ಆಯ್ಕೆ ಮಾಡಲು ನಮ್ಮ ಕಾರ್ಯಕರ್ತರ ಮತ್ತು ಮತದಾರ ಬಂಧುಗಳ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಸಹಕಾರಿಯಾಗುವುದಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಅಂಗನವಾಡಿ ಕಟ್ಟಡಗಳ ಅಭಿವೃಧ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿ, ಇನ್ನೊಂದು ಐದಾರು ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು ಅಷ್ಟರೊಳಗೆ ನನ್ನ ಅಧಿಕಾರಾವಧಿಯಲ್ಲಿ ನಿರ್ಮಿಸಲಾಗಿರುವ ಹಲವು ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ, ಈ ಹಿಂದಿನ ಚುನಾವಣೆಯಲ್ಲಿ ನೀಡಲಾದ ಭರವಸೆಯಂತೆ ನಾನು ಕಡಿಮೆ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಸರ್ಕಾರದಿಂದ 3254 ಕೋಟಿ ರೂ. ಅನುದಾನವನ್ನು ತಂದಿರುವುದಾಗಿ ವಿವರಿಸಿದ ಅವರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಪುನಃ ಇನ್ನೂ ಹೆಚ್ಚುವರಿಯಾಗಿ 45 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.


ಕೇಂದ್ರ ಸರ್ಕಾರ ರಾಜ್ಯಕ್ಕೆ ಕುಡಿಯುವ ನೀರಿನ ಯೋಜನೆಗಾಗಿ 90 ಸಾವಿರ ಕೋಟಿ ರೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿನ 24X7 ಜೀವಜಲ ಯೋಜನೆಯಡಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ಯೋಜನೆಯಡಿ ನೀರು ಹರಿಸಲಾಗುತ್ತಿದೆ ಎಂದ ಅವರು ಈಗಾಗಲೇ ಹೊಸನಗರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 422 ಕೋಟಿ ರೂ. ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ದೊರೆಯುತ್ತಿದ್ದು ಅತಿ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ನಂತರ ಕಾಮಗಾರಿ ಮಾಡಲಾಗುವುದೆಂದ ಅವರು ಅಡಿಕೆ ರೋಗಕ್ಕೆ ರಕ್ಷ ಕವಚವಾಗಿ ನಾನು ಅಡಿಕೆ ಬೆಳೆಗಾರರ ಪರವಾಗಿ ಸದಾ ಶ್ರಮಿಸುತ್ತಿದ್ದು ಈಗ ಅಡಿಕೆ ಧಾರಣೆಯಲ್ಲಿ ಸ್ಥಿರ ಧಾರಣೆಯಾಗಿ ನಿಲ್ಲಲು ಸಹಕಾರಿಯಾಗಿದೆ ಮತ್ತು ಕಸ್ತೂರಿ ರಂಗನ್ ವರದಿ ಜಾರಿಯಿಂದ ನಮ್ಮ ಮಲೆನಾಡಿನ ರೈತ ನಾಗರೀಕರುಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಆನುಷ್ಟಾನ ಮಾಡದಂತೆ ತಡೆಹಿಡಿದಿರುವುದಾಗಿ ವಿವರಿಸಿ ರೈತರಲ್ಲಿ ಧೈರ್ಯ ತುಂಬಿದರು. ಆ ಕಾರಣದಿಂದ ಅಭಿವೃದ್ದಿಗಾಗಿ ಅಧಿಕಾರ ಕೊಡಿ ಫಲ ಬರುವ ಮರವನ್ನು ಬುಡಕತ್ತರಿಸದಂತೆ ನೀರೆರೆದು ಬೆಳೆಸುವಂತೆ ಕಾರ್ಯಕರ್ತರಲ್ಲಿ ಮತ್ತು ಮತದಾರರಲ್ಲಿ ಮನವಿ ಮಾಡಿದರು.


ಚಿಕ್ಕಜೇನಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಆರುಣಾಚಲ, ಗ್ರಾ.ಪಂ ಸದಸ್ಯೆ ಸುಜಾತ, ಸುಧೀರ್, ಅರವಿಂದ ಭಟ್,ಗ್ರಾ.ಪಂ.ಸದಸ್ಯ ಹಾಗು ವಿ‌ಎಸ್.ಎಸ್.ಎನ್. ಎನ್.ಪಿ.ರಾಜು ಇನ್ನಿತರರು, ಊರಿನ ಮುಖಂಡರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಜರಿದ್ದರು.

Leave A Reply

Your email address will not be published.

error: Content is protected !!