BSY ಲಿಂಗಾಯಿತ ಜನಾಂಗಕ್ಕೆ ನಾಯಕನಾಗದೇ ಸರ್ವ ಜನಾಂಗದ ನಾಯಕ ; ಹರತಾಳು ಹಾಲಪ್ಪ

0 0

ರಿಪ್ಪನ್‌ಪೇಟೆ: ಕಳೆದ ಚುನಾವಣೆಯ ಸಂದರ್ಭದ ದೇಶದ ಪ್ರಧಾನಿ ಮೋದಿಯವರಿಗೆ ಗುಂಡಿಕ್ಕಿ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬವನ್ನು ಜೈಲಿಗೆ ಕಳುಹಿಸಿ ಎಂದಿದ್ದ ಇದೇ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಈಗ ಯಡಿಯೂರಪ್ಪನವರಂತಹ ಪುಣ್ಯಾತ್ಮ ಎಂದು ಮತದಾರರ ಮುಂದೆ ಕಣ್ಣೀರು ಹಾಕುತ್ತಾ ಹಗಲು ವೇಷ ಮಾಡುತ್ತಿದ್ದಾರೆಂದು ಶಾಸಕ ಬಿಜೆಪಿ ಆಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು.

ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬಾಳೂರು, ಕೆಂಚನಾಲ, ಅರಸಾಳು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದೊಂದಿಗೆ ಮನೆ-ಮನೆಗೆ ಭೇಟಿ ಸಂದರ್ಭದಲ್ಲಿ ಅರಸಾಳು ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಹತ್ತು ವರ್ಷ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಶಾಸನ ಸಭೆಯಲ್ಲಿ 5 ನಿಮಿಷಗಳಷ್ಟು ಮಾತನಾಡದವರು ಈಗ ಪುನಃ ಚುನಾವಣೆಗೆ ಸ್ಪರ್ಧಿಸಿದ್ದಾರೆ ಈಗ ಗೆದ್ದು ಏನು ಮಾಡಿಯಾನು ಎಂದು ಲೇವಡಿ ಮಾಡಿ, ಈಗ ಮತದಾರರ ಮುಂದೆ ಮೊಸಳೆ ಕಣ್ಣೀರು ಹಾಕುತ್ತಾ ಹಗಲು ವೇಷ ಮಾಡುತ್ತಿದ್ದಾನೆ ಅವನ ಈ ನಾಟಕವನ್ನು ಜನರು ತಿರಸ್ಕರಿಸುವ ಮೂಲಕ ಬಿಜೆಪಿಗೆ ಬೆಂಬಲಿ ಮತನೀಡಿ ಅಭಿವೃದ್ದಿಗೆ ಅಧ್ಯತೆ ನೀಡಿ ಎಂದು ಮನವಿ ಮಾಡಿದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರರನ್ನು ಜೈಲಿಗೆ ಕಳುಹಿಸುತ್ತೇನೆ ಮತ್ತು ದೇಶದ ಪ್ರಧಾನಿಯನ್ನು ಗುಂಡಿಕ್ಕಿ ಎಂದವರ ನಾಲಿಗೆಯೋ ಆಥವಾ ಏನು ? ಎಂದು ನೆನಪಿಸಿ ಬಸ್‌ಸ್ಟ್ಯಾಂಡ್ ರಾಘವೇಂದ್ರರವರು ಬಸ್‌ಸ್ಟ್ಯಾಂಡ್‌ನೊಂದಿಗೆ ವಿಮಾನ ನಿಲ್ದಾಣವನ್ನು ಮಾಡಿದರೂ ಈತ ಏನು ಮಾಡಿದ್ದಾನೆಂದು ಬಹಿರಂಗವಾಗಿ ಹೇಳಿಕೊಳ್ಳಲೆಂದು ಸವಾಲು ಹಾಕಿದರು.

ಬಿ.ಎಸ್.ಯಡಿಯೂರಪ್ಪ ಬರೀ ಲಿಂಗಾಯಿತ ನಾಯಕರಾಗದೇ ಸರ್ವ ಜನಾಂಗದ ನಾಯಕರು ಅವರು ಲಿಮಗಾಯಿತರಿಲ್ಲದ ಮಂಗಳೂರು, ಕುಂದಾಪುರ, ಬೈಂದೂರು ಕಡೆಯಲ್ಲಿ ಹೋದರೆ ಬೇರೆ ಜಾತಿಯವರು ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಾರೆಂದು ಹೇಳಿ ಬರೀ ಲಿಂಗಾಯಿತ ಸಮಾಜದ ಆಭಿವೃದ್ದಿಗೆ ಅನುದಾನ ಕೊಡದೇ ನಮ್ಮ ಈಡಿಗ ಸಮಾಜದ ಮಠಕ್ಕೂ 5 ಕೋಟಿ ರೂ. ಹಣ ಕೊಡಿಸಿರುವುದಾಗಿ ವಿವರಿಸಿ ಸಣ್ಣ ಸಣ್ಣ ಜಾತಿ ಪಂಗಡದವರಿಗೂ ಅನುದಾನ ಕೊಡಿಸಿರುವುದಾಗಿ ಹೇಳಿ ಅಭಿವೃದ್ದಿಯೇ ನಮ್ಮ ಮೂಲ ಮಂತ್ರವಾಗಿದ್ದು ಮತದಾರರನ್ನು ಪ್ರೀತಿ ವಿಶ್ವಾಸದಿಂದ ಕಾಣಲು ಶಾಸಕನಾಗಬೇಕಾಗಿಲ್ಲ ನಮ್ಮ ಹೃದಯಾಂತರಾಳದಲ್ಲಿದ್ದರೆ ಸಾಕು ಎಂದು ತಿರುಗೇಟು ನೀಡಿದರು.

ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಮಾತನಾಡಿ, ಬೇಳೂರು ಗೋಪಾಲಕೃಷ್ಣ ಒಬ್ಬ ನಾಲಾಯಕ್ ಆಂತಹವರನ್ನು ಆಯ್ಕೆ ಮಾಡುವ ಬದಲು ಅಭಿವೃದ್ಧಿಯ ಹರಿಕಾರ ಕ್ಷೇತ್ರದ ಸಮಸ್ಯೆಗಳ ಕುರಿತು ಹೋರಾಟ ನಡೆಸಿ ಅನುಷ್ಟಾನಗೊಳಿಸುವಂತಹ ವ್ಯಕ್ತಿ ಹರತಾಳು ಹಾಲಪ್ಪನವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

‘ಚುನಾವಣೆ ಫಲಿತಾಂಶ ಬಂದ ಅರು ತಿಂಗಳಲ್ಲಿ ಆರಸಾಳು ರೈಲ್ವಿ ನಿಲ್ದಾಣದಲ್ಲಿ ಎಲ್ಲ ರೈಲುಗಳನ್ನು ನಿಲುಗಡೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು.’
– ಹರತಾಳು ಹಾಲಪ್ಪ, ಶಾಸಕ

ಕಾಗೋಡು ಪುತ್ರಿ ಡಾ.ರಾಜಾನಂದಿನಿ, ಬಿಜೆಪಿ ಮಂಡಲದ ಆಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಜಿ.ಪಂ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಹುಸೇನ್‌ಸಾಬ್, ಘಟಕದ ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಸುರೇಶ್‌ಸಿಂಗ್, ದೇವೇಂದ್ರಪ್ಪಗೌಡ, ರಾಮಚಂದ್ರ ಹರತಾಳು ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪನವರ ಆಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಜೆಡಿಎಸ್ ಪಕ್ಷ ತೊರೆದು ಶಾಸಕರ ಸಮ್ಮಖದಲ್ಲಿ ನೂರಾರು ಯುವಕರು ಬಿಜೆಪಿ ಸೇರ್ಪಡೆಯಾದರು.

Leave A Reply

Your email address will not be published.

error: Content is protected !!