Hospital Inauguration | ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ನೂತನ ಖಾಸಗಿ ಆಸ್ಪತ್ರೆ ಲೋಕಾರ್ಪಣೆ | ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ‘ನಂದಿ ಆಸ್ಪತ್ರೆ’ ಸಹಕಾರಿ ; ಶ್ರೀಗಳು

0 2

ರಿಪ್ಪನ್‌ಪೇಟೆ : ಹಳ್ಳಿಯಲ್ಲಿನ ಸಾಮಾನ್ಯ ಜನರು ಇಂದಿನ ದುಬಾರಿ ಖರ್ಚು ಮಾಡಿಕೊಂಡು ದೂರದ ದೊಡ್ಡದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿದೆ ಆ ನಿಟ್ಟಿನಲ್ಲಿ ತಮ್ಮ ಮನೆಯ ಬಾಗಿಲಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತಾಗಲು ನಂದಿ ಆಸ್ಪತ್ರೆ ಸಹಕಾರಿಯಾಗಲಿ ಎಂದು ಉಜ್ಜಯನಿ ಪೀಠದ ಜಗದ್ಗುರುಗಳು ಹೇಳಿದರು.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ನಂದಿ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾರಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದೂರದ ಆಸ್ಪತ್ರೆಗಳಿಗೆ ಹೋಗಿ ಬರುವುದೇ ಕಷ್ಟವಾಗಿರುವಾಗ ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದರೊಂದಿಗೆ ಸಾಕಷ್ಟು ವೈದ್ಯರಿಗೆ ಮತ್ತು ಆರೋಗ್ಯ ಶೂಶ್ರೂಷಕಿಯರಿಗೆ ಔಷಧಿ ಅಂಗಡಿಯವರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಿಯಾಗಿರುವುದು ಪ್ರಶಂಸನೀಯವೆಂದರು.


ಇದೇ ಕಟ್ಟಡದಲ್ಲಿ ಐಶ್ವರ್ಯ ಕೃಷಿ ಉಪಕರಣಗಳ ಅಂಗಡಿಗೂ ಭೇಟಿ ನೀಡಿ ಗುರು ವಿರಕ್ತ ಪೂಜ್ಯರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ನಾರಾಯಣ ಗುರು ಪೀಠದ ರೇಣುಕಾನಂದ ಮಹಾಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್, ಸಚಿನ್ ಗೌಡ, ಜೆ.ಎಂ. ಶಾಂತಕುಮಾರ್, ಹುಗುಡಿ ರಾಜು, ಬೆಳಕೋಡು ಹಾಲಸ್ವಾಮಿಗೌಡ ಇನ್ನಿತರರು ಹಾಜರಿದ್ದರು.

ಗುರು-ವಿರಕ್ತ ಜಗದ್ಗುರುಗಳ ಆಶೀರ್ವಾದ ಪಡೆದ ಶಾಸಕ ಹರತಾಳು ಹಾಲಪ್ಪ
ರಿಪ್ಪನ್‌ಪೇಟೆ : ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲೇ ರಿಪ್ಪನ್‌ಪೇಟೆಯಲ್ಲಿ ಖಾಸಗಿ ಆಸ್ಪತ್ರೆ ಲೋಕಾರ್ಪಣಾ ಸಮಾರಂಭದಲ್ಲಿ ಉಜ್ಜಯನಿ ಪೀಠ ಮತ್ತು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರುಗಳು ಭಾಗವಹಿಸಿದ ಸಮಾರಂಭದಲ್ಲಿ ಶಾಸಕ ಹರತಾಳು ಹಾಲಪ್ಪ ಪಾಲ್ಗೊಂಡು ಗುರು ವಿರಕ್ತ ಜಗದ್ಗುರುಗಳ ಆಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!