ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಅರಸಾಳುವಿನಲ್ಲಿ ಧೀಮಂತ ಕ್ರಿಯೇಶನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಲನಚಿತ್ರಕ್ಕೆ ಶನಿವಾರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಾನಂದ್ ಕೋಳಿ ಕ್ಲಾಪ್ ಮಾಡುವುದರ ಮೂಲಕ ಚಾಲನೆ ನೀಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ ನಾಟಕ ಆಧಾರಿತ ನೈಜ ಕಥೆಯನ್ನು ಹೊಂದಿದ್ದು, ಮರೆಯಾಗುತ್ತಿರುವ ಕ್ರೀಡೆ, ರೈತನ ಬದುಕು, ಹಳ್ಳಿಗರ ಜೀವನ, ವ್ಯಾಜ್ಯ, ಜಗಳ, ಪ್ರತಿಷ್ಠೆ ಇನ್ನೂ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಈ ಚಿತ್ರ ಕಥೆಯನ್ನು ರೂಪಿಸಲಾಗುತ್ತದೆ.
ಈ ಚಲನಚಿತ್ರದಲ್ಲಿ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಪ್ರತಿಭಾವಂತ ಕಲಾವಿದರು ಸೇರಿದಂತೆ ಚಲನಚಿತ್ರರಂಗದ ರವಿಕಿರಣ್, ಸುನಿಲ್ ಪುರಾಣಿಕ, ಸಿಹಿಕಹಿ ಚಂದ್ರು, ದಿನೇಶ್ ಹೆಗಡೆ, ಅನಿಲ್
ಮಜಾಭಾರತ, ಅಭಿನಯ, ರೂಪ, ಮಂಜುನಾಥ್, ನಾಗರಾಜ ಸೇರಿದಂತೆ ಚಿತ್ರರಂಗದ ಹಲವರು ನಟಿಸಲಿದ್ದಾರೆ.
ಚಿತ್ರದ ನಾಯಕಿಯಾಗಿ ಸ್ಥಳೀಯ ಪ್ರತಿಭೆ ನಮಿತಾ ಹೆಗಡೆ ಅರಸಾಳು ಅಭಿನಯಿಸಲಿದ್ದಾರೆ. ಈ ಚಲನಚಿತ್ರವನ್ನು ನಿರ್ಮಾಪಕ ದಿನೇಶ್ ಹೆಗಡೆ ನಿರ್ಮಿಸಲಿದ್ದಾರೆ. ಹಿರಿಯೂರು ರಾಘವೇಂದ್ರ ಈ ಚಲನಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಈ ಚಲನಚಿತ್ರ ನಿರ್ಮಾಣದ ಆರಂಭದ ಸಮಾರಂಭದಲ್ಲಿ ಸ್ಥಳೀಯರಾದ ಕಗ್ಗಲಿ ಲಿಂಗಪ್ಪ, ಸತೀಶ್ ಹೆಗಡೆ, ಟಿ ಆರ್ ಕೃಷ್ಣಪ್ಪ, ಮಂಜುನಾಥ್ ಕಾಮತ್ ಇನ್ನೂ ಮುಂತಾದವರು ಹಾಜರಿದ್ದರು.