PUC Result | ರಿಪ್ಪನ್‌ಪೇಟೆ ಕಾಲೇಜ್‌ಗೆ ಶೇ. 81.96 ಫಲಿತಾಂಶ

0 45

ರಿಪ್ಪನ್‌ಪೇಟೆ : ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇ. 81.96 ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜ್ ಪ್ರಾಚಾರ್ಯ ಎ.ಮಂಜುನಾಥ ತಿಳಿಸಿದರು.

ಕಾಲೇಜ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 244 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 200 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಕಲಾ ವಿಭಾಗದಲ್ಲಿ 101 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇ. 79.20 ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ 82 ವಿದ್ಯಾರ್ಥಿಗಳಲ್ಲಿ 66 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇ. 80.48 ರಷ್ಟು ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ 61 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇ. 88.52 ರಷ್ಟು ಫಲಿತಾಂಶ ಬಂದಿದೆ. 17 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 101 ಪ್ರಥಮ ದರ್ಜೆಯಲ್ಲಿ, 45 ವಿದ್ಯಾಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 37 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಾರಾಗುವ ಮೂಲಕ ಕಾಲೇಜ್‌ಗೆ ಕೀರ್ತಿ ತಂದಿದ್ದಾರೆಂದು ಹೇಳಿ, ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯರು ಮತ್ತು ಉಪನ್ಯಾಸಕ ವೃಂದ ಸಿಡಿಸಿಯವರು ಅಭಿನಂದಿಸಿದರು.

Leave A Reply

Your email address will not be published.

error: Content is protected !!