ಕಂತೆ ಕಂತೆ ಹಣ ಬ್ಯಾಗಿಗೆ ತುಂಬುವ ವಿಡಿಯೋ ವೈರಲ್ ! ನಗರಸಭೆ ಉಪಾಧ್ಯಕ್ಷನ ವಿರುದ್ಧ FIR ದಾಖಲು

0 0

ಸಾಗರ : ನಗರಸಭೆ ಉಪಾಧ್ಯಕ್ಷರ ಮನೆಯಲ್ಲಿ ಹಣ ತುಂಬುತ್ತಿರುವ ವಿಡಿಯೋ ವೈರಲ್ ಆಗಿದ್ದು ಚುನಾವಣೆ ಆಯೋಗ ಎಫ್ ಐಆರ್ ದಾಖಲಿಸಿಕೊಂಡಿರುವ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ನಗರಸಭೆ ಉಪಾಧ್ಯಕ್ಷ ಮಹೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಾಗರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರ ಆಪ್ತನಾಗಿರುವ ಮಹೇಶ್ ಬ್ಯಾಗಿಗೆ ಕಂತೆಗಟ್ಟಲೇ ಹಣ ತುಂಬುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಹೇಶ್ ಮನೆ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಯಾವುದೇ ಹಣ ಪತ್ತೆಯಾಗದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ವಾಪಾಸ್ ಆಗಿದ್ದಾರೆ.

ಬಳಿಕ ವಿಡಿಯೋ ಆಧರಿಸಿ, ಇಂದು ಬೆಳಿಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ದಾನಪ್ಪ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡು, ಸಾಗರ ಠಾಣೆ ಪೋಲೀಸರು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.

error: Content is protected !!