ಕೊಟ್ಟಿಗೆಗೆ ಬೆಂಕಿ ತಗುಲಿ ಒಂದು ದನ ಸಜೀವ ದಹನ, ಮೂರು ದನಗಳ ಸ್ಥಿತಿ ಗಂಭೀರ !
ಸಾಗರ : ತಾಲ್ಲೂಕು ಉಳ್ಳೂರು ಗ್ರಾಮ ಪಂಚಾಯಿತಿ ನಂದಿತಳೆ ಗ್ರಾಮದ ಪ್ರಕಾಶ್ ಆಚಾರ್ಯರವರ ಕೊಟ್ಟಿಗೆಗೆ ಗುರುವಾರ ರಾತ್ರಿ ಸುಮಾರು 12.45 ಕ್ಕೆ ಮಲಗಿದ್ದಾಗ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಒಂದು ಜಾನುವಾರು ಮೃತಪಟ್ಟಿದ್ದು, ಇನ್ನೂ ನಾಲ್ಕು ದನಗಳಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿದ್ದು, ಇದರಲ್ಲಿ 3 ದಿನಗಳ ಸ್ಥಿತಿ ಗಂಭೀರವಾಗಿದೆ.

ಇವರುಗಳ ವಾಸದ ಮನೆಯು ಕೊಟ್ಟಿಗೆ ಪಕ್ಕದಲ್ಲೆ ಇದ್ದು ಇವರ ಮನೆಯೂ ಸಹ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, ಟಿವಿ, ಇವರು ಮಲಗಿಕೊಳ್ಳುತ್ತಿದ್ದ ಮಂಚ ಈ ಬೆಂಕಿ ಅವಘಡದಿಂದ ಸುಟ್ಟು ಹೋಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬ ಬೀದಿಗೆ ಬಂದಿರುತ್ತದೆ. ರಾತ್ರಿ ಬೆಂಕಿ ಅವಗಡದ ಬಗ್ಗೆ ಅಗ್ನಿಶಾಮಕ ಕಛೇರಿಗೆ ಫೋನ್ ಮಾಡಿದರೆ ನೀರಿಲ್ಲ ಈಗ ಕಳಿಸಲಿಕ್ಕೆ ಆಗಲ್ಲ ಅಂತ ಹೇಳಿದರು. ಇದು ಅಧಿಕಾರಿಗಳ ನಿರ್ಲಕ್ಷ್ಯ ಅಂತ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ಹೆಚ್. ಹಾಲಪ್ಪನವರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರ ಕಲ್ಪಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಧಿಕಾರಿಗಳಿಗೆ ಹೇಳಿದರು.

ಚುನಾಯಿತ ಪ್ರತಿನಿಧಿಗಳು, ಪಕ್ಷ ಮುಖಂಡರು ಗ್ರಾಮಸ್ಥರುಗಳು ಸ್ಥಳದಲ್ಲಿ ಹಾಜರಿದ್ದರು. ಸರ್ಕಾರದಿಂದ ಏನಾದರು ಪರಿಹಾರ ಸಿಗಲಿ ಎಂದು ಕುಟುಂಬದವರು
ವಿನಂತಿಸಿದ್ದಾರೆ.