ಬಾವಿ ಕೆಲಸದ ವೇಳೆ ಕಲ್ಲು ಕುಸಿತ ; ಕಾರ್ಮಿಕ ಸಾವು !

0 5

ಸಾಗರ : ಮನೆಯ ಮುಂಭಾಗದಲ್ಲಿ ಕುಡಿಯುವ ನೀರಿಗೆ ಬಾವಿ ತೋಡುತ್ತಿದ್ದ ವೇಳೆ ಕಲ್ಲು ಕುಸಿದು ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಗುರುವಾರ ಸಂಜೆ ನೆಹರು ನಗರದಲ್ಲಿ ಸಂಭವಿಸಿದೆ.

ಕಂಬಳಿಕೊಪ್ಪದ ನಿವಾಸಿ ಮೋಹನ (55) ಮೃತಪಟ್ಟವರು. ದಿ.ಆದಿಲ್ ಎಂಬವರ ಮನೆಯ ಮುಂಭಾಗದಲ್ಲಿ ಬಾವಿ ತೋಡುವ ಕೆಲಸ ವಾರದಿಂದ ನಡೆಯುತ್ತಿತ್ತು. ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸುಮಾರು ಮೂವತ್ತು ಅಡಿ ಬಾವಿ ತೋಡಿದ ನಂತರ ಬಾವಿಗೆ ರಿಂಗ್ ಅಳವಡಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಕಾರ್ಮಿಕ ಮೋಹನ್ ಬಾವಿಯೊಳಗೆ ರಿಂಗ್ ಇಳಿಸುತ್ತಿದ್ದಾಗ ಮೇಲಿನಿಂದ ಕಲ್ಲು ಕುಸಿದು ನೇರವಾಗಿ ಅವರ ತಲೆಗೆ ಬಡಿದಿದೆ ಎನ್ನಲಾಗಿದೆ. ಇದರಿಂದ ತಕ್ಷಣ ಅಲ್ಲೇ ಕುಸಿದು ಮೋಹನ್ ಕೊನೆಯುಸಿರೆಳದಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಎರಡು ಗಂಟೆ ಕಾರ್ಯಾಚರಣೆ ನಂತರ ಮೃತದೇಹವನ್ನು ಮೇಲಕ್ಕೆತ್ತಿದರು.

Leave A Reply

Your email address will not be published.

error: Content is protected !!