ರಾತ್ರಿ ಮಲಗಿದ್ದಾಗ ಮನೆಯೊಳಗೆ ನುಗ್ಗಿ ಹುಲಿ ದಾಳಿ ; ವ್ಯಕ್ತಿಗೆ ಗಂಭೀರ ಗಾಯ !

0 0

ಸಾಗರ : ತಾಲ್ಲೂಕಿನ ಶರಾವತಿ ಹಿನ್ನೀರು ಪ್ರದೇಶವಾದ ಎಸ್.ಎಸ್.ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ ಗ್ರಾಮದ ಕಂಚಿಕೇರಿ ನಿವಾಸಿ ಗಣೇಶ್ ಅವರ ಮೇಲೆ ಬುಧವಾರ ತಡರಾತ್ರಿ ಹುಲಿ ದಾಳಿ ಮಾಡಿದೆ.

ಮರಾಠಿ ಗ್ರಾಮದ ಕಂಚಿಕೆರೆ ವಾಸಿ ಗಣೇಶ್ ಅವರು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಹುಲಿ ಮನೆಯೊಳಗೆ ನುಗ್ಗಿ ಗಣೇಶ್ ಅವರ ಮೈಕೈಗೆ ಪರಚಿ, ಕಚ್ಚಿ ಗಾಯಗೊಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.


ಮರಾಠಿ ಗ್ರಾಮದಲ್ಲಿ ಹುಲಿ ಕಾಟ ಜಾಸ್ತಿಯಾಗಿದ್ದು ಆಗಾಗ ಜನವಸತಿ ಪ್ರದೇಶಕ್ಕೆ ನುಗ್ಗುವ ಹುಲಿಗಳು ಐದಾರು ನಾಯಿಯನ್ನು ತಿಂದು ಹಾಕಿದ್ದು, ಜಾನುವಾರುಗಳ ಮೇಲೆ ಸಹ ದಾಳಿ ನಡೆಸಿದೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹುಲಿ ಕಾಟದಿಂದ ಗ್ರಾಮಸ್ಥರು ಮನೆಯೊಳಗೆ ವಾಸಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ಶಾಸಕರು ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!