ವಾಹನ ಡಿಕ್ಕಿ ; ಕಾಡುಕೋಣ ಸಾವು !
ಸಾಗರ: ವಾಹನ ಡಿಕ್ಕಿಯಾಗಿ ಕಾಡುಕೋಣವೊಂದು ಸಾವನ್ನಪ್ಪಿರುವ ಘಟನೆ ಸಾಗರದ ಹೊರವಲಯದಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.
ಸಾಗರ ಮತ್ತು ಹೊಸನಗರದ ಸುತ್ತಮುತ್ತ ಕಾಡು ಕೋಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಾಡುಕೋಣಗಳ ವಲಯವಾಗಿದ್ದರಿಂದ ವಾಹನ ಸವಾರರು ಅತಿ ವೇಗವಾಗಿ ಸಂಚಾರಿಸಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿವೆ.
ಸಾಗರ ಮತ್ತು ಸಿಗಂದೂರು ರಸ್ತೆಯಲ್ಲಿ ಸುಮಾರು 5 ವರ್ಷದ ಕಾಡುಕೋಣ ರಕ್ತ ಕಾರಿಕೊಂಡು ರಸ್ತೆಯ ಬಲಭಾಗಕ್ಕೆ ಬಿದ್ದಿದೆ. ಲಾರಿ ಅಥವಾ ದೊಡ್ಡ ವಾಹನಗಳೇ ಈ ಕಾಡು ಪ್ರಾಣಿಯ ಸಾವಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

ಆವಿನಹಳ್ಳಿ ಗ್ರಾಮಪಂಚಾಯಿತಿ ಕಲ್ಮನೆ ಗ್ರಾಮದಲ್ಲಿ ಇಂದು ಬೆಳಗಿನಜಾವದಲ್ಲಿ ವಾಹನವೊಂದು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಕಾಡುಕೋಣ ಸಾಮಾನ್ಯವಾಗಿ ಸಣ್ಣಪುಟ್ಟ ವಾಹನಗಳಿಗೆ ಸಾವನ್ನಪ್ಪುವುದು ಬಹಳ ಕಡಿಮೆ ಎನ್ನಬಹುದು. ಹಾಗಾಗಿ ಲಾರಿ ಅಥವಾ ದೊಡ್ಡ ವಾಹನಗಳು ಡಿಕ್ಕಿ ಹೊಡೆಸಿರಬಹುದು ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯವರು ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.