ವಿದ್ಯುತ್ ದರ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

0 0

ಸಾಗರ: ವಿದ್ಯುತ್ ದರ ಏರಿಕೆ ವಿರೋಧಿಸಿ ಮಂಗಳವಾರ ಸಾಗರದ ಮೆಸ್ಕಾಂ ಕಚೇರಿ ಎದುರು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಅನುಷ್ಠಾನಕ್ಕೆ ಕಂಡಿಷನ್ ಹಾಕುತ್ತಿದೆ. ವರ್ಷದ ಸರಾಸರಿ ಆಧರಿಸಿ, ಗೃಹಜ್ಯೋತಿ ವಿದ್ಯುತ್ ಉಚಿತ ನೀಡೋದು ಬೇಡ. ಬಾಡಿಗೆದಾರರಿಗೆ 58 ಯೂನಿಟ್ ಮಿತಿ ಬದಲಾಗಿ, 200 ಯೂನಿಟ್ ನೀಡಲು ಒತ್ತಾಯಿಸಿದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://fb.watch/l8TpY5ACc6/?mibextid=NnVzG8

ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ಶಕ್ತಿ ಯೋಜನೆಯಡಿ ಖಾಸಗಿ ಬಸ್‌ನಲ್ಲೂ ಮಹಿಳೆಯರಿಗೆ ಅವಕಾಶ ನೀಡಲು ಪ್ರತಿಭಟನಾಕಾರರು ಒತ್ತಾಯಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಿಂತ ಖಾಸಗಿ ಬಸ್ ಹೆಚ್ಚಾಗಿವೆ. ಖಾಸಗಿ ಬಸ್‌ನಲ್ಲೂ ಉಚಿತ ನೀಡಿ, ಸರ್ಕಾರ ಹಣ ಭರಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್.ಪ್ರಶಾಂತ್, ಡಾ. ರಾಜನಂದಿನಿ ಕಾಗೋಡು, ಮಧುರಾ ಶಿವಾನಂದ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!