Categories: Sagara News

ಸೆ. 10 ರಂದು ಆಪ್ಸ್ಕೋಸ್ ನಿರ್ದೇಶಕರ ಚುನಾವಣೆ | ಬೆಳೆಗಾರ ಸ್ನೇಹಿ ಯೋಜನೆಗಳು | ಸಾಗರದಲ್ಲಿ ಸೂಪರ್ ಮಾರ್ಕೆಟ್ | ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ ; ಕೆ.ಎಂ.ಸೂರ್ಯನಾರಾಯಣ


ಸಾಗರ : ಸೆಪ್ಟೆಂಬರ್ 10 ರಂದು ಪ್ರತಿಷ್ಠಿತ ಅಡಿಕೆ ಬೆಳೆಗಾರರ ಸಂಸ್ಥೆಯಾದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ಆಪ್ಸ್ಕೋಸ್) ದ ಐದು ವರ್ಷದ ಅವಧಿಗೆ ನಡೆಯುವ ಚುನಾವಣೆಯಲ್ಲಿ ಸದಸ್ಯ ಬೆಳೆಗಾರರು ನಮ್ಮ ತಂಡದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಸಂಸ್ಥೆ ಹಾಲಿ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕ ಮನವಿ ಮಾಡಿದರು.


ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪ್ಸ್ಕೋಸ್ ಸಂಸ್ಥೆಯು ಸಾಗರ, ಸೊರಬ ಮತ್ತು ಹೊಸನಗರ ತಾಲ್ಲೂಕು ವ್ಯಾಪ್ತಿಯನ್ನೊಳಗೊಂಡಿದ್ದು, ಈಗಾಗಲೇ 5 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 11 ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದರು.


ಹೊಸನಗರದಿಂದ ಕಲ್ಯಾಣಪ್ಪ ಗೌಡ್ರು, ನಿಟ್ಟೂರು ಎ.ಓ.ರಾಮಚಂದ್ರ, ಓಂಕೇಶ್ ಹರತಾಳು, ಸತ್ಯನಾರಾಯಣ ಕೆಳದಿ ಹಾಗೂ ಚೌಡಪ್ಪ ಕಲ್ಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಮ್ಮ ತಂಡದಲ್ಲಿ ಹಾಲಿ ನಿರ್ದೇಶಕರಾದ ಇಂದೂಧರ ಬಿ.ಎ., ಕೆ.ಎಸ್.ಸುಬ್ಬರಾವ್, ಎಚ್.ಕೆ.ರಾಘವೇಂದ್ರ ಹಾಗೂ ಹೊಸದಾಗಿ ಕೃಷ್ಣಮೂರ್ತಿ ಟಿ.ಆರ್.ದೂಗೂರು, ನಾಗರತ್ನ ಎ.ಎಸ್.ನೀಚಡಿ, ನಂದಕುಮಾರ್ ಗೋಳಿಬೀಡು, ಭಾರತಿ ಎಂ.ಡಿ.ಕರ್ಕಿಕೊಪ್ಪ, ಭಾಸ್ಕರ ಭಟ್ಟ ಕೆ.ಎಸ್. ಖಂಡಿಕಾ, ರಮೇಶ್ ಎಂ.ಬಿ.ಮೇಲಿನಮನೆ, ಸುರೇಶ್ ವೈ.ಎನ್. ಈಳಿ ಸ್ಪರ್ಧಿಗಳಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಜೈನ ಸಮುದಾಯದ ಸುಮಾರು 150 ಸದಸ್ಯರಿದ್ದು, ಸಂಸ್ಥೆಯ ಏಳಿಗೆಯಲ್ಲಿ ಅವರ ಪಾಲು ದೊಡ್ಡದಿದೆ. ಹಾಗಾಗಿ ಆ ಸಮುದಾಯದಿಂದ ನಂದಕುಮಾರ್ ಅವರನ್ನು ನಮ್ಮೊಂದಿಗೆ ಕಣಕ್ಕಿಳಿಸಿದ್ದೇವೆ ಎಂದರು.


ಕಳೆದ ಚುನಾವಣೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಸಾಗರದಲ್ಲಿ ಸೂಪರ್ ಮಾರ್ಕೆಟ್, ಕೃಷಿ ಅಗತ್ಯ ವಸ್ತುಗಳ ಮಾರಾಟ ಕೇಂದ್ರವನ್ನು ಆಪ್ಸ್ಕೋಸ್ ಶಾಖೆಗಳಲ್ಲೂ ಆರಂಭಿಸುವುದು. ಕೇಂದ್ರ ಕಚೇರಿಯಲ್ಲಿ ವ್ಯವಸ್ಥಿತ ಗೋದಾಮುಗಳ ನಿರ್ಮಾಣ, ಹೊಸನಗರ, ನಿಟ್ಟೂರುಗಳಲ್ಲಿ ಅವಶ್ಯಕ ಗೋದಾಮು ನಿರ್ಮಾಣ. ತುಮರಿ ಶಾಖೆಯಲ್ಲಿ ಸ್ವಂತ ಕಟ್ಟಡ, ಸಂಘದ ಷೇರುದಾರರಿಗೆ ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ, ಸದಸ್ಯರ ಆರೋಗ್ಯಕ್ಕಾಗಿ ಕ್ಷೇಮನಿಧಿ ಸ್ಥಾಪಿಸುವ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಒಟ್ಟಾರೆ ಅಡಿಕೆ ಬೆಳೆಗಾರಸ್ನೇಹಿಯಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ನಾವು ಕಂಕಣಬದ್ಧರಾಗಿದ್ದೇವೆ ಎಂದರು.
ಷೇರುದಾರರಿಗೆ ವಿಳಂಬವಿಲ್ಲದೇ ಸಾಲ ಸೌಲಭ್ಯ ಒದಗಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ, ಜನಪರ ನೀಡಿ ಅಳವಡಿಸಿಕೊಳ್ಳಲಾಗಿದೆ. ನವೀಕೃತ ಮುಖ್ಯ ಕಚೇರಿ ಆರಂಭಿಸಲಾಗಿದೆ. ಆಪ್ಸ್ಕೋಸ್ ಕೃಷಿ ವಿಭಾಗ ಆರಂಭಿಸಲಾಗಿದೆ. ಯಶಸ್ವಿಯಾಗಿ ಸುವರ್ಣ ಮಹೋತ್ಸವ ಆಚರಿಸಿ ಹಿರಿಯರನ್ನು ಗೌರವಿಸಲಾಗಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗಿದೆ. ಮರಣ ಹೊಂದಿದ ಸದಸ್ಯರ ಕುಟುಂಬ ವರ್ಗದವರಿಗೆ ಶೀಘ್ರ 5 ಸಾವಿರ ರೂ. ನೆರವು ನೀಡಲಾಗಿದೆ. ಇನ್ನೂ ಹಲವಾರು ಸಾಧನೆಗಳನ್ನು ಮಾಡಿ ಸಂಸ್ಥೆಯ ಘನತೆ ಗೌರವವನ್ನು ಹೆಚ್ಚಿಸಿದ್ದೇವೆ ಎಂದರು.


ಮಳೆಗಾಲದ ಸಮಯದಲ್ಲಿ ಬೆಳೆಗಾರರ ಅಡಿಕೆ ಇರುವುದು ಕಡಿಮೆ. ಶೇ. 90 ರಷ್ಟು ಅಡಿಕೆ ಬೇಸಿಗೆಯಲ್ಲಿ ಮಾರಾಟವಾಗುತ್ತದೆ. ಆದರೂ ಬಂದ ಹೆಚ್ಚುವರಿ ಅಡಿಕೆಯನ್ನು ಸಂಸ್ಥೆಗೆ ಸೇರಿಸಿ ಲಾಭದ ಅಂಶವನ್ನು ಡಿವಿಡೆಂಡ್ ಮೂಲಕ ಸದಸ್ಯರಿಗೆ ಕೊಡುತ್ತೇವೆ. ಸುವರ್ಣ ಮಹೋತ್ಸವ ನೆನಪಿನ 2500/- ರೂ. ಪ್ರೋತ್ಸಾಹಧನದ ಕೂಪನ್‌ನ್ನು ಅಡಿಕೆ ಹಾಕಿದ ಎಲ್ಲ ಸದಸ್ಯರಿಗೆ ನೀಡಿದ್ದೇವೆ. ತಾಂತ್ರಿಕ ಕಾರಣದಿಂದ ಕಚೇರಿ ನವೀಕೃತ ಕಟ್ಟಡವನ್ನು ಪೀಸ್ ವರ್ಕ್ ಮೂಲಕ ನಿರ್ವಹಿಸಲಾಗಿದೆ ಎಂದವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.


1971 ರ ದಶಕದಲ್ಲಿ ಅಡಿಕೆ ಬೆಲೆ ಕುಸಿದಾಗ ಬೆಳೆಗಾರರು ಕಂಗಾಲಾಗಿದ್ದ ಪರಿಸ್ಥಿತಿಯಲ್ಲಿ ಹಿರಿಯರು ಈ ಸಂಸ್ಥೆಯನ್ನು ಆರಂಭಿಸಿದರು. 1990 ರ ದಶಕದಲ್ಲಿ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅನುಭವಿ ಆಸಕ್ತ ಯುವಕರು ಒಗ್ಗೂಡಿ ಈ ಸಂಸ್ಥೆಯ ಪುನರ್ ನಿರ್ಮಾಣದಲ್ಲಿ ತೊಡಗಿಕೊಂಡರು. ಈ ತಂಡವು ಹಣ ಮತ್ತು ಹೆಸರು ಎರಡರಲ್ಲೂ ನಷ್ಟಕ್ಕೆ ಬಿದ್ದಿದ್ದ ಆಪ್ಸ್ಕೋಸ್ ಸಂಸ್ಥೆಯನ್ನು ಇಂದು ಸುಮಾರು 5 ಕೋಟಿ ಲಾಭದಲ್ಲಿ ಮುನ್ನಡೆಸುತ್ತಿದ್ದು, ಸಂಸ್ಥೆಯಲ್ಲಿ ಭದ್ರತೆ ತರುವುದರ ಜತೆ ಸದಸ್ಯರಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.


ಅಭ್ಯರ್ಥಿಗಳೂ, ನಿರ್ದೇಶಕರೂ ಆದ ಕೆ.ಎಸ್.ಸುಬ್ಬರಾವ್, ಕಲ್ಯಾಣಪ್ಪ ಗೌಡ, ಇಂದೂಧರ ಬಿ.ಎ., ಎಚ್.ಕೆ.ರಾಘವೇಂದ್ರ, ಸತ್ಯನಾರಾಯಣ ಕೆಳದಿ, ಈಳಿ ಸುರೇಶ್, ಟಿ.ಆರ್.ಕೃಷ್ಣಮೂರ್ತಿ, ಕೆ.ಆರ್,ವೆಂಕಟರಾವ್, ಬಿ.ಗುರುಪಾದ ಹಾಜರಿದ್ದರು.

ಹಾಲಿ ಅಧ್ಯಕ್ಷರ ತಂಡದ ಭವಿಷ್ಯದ ಗ್ಯಾರಂಟಿ ಯೋಜನೆಗಳು :

  • ಕೃಷಿ ಅಗತ್ಯ ವಸ್ತುಗಳ ಮಾರಾಟ ಕೇಂದ್ರವನ್ನು ಆಪ್ಸ್ಕೋಸ್ ಶಾಖೆಗಳಲ್ಲೂ ಆರಂಭ ಮಾಡುವುದು.
  • ಜೋಗ ರಸ್ತೆಯಲ್ಲಿ ಸಂಸೆಯ ಬೃಹತ್ ನಿವೇಶನದಲ್ಲಿ ಕಟ್ಟಡ ನಿರ್ಮಿಸಿ, ಕೃಷಿ ವಿಭಾಗ ಮಾರಾಟ ಮಳಿಗೆಯನ್ನು ಸ್ಥಳಾಂತರಿಸುವುದು.
  • ಸಂಸ್ಥೆಯಿಂದ ಸಾಗರದಲ್ಲಿ ವಿಶೇಷವಾದ ಸೂಪರ್ ಮಾರ್ಕೆಟ್ ಆರಂಭಿಸುವುದು.
  • ಸಾಗರದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಿತ ಗೋದಾಮುಗಳ ನಿರ್ಮಾಣ ಹಾಗೂ ಸುಸಜ್ಜಿತ ವ್ಯಾಪಾರ ಪ್ರಾಂಗಣ ನಿರ್ಮಿಸುವುದು.
  • ಹೊಸನಗರ ಹಾಗೂ ನಿಟ್ಟೂರುಗಳಲ್ಲಿ ಅವಶ್ಯಕ ಗೋದಾಮುಗಳ ನಿರ್ಮಾಣ.
  • ತುಮರಿ ಶಾಖೆಯಲ್ಲಿ ಆಡಳತ ನಿರ್ವಹಣೆಗೆ ಸ್ವಂತ ಕಟ್ಟಡ ನಿರ್ಮಾಣ.
  • ಸಂಘದ ಷೇರುದಾರರಿಗೆ ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡುವುದು.
  • ಷೇರುದಾರರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಾಲ ಸೌಲಭ್ಯ ನೀಡುವುದು.
  • ಸಂಸ್ಥೆಗೆ ಅಡಿಕೆ ಆವಕವನ್ನು ಹೆಚ್ಚಿಸುವುದು.
  • ವಿದ್ಯುತ್ ಸ್ವಾವಲಂಬಿ ನೀತಿಯ ಅಳವಡಿಕೆ ಮಾಡಿ, ರೂಫ್‌ಟಾಪ್ ಸೋಲಾರ್ ವಿದ್ಯುತ್ ಮೂಲಕ ಕೇಂದ್ರ ಕಚೇರಿ ವಿದ್ಯುತ್ ನಿರ್ವಹಣೆ ಮಾಡುವುದು.
  • ಸದಸ್ಯರ ಆರೋಗ್ಯಕ್ಕಾಗಿ ಕ್ಷೇಮನಿಧಿ ಸ್ಥಾಪಿಸುವುದು.
Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

15 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

19 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

19 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

22 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

22 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago