ಗೋವಿನ ಚರ್ಮ ಸಾಗಾಟ ತಡೆದ ವ್ಯಕ್ತಿ ಮೇಲೆ ಪೊಲೀಸ್ ಠಾಣೆ ಎದುರೇ ಹಲ್ಲೆ !

0 0

ಶಿಕಾರಿಪುರ : ಗೋವಿನ ಚರ್ಮ ಸಾಗಾಟ ತಡೆದ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಪೊಲೀಸ್ ಠಾಣೆ ಎದುರೇ ಹಲ್ಲೆ ನಡೆಸಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ.

ಅಕ್ರಮವಾಗಿ ಗೋವುಗಳ ಚರ್ಮ ಸಾಗಿಸುತ್ತಿದ್ದ ವಿಚಾರ ತಿಳಿದ ಗುಂಪೊಂದು ಅದನ್ನು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿದೆ. ಈ ವಿಚಾರವಾಗಿ ಯುವಕರ ಮತ್ತೊಂದು ತಂಡ ಪೊಲೀಸರ ಎದುರೇ ಹಲ್ಲೆ ನಡೆಸಿದೆ.

ಬಕ್ರೀದ್ ಹಬ್ಬದ ಪ್ರಯುಕ್ತ ಗೋವನ್ನು ಹತ್ಯೆ ಮಾಡಿ ಅದರ ಚರ್ಮವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಗುಂಪೊಂದು ಅದನ್ನು ತಡೆದು ಶಿಕಾರಿಪುರ ಠಾಣಾ ಪೊಲೀಸರ ವಶಕ್ಕೆ ನೀಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯ ಗುಂಪೊಂದು ಪೊಲೀಸ್ ಠಾಣೆ ಎದುರು ಜಮಾಯಿಸಿ ಅಕ್ರಮ ಸಾಗಾಟ ತಡೆದ ಗುಂಪಿನ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.

Leave A Reply

Your email address will not be published.

error: Content is protected !!