‘ಚಿಣ್ಣ ಬಣ್ಣ’ ಮಕ್ಕಳಿಗಾಗಿ ಬೇಸಿಗೆ ರಂಗ ಶಿಬಿರ

ಶಿಕಾರಿಪುರ : ಆಧುನಿಕತೆಯ ಜೀವನದಲ್ಲಿ ಮಕ್ಕಳಿಗೆ ಮೊಬೈಲ್ ಘೀಳು  ಹೆಚ್ಚಾಗಿದ್ದು, ಇದರಿಂದಾಗಿ ನಮ್ಮ ದೇಶದಲ್ಲಿನ ಸಾಹಿತ್ಯ, ಜಾನಪದ ಕಲೆ, ಸಂಸ್ಕೃತಿ, ನಾಟಕ ಗ್ರಾಮೀಣ ಕ್ರೀಡೆಗಳು ಅವನತಿಯ ಹಾದಿ ಹಿಡಿಯುತ್ತಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರಾದ ನಾವು ಈಗಿನ ಪೀಳಿಗೆಗೆ ಇದನ್ನ ಪರಿಚಯಿಸಬೇಕು. ಹೀಗಾಗಿ  ತಾಲ್ಲೂಕಿನ ಗುಡಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರದಿಂದ ಮಕ್ಕಳಿಗಾಗಿ ಚಿಣ್ಣ ಬಣ್ಣ ಕಾರ್ಯಕ್ರಮದಡಿ ಬೇಸಿಗೆ ರಂಗ ಶಿಬಿರ ಏರ್ಪಡಿಸಲಾಗಿದ್ದು ಆಸಕ್ತರು ಕೂಡಲೆ ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬೇಕು ಎಂದು ಗುಡಿ ಸಂಸ್ಕೃತಿ ವೇದಿಕೆಯ ಸಂಸ್ಥಾಪಕ ಇಕ್ಬಾಲ್ ಅಹ್ಮದ್ ಕರೆ ನೀಡಿದರು. 

ಸೋಮವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಇದೇ ಏ. 10 ರಿಂದ 30 ರವರೆಗೆ ಪಟ್ಟಣದ ಪೌರವಿಹಾರದ ಮುಂಭಾಗದ ಕೆ ಹೆಚ್ ಬಿ ಲೇಔಟ್ ಬಳಿ ಇರುವ ಗುಡಿ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ 06 ರಿಂದ 17 ವರ್ಷದ ಮಕ್ಕಳಿಗಾಗಿ ಗುಡಿ ಸಂತೆ ಎಂಬ ಕಾರ್ಯಕ್ರಮವನ್ನು 21 ದಿನಗಳವರೆಗೆ ಬೆಳಗ್ಗೆ 9 – 00 ಗಂಟೆಯಿಂದ ಸಂಜೆ 5 – 00 ಗಂಟೆವರೆಗೆ ಶಿಬಿರಗಳು  ಏರ್ಪಡಿಸಲಾಗಿದ್ದು, ಇಲ್ಲಿ ಚಿಣ್ಣರಿಗಾಗಿ ರಂಗಭೂಮಿಯ ಅಭಿನಯ, ರಂಗಾಟುಗಳು, ಯಕ್ಷಗಾನ, ಮೂಕಾಭಿನಯ,  ರಂಗಗೀತೆಗಳು,ಕರಕುಶಲ ತಯಾರಿಕೆ ಜಾನಪದ ಹಾಡು ಮತ್ತು ನೃತ್ಯ, ಬರಿಗಣ್ಣಿನಿಂದ  ಆಕಾಶ ವೀಕ್ಷಣೆ ಸೇರಿದಂತೆ ಹಲವು  ಮಕ್ಕಳಿಂದ ತಯಾರಾದ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಸಲಾಗುವುದು ಎಂದರು. 

ಗುಡಿ ಸಾಂಸ್ಕೃತಿಕ ಕೇಂದ್ರದಿಂದ ಕಳೆದ ಚಿಕ್ಕಮಕ್ಕಳಿಗಾಗಿ ಪ್ರತೀ ವರ್ಷ ಶಿಬಿರ ನಡಸಲಾಗುತ್ತಿದ್ದು, ಇದು16 ನೇ ವರ್ಷದ French ಶಿಬಿರವಾಗಿದೆ. ಇದರಲ್ಲಿ ನೀ ನಾ ಸಂ ನ ಕಲಾವಿದರು, ವಿವಿಧ ಕಲೆಗಳ ಬಗ್ಗೆ ಹಿರಿಯ ತರಭೇತಿದಾರರು ತರಭೇತಿ ನೀಡಲಿದ್ದಾರಲ್ಲದೇ, ಮಣ್ಣಿನಿಂದ ವಿವಿಧ ರೀತಿಯ ಗೊಂಬೆಗಳ ತಯಾರಿಕೆ, ಚಿತ್ರಕಲೆ, ಗಾಯನ ತರಬೇತಿ ಹೀಗೆ ಹಲವು ರೀತಿಯ ಕಲೆಯನ್ನು ಕಲಿಸಲಾಗುತ್ತದೆ. ಕೊರೋನ ಹಿನ್ನೇಲೆಯಿಂದ ಎರಡು ವರ್ಷಗಳ ಕಾಲ ಸ್ಥಗಿತ ಗೊಳಿಸಲಾಗಿತ್ತು. ಈ ಹಿಂದೆ ನಮ್ಮ ಕೇಂದ್ರದಲ್ಲಿಯೇ ಶಿಬಿರಾರ್ಥಿಗಳಿಗೆ ತಿಂಡಿ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು ಆದರೆ, ಆಹಾರವನ್ನು ಹಂಚಿತಿನ್ನುವ ಪದ್ಧತಿಯನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಈ ವರ್ಷದಿಂದ ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಪೋಷಕರೇ ವಿಶೇಷ ರೀತಿಯ ಖಾದ್ಯಗಳನ್ನು ತಯಾರಿಸಿ ತಂದು ಮಕ್ಳಳಿಗೆ ಹಂಚಿ ತಿನ್ನುವ ಅವಕಾಶ ಕಲ್ಪಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ  ಮೊಬೈಲ್ ಸಂಖೆ 8073169825, 9019518738, 9739489730, 8495823749 ಇವುಗಳಿಗೆ ಸಂಪರ್ಕಿಸಬೇಕೆಂದು ತಿಳಿಸಿದರು.

ಗೋಷ್ಠಿಯಲ್ಲಿ ಗುಡಿ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಕೆ ಎಸ್ ಹುಚ್ರಾಯಪ್ಪ, ಶಿಬಿರದ ಉಸ್ತುವಾರಿ ನಾಗರಾಜ್ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!