ಪತ್ರಿಕೆಗಳಲ್ಲಿನ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವೆ ; ಬಿ.ವೈ. ವಿಜಯೇಂದ್ರ

0 5

ಶಿಕಾರಿಪುರ : ನಾನು  ರಾಜಕೀಯ ಜೀವನದಲ್ಲಿ ಅಂಬೆಗಾಲಿಡುತ್ತಿದ್ದು, ಮತದಾರರ ಆಶಿರ್ವಾದದಿಂದ ಅವರ ಆಶಯದಂತೆ ತಾಲ್ಲೂಕಿನ ಅಭಿವೃದ್ಧಿಗೆ ಪೂರಕವಾಗಿ ಚಿಂತನೆ ನಡೆಸಿ ಸರಿಯಾದ ದಾರಿಯಲ್ಲಿ ಹೆಜ್ಜೆ‌ಹಾಕಲು ಪ್ರಯತ್ನಿಸುತ್ತೇನೆ. ಈ  ಸಮಯದಲ್ಲಿ ಏನಾದರೂ ತಪ್ಪುಗಳು ನಡೆದು, ರಾಜಕೀಯ‌ವಾಗಿ ನಡೆಯುವಾಗ ಏನಾದರೂ ಲೋಪದೋಷಗಳು ತಿಳಿದು ಪತ್ರಿಕೆಗಳಲ್ಲಿ ಪತ್ರಕರ್ತರ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ತಾಲ್ಲೂಕಿನ ಶಾಸಕ ಬಿ ವೈ ವಿಜಯೇಂದ್ರರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸುದ್ಧಿಮನೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಶಿಕಾರಿಪುರ ಶಾಖೆಯಿಂದ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರಿಗೆ ಜನ್ಮ ನೀಡಿದ ಪುಣ್ಯಭೂಮಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಬೂಕನಕೆರೆಯಾದರೆ, ಅವರನ್ನು ಶಾಸಕರನ್ನಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ ರಾಜ್ಯದ ಮುಖ್ಯಮಂತ್ರಿಯಾಗಿಸಿ  ರಾಷ್ಟ್ರ ಮಟ್ಟದಲ್ಲಿ ರಾಜಕೀಯವಾಗಿ ಗುರುತಿಸಿ ಕೊಳ್ಳುವಂತೆ ಮಾಡಿದ್ದು ನಿಮ್ಮಂತಹ ಪತ್ರಕರ್ತರು. ಅದೇರೀತಿ ನಾನೂ ಕೂಡ ರಾಜಕೀಯ ಜೀವನದಲ್ಲಿ, ತಾಲ್ಲೂಕಿನ ಅಭಿವೃದ್ಧಿಯ ವಿಚಾರದಲ್ಲೇನಾದರೂ ಎಡವಿದರೆ ಅದನ್ನು ಎತ್ತಿ ಹಿಡಿದು ನಿಮ್ಮ ಬರವಣಿಗೆ ಮೂಲಕ ಟೀಕೆ ಟಪ್ಪಣಿ ಮಾಡಿದರೆ ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಕೊರೋನ ಸಂದರ್ಭದಲ್ಲಿ ಪತ್ರಕರ್ತರನ್ನು ಗುರುತಿಸಿ ಗೌರವಿಸಿದ್ದಾರೆ. ಆ ಸಮಯದಲ್ಲಿ ದುರ್ಘಟನೆಗೆ ಸಾವನ್ನಪ್ಪಿದ ರಾಜ್ಯದ  ಸುಮಾರು 80 ಜನರ ಕುಟುಂಬಕ್ಕೆ 5 ಲಕ್ಷದವರೆಗೆ ಸಹಾಯಧನ ನೀಡಿದರು ಎಂದು ಸ್ಮರಿಸಿದ ಅವರು, ಯಡಿಯೂರಪ್ಪರವರು ವಿಧಾನಸಭೆಯೊಳಗೆ ಯಾವುದೇ ವಿಷಯದ ಬಗ್ಗೆ ಚರ್ಚಿಸಬೇಕು ಅಥವಾ ಅದನ್ನು ಮಂಡನೆ  ಮಾಡಬೇಕೆಂದರೆ ಅಲ್ಲಿನ ಹಾರ್ನಳ್ಳಿ ರಾಮಸ್ವಾಮಿಯಾದಿಯಾಗಿ ಅನೇಕ ಹಿರಿಯ ಪತ್ರಕರ್ತರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುತ್ತಿದ್ದರು. ನಾನು ಇದೇ ಪ್ರಥಮವಾಗಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಆದರೂ ಆಡಳಿತ ಪಕ್ಷದವ ನಾಗಿರದಿದ್ದರೆ ಜನತೆಯ ಸಮಸ್ಯಗಳನ್ನು ಅರಿಯಲು ಆಗುತ್ತಿರಲಿಲ್ಲವೇನೊ ಎಂದ ಅವರು, ರಾಜಕೀಯವಾಗಿ ಅಂಬೆಗಾಲಿಡುತ್ತಿದ್ದರೂ ಈ ಹಿಂದೆ ಬಿಜೆಪಿ ರಾಜ್ಯ ಉಪಾದ್ಯಕ್ಷನಾಗಿ ರಾಜ್ಯದ ಉದ್ದಗಲಕ್ಕೂ ಓಡಾಡಿರುವುದರಿಂದ ಹಾಗೂ  ಬಿ ಎಸ್ ಯಡಿಯೂರಪ್ಪರವರ ಪುತ್ರನೆಂದು ನನ್ನನ್ನು ರಾಜ್ಯದ ಜನತೆ ಗುರುತಿಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಸಂಘದ ಉಪಾಧ್ಯಕ್ಷ ವೈದ್ಯರವರು ಮಾತನಾಡಿ, ಹಿಂದೆ ಮಳೆಯೊಡೆದು ಪತ್ರಿಕೆಗಳನ್ನು ಮುದ್ರಿಸಲಾಗುತ್ತೀತ್ತು, ಆದರೆ ಆಧುನಿಕ ವಿದ್ಯಾಮಾನದ ಭರಟೆಯಲ್ಲಿ ಅವೆಲ್ಲವೂ ಅಳಿದು ಹೋಗೀವೆ. ವರದಿಗಳನ್ನು ಸಂಗ್ರಹಿಸಿ ಫೋಟೊವನ್ನು ಶುದ್ಧಗೊಳಿಸಿ ಪ್ರಿಂಟ್ ಹಾಕಿಸಿ ಸುದ್ಧಿಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗಲು ಮೂರು ದಿನವಾಗುತ್ತಿತ್ತು. ಆದರೀಗ ವರದಿ ಮತ್ತು  ಫೋಟೋಗಳನ್ನ ಮೂರೇ ಸೆಕೆಂಡುಗಳಲ್ಲಿ ಪ್ರಕಟ ಮಾಡಬಹುದು. ಇದರಿಂದಾಗಿ ಮುದ್ರಣ ಮಾಧ್ಯಮ ತೀರ ಸಂಕಷ್ಟದಲ್ಲದೆ ಎಂದು ವಿಷಾದ ವ್ಯಕ್ತಪಡಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ ಎಸ್ ಹುಚ್ರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನ ಕಾರ್ಯನಿರತ  ಪತ್ರಕರ್ತರ ಸಂಘ ಬೆಳೆದು ಬಂದ ದಾರಿ, ಭವನದ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.

ಅದ್ಯಕ್ಷೀಯ ನುಡಿನ್ನಾಡಿದ ಚಂದ್ರಶೇಖರ್ ಮಠದ್, ಆಧುನಿಕ ತಂತ್ರಜ್ಞಾನದ ಸುದ್ಧಿಗಳು ಎಷ್ಟು ವೇಗವಾಗಿ ಹರಡುತ್ತಿದೆಯೋ ಅಷ್ಟೇ ವೇಗವಾಗಿ ಅಪಾಯಕರಿಯಾಗಿದೆ. ಇದರಿಂದಾಗಿ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗದಂತಹಾ ಸುದ್ಧಿಗಳು ಅತಿವೇಗವಾಗಿ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟವಾಗಿ ಜನರಿಗೆ ವಿಷಯ ತಲುಪುತ್ತಿದೆ. ಉದಾಹರಣೆಯಾಗಿ ಇತ್ತೀಚೆಗಷ್ಟೇ ಮಣಿಪುರದ ಘಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ಶಾಖೆಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಜಪ್ಪ ನಿರೂಪಣೆ ನಡೆಸಿದರೆ, ಸ್ವಾಗತ ಸಂಘದ ಸದಸ್ಯ ರಘು ನಿರ್ಮಿತ್ ನಡೆಸಿದರು, ಪ್ರಾರ್ಥನೆಯನ್ನು ಸಹ ಕಾರ್ಯದರ್ಶಿ ರಾಜಾರಾವ್ ಎಂ ಜಾಧವ್ ನಡೆಸಿದರು. ಜಿಲ್ಲಾಸಂಘದ ಸಹಕಾರ್ಯದರ್ಶಿ ಹಾಲ್ ಸ್ವಾಮಿ, ನಾಗೇಶ್ ನಾಯ್ಕ್, ದೀಪಕ್ ಸಾಗರ್, ತಾಲ್ಲೂಕು ಸಂಘದ ಸಂಸ್ಥಾಪಕರಾದ ವೇಣುಗೋಪಾಲ್, ಟ್ರಸ್ಟ್ ಅದ್ಯಕ್ಷ ಇ ಹೆಚ್  ಬಸವರಾಜ್, ಮಾಜಿ ಅದ್ಯಕ್ಷ ಹೆಚ್ ಆರ್ ರಾಘವೇಂದ್ರ, ಹಾಲಿ ಉಪಾಧ್ಯಕ್ಷರಾದ ಕೋಟೇಶ್ವರ, ನವಿನ್ ಕುಮಾರ್, ಮಾಜಿ ಕಾರ್ಯದರ್ಶಿ ಹಾಗೂ ಕಸಾಪ ತಾಲ್ಲೂಕು ಅದ್ಯಕ್ಷ ಹೆಚ್ ಎಸ್ ರಘು, ಸಂಘದ ಸದಸ್ಯರಾದ ಕಾಳಿಂಗರಾವ್, ಹೆಚ್ ಕೆ ಪ್ರಕಾಶ್, ಸ್ಟುಡಿಯೊ ಪ್ರಕಾಶ್, ಐ ಎಫ್ ಮಳಗಿ, ಅರುಣ್ ಎಸ್ ಬಿ, ಅರುಣ್ ಕುಮಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪತ್ರಿಕಾರಂಗದಲ್ಲಿ ಅದರದ್ದೇ ಆದಂತಹ ಜವಾಬ್ದಾರಿಗಳಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕಾರಂಗವು ನಾಲ್ಕನೆ ಅಂಗವಾಗಿದ್ದು ಇದನ್ನು ಗೌರವಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಪತ್ರಿಕಾರಂಗದ ಪತ್ರಕರ್ತರನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಪತ್ರಕರ್ತರಿಗೆ ಗೌರವ ಕೊಟ್ಟರೆ ನನಗೆ ಅನುಕೂಲವಾಗುವುದು ಎಂಬ ಭಾವನೆ ಅವರಲ್ಲಿರಲ್ಲಿಲ್ಲ. ಅವರು ರಾಜ್ಯದ ಅಭಿವೃದ್ಧಿಯ ವಿಚಾರವಾಗಿ ದೆಹಲಿಗೆ ಹೋದಾಗ ಅಲ್ಲಿನ ಪತ್ರಕರ್ತರು ಯಡಿಯೂರಪ್ಪರವರಿಗೆ ಇಂಟರ್ವ್ಯೂವ್ ಮಾಡಿ ಮುಗಿಸಿದಾಗ ಮಧ್ಯಾಹ್ನ ಭೋಜನದ ಸಮಯವಾಗಿತ್ತು. ಭೋಜನಕ್ಕೆ ಕರೆದರೆ ಆ ಪತ್ರಕರ್ತರ್ಯಾರೂ ಊಟಕ್ಕೆ ಬರಲಿಲ್ಲ ಏಕೆಂದರೆ ಅಲ್ಲಿನ ಊಟವು ಹೆಚ್ಚಿನ ಹಣ ವ್ಯಯವಾಗುವುದು ಎಂದು ಅರಿತ ಅಲ್ಲಿನ ಪತ್ರಕರ್ತರು ಯಾರೂ ಊಟಕ್ಕೆ ಬರದೆ ರಸ್ತೆ ಪಕ್ಕದಲ್ಲಿರುವ ಕ್ಯಾಂಟೀನ್ ಗಳಲ್ಲಿ ಊಟ ಮಾಡುತ್ತಿದ್ದರು ಇದನ್ನು ಗಮನಿಸಿದ ಯಡಿಯೂರಪ್ಪರವರು, ಆ ಕೂಡಲೆ ರಾಜ್ಯಕ್ಕೆ ಬಂದು ದೆಹಲಿಯ ಕರ್ನಾಟಕ ಭವನದಲ್ಲಿ ಅಲ್ಲಿನ ಪತ್ರಕರ್ತರಿಗೆ ತಿಂಡಿ ಹಾಗೂ ಮಧ್ಯಾಹ್ನದ ಭೋಜನವನ್ನು ಸಬ್ಸಿಡಿ ವ್ಯವಸ್ಥೆಯಲ್ಲಿ ನೀಡಬೇಕು ಎಂದು ಯಡಿಯೂರಪ್ಪ ಆದೇಶ ಮಾಡಿದ್ದರು.
– ಬಿ.ವೈ. ವಿಜಯೇಂದ್ರ, ಶಾಸಕ

Leave A Reply

Your email address will not be published.

error: Content is protected !!