ಮದ್ಯ ಸೇವಿಸಿ ಅಡ್ಡಾದಿಡ್ಡಿ ಕ್ಯಾಂಟರ್ ಚಲಾಯಿಸುತ್ತಿದ್ದ ಡ್ರೈವರ್ ಪೊಲೀಸರ ವಶಕ್ಕೆ

0 229

ಶಿಕಾರಿಪುರ: ಅತಿಯಾದ ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕ್ಯಾಂಟರ್ ಚಲಾಯಿಸುತ್ತಿದ್ದ ಚಾಲಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶಿರಾಳಕೊಪ್ಪದಲ್ಲಿ ಮಂಗಳವಾರ ನಡೆದಿದೆ.

ಅತಿಯಾದ ಮದ್ಯ ಸೇವಿಸಿದ್ದ ಶಿವಮೊಗ್ಗದ ಇಫ್ರಾನ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು‌ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿರಾಳಕೊಪ್ಪ ಬಸ್ ನಿಲ್ದಾಣ‌ವೃತ್ತ, ಉಡುಗಣಿ ರಸ್ತೆಯಲ್ಲಿ‌ ಸಾರ್ವಜನಿಕರು ಭಯಪಡುವ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದನು. ಇದನ್ನು ಕಂಡು ಸಾರ್ವಜನಿಕರೇ ವಾಹನವನ್ನು ತಡೆದು‌ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Leave A Reply

Your email address will not be published.

error: Content is protected !!