ವಿರೋಧ ವ್ಯಕ್ತಪಡಿಸಿದವರೇ ಈಗ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ, ಇದು ಎಷ್ಟು ಸರಿ ; ಭಂಡಾರಿ ಮಾಲತೇಶ್

ಶಿಕಾರಿಪುರ : ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ರವರು ಆಧಾರ್ ಕಾರ್ಡ್ ಜಾರಿಗೆ ತರಲು ಇಂದಿನ ಕೇಂದ್ರ ಬಿಜೆಪಿ ಪಕ್ಷದ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಅವರೇ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಇದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು.

ಇಂದು ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ರವರು ದೇಶದ ಎಲ್ಲಾ ಜನತೆಯೂ ಅವರ ನಿಖರ ಮಾಹಿತಿಗಾಗಿ ಆಧಾರ್ ಕಾರ್ಡ್ ಜಾರಿಗೆ ತಂದು ಎಲ್ಲರಿಗೂ ಉಚಿತ ಆಧಾರ್ ಕಾರ್ಡ್ ಮಾಡಿಸಲು ಮುಂದಾಗಿದ್ದಾಗ, ಈಗಿನ ಕೇಂದ್ರ ಸರ್ಕಾರದ ಬಿಜೆಪಿ ಪಕ್ಷದವರು ಅದನ್ನು ವಿರೋಧಿಸಲು ಯತ್ನಿಸಿದ್ದರು. ಆದರೀಗ ಅವರೇ ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಜೋಡಣೆಗೆ ಹೆಚ್ಚು ಒಲವು ತೋರಿದ್ದಾರಲ್ಲದೇ, ಒಂದು ಆಧಾರ್ ಕಾರ್ಡ್‌ಗೆ ಪ್ಯಾನ್ ಕಾರ್ಡ್ ಜೋಡಣೆಗೆ ಒಂದು ಸಾವಿರ ರೂಪಾಯಿ ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ. ದೇಶದಲ್ಲಿ 15 ರಿಂದ 20 ಕೋಟಿ ಜನರು ಪ್ಯಾನ್ ಕಾರ್ಡ್ ಹೊಂದಿದ್ದಾರೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 2 ಲಕ್ಷ ಕೋಟಿ ರೂಪಾಯಿ ಆದಾಯವಾಗಲಿದ್ದು, ಕೇಂದ್ರ ಬಿಜೆಪಿ ಪಕ್ಷದ ಸರ್ಕಾರ ಹಗಲು ದರೋಡೆಗೆ ಯತ್ನಿಸುತ್ತಿದ್ದಾರೆ. ಈಗಾಗಲೇ ಅನೇಕ ರೀತಿಯಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ ಈ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಜೋಡಣೆಯಿಂದ ದೇಶದ ಜನತೆಗೆ ಹೆಚ್ಚಿನ ಹೊರೆಯಾಗಿದೆ.ಇದನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು. 

ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಈಗಾಗಲೇ 22 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಲಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದೇ ಒಂದು ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಸಾಧಿಸಲಿದ್ದಾರೆ. ಅದೇರೀತಿ ನಮ್ಮ ಶಿಕಾರಿಪುರದಲ್ಲೂ ಕೇವಲ ನಾಮಪತ್ರ ಸಲ್ಲಿಸಿ ಬೇರೆಡೆಗೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರೆ ನಾವು ಶಿಕಾರಿಪುರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಅವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವದ ರದ್ದತಿಯ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ದೇಶದಲ್ಲಿ ನೀರವ್ ಮೋದಿಯಂತಹ ಕೆಲವು ಮೋದಿಯವರು ದೇಶದ ಹಣವನ್ನು ಲೂಟಿ ಮಾಡಿದ್ದಾರೆ ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ ಇದನ್ನೇ‌ ದೊಡ್ಡ ಅಪರಾಧ ಎಂದು ನ್ಯಾಯಾಲಯದಲ್ಲಿ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ಬಿಜೆಪಿ ಪಕ್ಷದ ರಾಜ್ಯ ಸಚಿವ ಅಶ್ವತ್ ನಾರಾಯಣ ರವರು ಸಿದ್ದರಾಮಯ್ಯ ರವರಿಗೆ ಹೊಡೆದು ಹಾಕಬೇಕು ಎಂದು ಹೇಳಿದಾಗ ಅವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ. ನಳೀನ್ ಕುಮಾರ್, ಬಸವರಾಜ್ ಪಾಟೀಲ್, ಈಶ್ವರಪ್ಪ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ನಮ್ಮ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಹರಿಹಾಯುತ್ತಿದ್ದಾರೆ ಅಂಥವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ತಾಲ್ಲೂಕಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ತಂದು ನೀರಾವರಿ ಮಾಡಿರುವುದಾಗಿ ಹೇಳುತ್ತಿರುವ ಸಂಸದರು ಮತ್ತು ಶಾಸಕರು ಕಳೆದ ನಲವತ್ತು ವರ್ಷಗಳಿಂದ ತಾಲ್ಲೂಕಿನ ಜನತೇಯ ಆಶೀರ್ವಾದ ಪಡೆದ ನೀವು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರವಿದ್ದಾಗ ತಾಲ್ಲೂಕಿನ ಸನ್ಯಾಸಿಕೊಪ್ಪದಲ್ಲಿ ಏತ ನೀರಾವರಿಗೆ ಚಾಲನೆ ನೀಡಿ ಹಣ ಬಿಡುಗಡೆ ಮಾಡಲಾಗಿತ್ತು. ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿರವರಿಂದ 300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈಗ ಈ ಯೋಜನೆ ಬಿಎಸ್‌ವೈ ಕೊಡುಗೆ ಎಂದು ಜನತೆಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.  

 ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಡಗಿ ಪಾಲಾಕ್ಷಪ್ಪ, ಚರಣ್ ಬನ್ನೂರು, ಸಂದೀಪ್,  ಇಂಮ್ರಾನ್, ರೇಣುಕ್ ಸ್ವಾಮಿ, ರಾಘವೇಂದ್ರ ಜೋಗಿಹಳ್ಳಿ, ಶಫಿಯುಲ್ಲ, ಅರುಣ್ ಕುಮಾರ್ ಸೇರಿದಂತೆ ಅನೇಕರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!